ಬೆಂಗಳೂರು : ಬೆಂಗಳೂರಿನಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ (Physical Abuse) ಪ್ರಕರಣದಲ್ಲಿ ಯೋಗ ಗುರು (Yoga guru) ನಿರಂಜನಾ ಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿ ಪೋಕ್ಸೋ ಕೇಸ್ (POCSO case) ಹಾಕಿದ್ದಾರೆ. ಬೆಂಗಳೂರಿನ (Bengaluru crime news) ರಾಜರಾಜೇಶ್ವರಿ ನಗರದಲ್ಲಿ ಯೋಗ ಸೆಂಟರ್ ನಡೆಸುತ್ತಿದ್ದ ನಿರಂಜನಾ ಮೂರ್ತಿ ಎಂಬಾತ ಯೋಗ ಕ್ಲಾಸ್‌ಗೆ ಸೇರಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದಲ್ಲದೆ ಆರೋಪಿ ನಿರಂಜನ ಮೂರ್ತಿ ಇನ್ನೂ ಏಳೆಂಟು ಮಹಿಳೆಯರ ಮೇಲೂ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬಾಲಕಿಯರಿಗೂ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ. ಬಾಲಕಿಯೊಬ್ಬಳ ದೂರಿನ ಅನ್ವಯ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ರಾಜರಾಜೇಶ್ವರಿ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.
ಯೋಗ ಗುರು ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದ. ನಿಮಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ ಮಾಡುತ್ತೇನೆ. ನಿಮಗೆ ಆದರಿಂದ ಸರ್ಕಾರಿ ಕೆಲಸವು ಸಿಗಬಹುದು ಎಂದು ನಂಬಿಸಿ, ಯೋಗ ಸೆಂಟರ್ಗೆ ಬರುತ್ತಿದ್ದ ಯುವತಿಯರು ಸೇರಿದಂತೆ ಸುಮಾರು ಏಳೆಂಟು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ. ಕೇಸ್ ದಾಖಲಾಗುತ್ತಿದ್ದಂತೆ ಇತ್ತ ಆರೋಪಿ ತಲೆಮರಿಸಿಕೊಂಡಿದ್ದ. ಸದ್ಯ ಪೊಲೀಸರು ಹುಡುಕಿ ಆತನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಅತ್ಯಾಚಾರ ಎಸಗಿರುವುದು ಬಯಲಾಗಿದೆ.
ಬಾವಿಗೆ ಹಾರಿ ಮಗಳು ಆತ್ಮಹತ್ಯೆ, ರಕ್ಷಿಸಲು ಹೋದ ತಾಯಿಯೂ ಸಾವು
ಕಲಬುರಗಿ : ಮದುವೆ ವಿಚಾರಕ್ಕೆ ಸಂಭವಿಸಿದ ಗಲಾಟೆಯಿಂದ ನೊಂದ ಮಗಳು ಬಾವಿಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಈ ವೇಳೆ ಆಕೆಯನ್ನು ರಕ್ಷಿಸಲು ಹೋದ ತಾಯಿಯೂ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ತಾಯಿ ಜಗದೇವಿ (47), ಪುತ್ರಿ ಮಧುಮತಿ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮಧುಮತಿ ಮದುವೆ ವಿಷಯಕ್ಕೆ ಕುಟುಂಬದಲ್ಲಿ ಜಗಳ ನಡೆದಿತ್ತು. ಮದುವೆ ವಿಷಯಕ್ಕೆ ಗಲಾಟೆಯಾಗಿ ಮಧುಮತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳನ್ನು ರಕ್ಷಿಸಲು ಹೋಗಿ ತಾಯಿಯೂ ಬಾವಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಕೃತಿಯ ಪರಾಕಾಷ್ಠೆ; ಬೀದಿ ನಾಯಿಯ ಕೊಂದು ಕಣ್ಣಗುಡ್ಡೆ ಕಿತ್ತು ಅದರಲ್ಲಿ ಆಟವಾಡಿದ ಪಾಪಿ