ವಿಕೃತಿಯ ಪರಾಕಾಷ್ಠೆ; ಬೀದಿ ನಾಯಿಯ ಕೊಂದು ಕಣ್ಣಗುಡ್ಡೆ ಕಿತ್ತು ಅದರಲ್ಲಿ ಆಟವಾಡಿದ ಪಾಪಿ
Crime News: ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕೊಂದು ಕಣ್ಣನ್ನು ಕಿತ್ತು ಅದರಲ್ಲಿ ಆಟವಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈಯಲ್ಲಿ ನಡೆದಿದೆ. ಸದ್ಯ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಂಬೈಯ ಹೊರವಲಯದಲ್ಲಿ ಕಂಡುಬಂದ ಈ ಘಟನೆಗೆ ಭಾರತವೇ ಬೆಚ್ಚಿ ಬಿದ್ದಿದೆ.

-

ಮುಂಬೈ: ನೀವು ಇದುವರೆಗೆ ಊಹಿಸಿಯೂ ಇರದ ವಿಕೃತಿಯ ಪರಾಕಾಷ್ಠೆಯೊಂದು ಜರಗಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ. ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕೊಂದು ಕಣ್ಣನ್ನು ಕಿತ್ತು ಅದರಲ್ಲಿ ಆಟವಾಡಿದ್ದಾನೆ! ಮಹಾರಾಷ್ಟ್ರದ ಮುಂಬೈಯಲ್ಲಿ ಈ ಘಟನೆ ನಡೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಂಬೈಯ ಹೊರವಲಯದಲ್ಲಿ ಕಂಡುಬಂದ ಈ ಘಟನೆಗೆ ಭಾರತವೇ ನಡುಗಿದೆ (Crime News). ಸದ್ಯ ಈ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Viral News) ವ್ಯಾಪಕ ಚರ್ಚೆ ನಡೆಯುತ್ತಿದೆ.
ನಾಯಿಯನ್ನು ಕೊಂದು ಕಿತ್ತ ಅದರ ಕಣ್ಣಿನ ಪೈಕಿ ಒಂದರ ಜತೆ ಆ ವ್ಯಕ್ತಿ ರಸ್ತೆಯಲ್ಲಿ ಆಟವಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 16) ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Stray Dogs: 2 ಬಾರಿ ಕಚ್ಚುವ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ! ಏನಿದು ಹೊಸ ಆದೇಶ?
ಘಟನೆ ವಿವರ
ನಡೆದುಕೊಂಡು ಹೋಗುತ್ತಿದ್ದ ಆತನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿತು. ಇದರಿಂದ ರೊಚ್ಚಿಗೆದ್ದ ಆತ ಅದನ್ನು ಕೊಂದು ಕಣ್ಣಗಳನ್ನು ಕಿತ್ತಿದ್ದಾನೆ. ಬಳಿಕ ಆ ಕಣ್ಣುಗಳ ಪೈಕಿ ಒಂದನ್ನು ಗೋಲಿ ರೀತಿ ಹಿಡಿದುಕೊಂಡು ರಸ್ತೆಯಲ್ಲಿ ಆಟವಾಡಿದ್ದಾನೆ. ಈ ವಿಕೃತ ಕೃತ್ಯವನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ಆಘಾತಕಾರಿ ಘಟನೆ ಕುರಿತಾದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ವ್ಯಕ್ತಿ ರಸ್ತೆ ಬದಿಯಲ್ಲಿ ಆರಾಮವಾಗಿ ಕುಳಿತು ನಾಯಿಯ ಕಣ್ಣಿನ ಜತೆ ಆಟವಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆತನ ಪಕ್ಕದಲ್ಲೇ ನಾಯಿಯ ಶವವೂ ಇದೆ. ಪ್ರಾಣಿ ದಯಾ ಸಂಘಟನೆಯ ಸದಸ್ಯರು ಪೊಲೀಸ್ ಠಾಣೆಗೆ ಧಾವಿಸಿ ಆತನ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಜತೆಗೆ ಆತನ ಮಾಸಕಿಕ ಆರೋಗ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.
ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತ (Bharatiya Nyaya Sanhita-BNS)ದ ಸೆಕ್ಷನ್ 325 ಅಡಿ ದೂರು ದಾಖಲಿಸಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಚ್ಚಿಬಿದ್ದ ದೇಶ
ಸದ್ಯ ಈ ಸುದ್ದಿ ತಿಳಿದು ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ʼʼಕೆಲವು ಸಿನಿಮಾಗಳಲ್ಲಿ ಇಂತಹ ವಿಕೃತಿಗಳನ್ನು ನೋಡಿದ್ದೆವು. ನಿಜವಾಗಿಯೂ ಇಂತಹವರು ಇರುತ್ತಾರೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲʼʼ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ʼʼವಿಡಿಯೊ ನೋಡಿಲ್ಲ. ಸುದ್ದಿ ಕೇಳಿಯೇ ಆಘಾತವಾಯ್ತು. ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕುʼʼ ಎಂದು ಒಬ್ಬರು ಆಗ್ರಹಿಸಿದ್ದಾರೆ. ʼʼಈತನನ್ನು ಸುಮ್ಮನೆ ಬಿಟ್ಟರೆ ಖಂಡಿತವಾಗಿಯೂ ಮುಂದೊಂದು ದಿನ ಸಮಾಜಕ್ಕೆ ಮಾರಕವಾಗುತ್ತಾನೆ. ಹೀಗಾಗಿ ಆತನನ್ನು ಬಂಧಿಸಿ ಮಾನಸಿಕ ತಜ್ಞರಿಂದ ಚಿಕಿತ್ಸೆ ನೀಡಲಬೇಕುʼʼ ಎನ್ನುವುದು ಬಹುತೇಕ ನೆಟ್ಟಿಗರ ಅಭಿಪ್ರಾಯ. ʼʼನಾಯಿ ಆಕ್ರಮಣ ಮಾಡಲು ಬಂದರೆ ಅದನ್ನು ಬೆದರಿಸಿ ದೂರ ಅಟ್ಟಬೇಕು. ಈ ರೀತಿ ಮಾಡುವುದನ್ನು ಯಾವ ಕಾರಣಕ್ಕೂ ಕ್ಷಮಿಸಲಾಗದುʼʼ ಎನ್ನುವುದು ಬಹುತೇಕರ ಮನದಾಳ.