ಜೈಸಲ್ಮೇರ್: ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ (Spying for Pakistan) ನಡೆಸುತ್ತಿದ್ದ ಆರೋಪದ ಮೇರೆಗೆ 30 ವರ್ಷದ ಶಂಕಿತ ವ್ಯಕ್ತಿಯನ್ನು ರಾಜಸ್ಥಾನದ (Rajasthan) ಜೈಸಲ್ಮೇರ್‌ನಲ್ಲಿ (Jaisalmer) ಬಂಧಿಸಲಾಗಿದೆ. ಇದು ಜೈಸಲ್ಮೇರ್ ನಲ್ಲಿ ಬೆಳಕಿಗೆ ಬಂದಿರುವ ನಾಲ್ಕನೇ ಪ್ರಕರಣವಾಗಿದೆ. ಅನುಮಾನಾಸ್ಪದ ಚಟುವಟಿಕೆಗೆ ಮೊಬೈಲ್ ಬಳಕೆಯನ್ನು ಪರಿಶೀಲಿಸಿದ ಬಳಿಕ ಮಿಲಿಟರಿ ಗುಪ್ತಚರ ಸಿಬ್ಬಂದಿ ಸಂಕಡ ಪ್ರದೇಶದ ನಿವಾಸಿ ಜೀವನ್ ಖಾನ್ ಎಂಬಾತನನ್ನು ಮಿಲಿಟರಿ ಗುಪ್ತಚರ (Military intelligence) ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಯನ್ನು ಕೊಟ್ವಾಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಜೈಸಲ್ಮೇರ್‌ನ ಮಿಲಿಟರಿ ಪ್ರದೇಶದೊಳಗಿನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂಕಡ ಪ್ರದೇಶದ ನಿವಾಸಿ ಜೀವನ್ ಖಾನ್ (30) ಎಂಬಾತನನ್ನು ಆಗಸ್ಟ್ 19 ರಂದು ಬಂಧಿಸಲಾಗಿದೆ. ಸೇನಾ ಠಾಣೆಗೆ ಮರಳಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಆತನನ್ನು ಗೇಟ್‌ನಲ್ಲಿ ತಡೆಹಿಡಿದು ತನಿಖೆ ನಡೆಸಿದ ಬಳಿಕ ಬಂಧಿಸಲಾಯಿತು.
ಅನುಮಾನಾಸ್ಪದ ಚಟುವಟಿಕೆಗೆ ಆತನ ಮೊಬೈಲ್ ಬಳಕೆಯಾಗಿರುವುದನ್ನು ಪರಿಶೀಲಿಸಿದ ಅನಂತರ ಖಾನ್ ಅನ್ನು ಮಿಲಿಟರಿ ಗುಪ್ತಚರ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಮಂಗಳವಾರ ರಾತ್ರಿ ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಖಾನ್ ಪಾಕಿಸ್ತಾನದಲ್ಲಿ ಸಂಬಂಧಿಕರನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಖಾನ್ ನನ್ನು ಜಂಟಿ ವಿಚಾರಣಾ ಕೇಂದ್ರ (ಜೆಐಸಿ) ಮುಂದೆ ಹಾಜರುಪಡಿಸಲಾಗುವುದು. ಅಲ್ಲಿ ಹಲವಾರು ಭದ್ರತಾ ಸಂಸ್ಥೆಗಳು ಆತನನ್ನು ಮತ್ತಷ್ಟು ಪ್ರಶ್ನಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Asia Cup: ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ನೀಡದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಮದನ್ ಲಾಲ್!
ಜೈಸಲ್ಮೇರ್‌ನಲ್ಲಿ ಇದು ನಾಲ್ಕನೇ ಪ್ರಕರಣವಾಗಿದೆ. ಇದಕ್ಕೂ ಮೊದಲು ಆಗಸ್ಟ್ 13 ರಂದು ಚಂದನ್ ಫೀಲ್ಡ್ ಫೈರಿಂಗ್ ರೇಂಜ್ ಬಳಿಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅತಿಥಿ ಗೃಹದ ಗುತ್ತಿಗೆ ವ್ಯವಸ್ಥಾಪಕನನ್ನು ಬಂಧಿಸಲಾಗಿತ್ತು.