ತ್ರಿಪುರಾ: ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ನಡೆದಿರುವ ಘಟನೆ ಅಸ್ಸಾಂನ (Assam) ಗುವಾಹಟಿಯಲ್ಲಿ (Guwahati) ನಡೆದಿದೆ. ವಿಶ್ವವಿದ್ಯಾಲಯದಲ್ಲಿ (Guwahati University) ಓದುತ್ತಿದ್ದ ಮಣಿಪುರ ಮೂಲದ ಐವರು ವಿದ್ಯಾರ್ಥಿಗಳು ಅದೇ ವಿವಿಯ ತ್ರಿಪುರಾದ (Tripura) 21 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಘಟನೆ ಸೆಪ್ಟೆಂಬರ್ 13 ರಂದು ಮನೆಯೊಂದರಲ್ಲಿ ನಡೆಸಿದ ಪಾರ್ಟಿ ವೇಳೆ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಕರಾಗಿರುವ ಐವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರನ್ನು ವಿಚಾರಣೆ ನಡೆಸಲಾಗಿದೆ.
ಗುವಾಹಟಿಯ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅದೇ ವಿವಿಯಲ್ಲಿ ಓದುತ್ತಿದ್ದ ಮಣಿಪುರ ಮೂಲದ ಐವರು ವಿದ್ಯಾರ್ಥಿಗಳು ಸೆಪ್ಟೆಂಬರ್ 13 ರಂದು ಮನೆಯೊಂದರಲ್ಲಿ ನಡೆಸಿದ ಪಾರ್ಟಿ ವೇಳೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಾಡಿಗೆ ಫ್ಲಾಟ್ ನಲ್ಲಿ ಈ ಘಟನೆ ನಡೆದಿದ್ದು, ಈ ಆಸ್ತಿ ಯಾರಿಗೆ ಸೇರಿದ್ದು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನಲ್ಲಿ ವಿವಿಯ ಹಲವಾರು ವಿದ್ಯಾರ್ಥಿಗಳು ಸೇರಿ ಖಾಸಗಿ ಕಟ್ಟಡದ ಏಳನೇ ಮಹಡಿಯಲ್ಲಿ ಪಾರ್ಟಿ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾಳೆ. ಪಾರ್ಟಿಯ ಬಳಿಕ ಮದ್ಯದ ಅಮಲಿನಲ್ಲಿದ್ದ ತಾನು ಕೋಣೆಗೆ ಹೋಗಿದ್ದು, ಈ ಸಂದರ್ಭದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಮರುದಿನ ಬೆಳಗ್ಗೆ ಎದ್ದ ಮೇಲೆಯೇ ತನ್ನ ಮೇಲೆ ಏನಾಗಿದೆ ಎಂಬುದರ ಅರಿವಾಗಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಈ ಕುರಿತು ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ (ಪೂರ್ವ ಗುವಾಹಟಿ) ಅಮಿತಾವ್ ಬಸುಮತರಿ, ಗುವಾಹಟಿಯ ಪಾನಿ ಖೈಟಿ ಹೊರಠಾಣೆಗೆ ಮಂಗಳವಾರ ಯುವತಿ ದೂರು ನೀಡಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಇದನ್ನೂ ಓದಿ: Viral Video: ಅಬ್ಬಾ..ಇದೆಂಥಾ ಕ್ರೇಜ್? ಐಫೋನ್ 17 ಖರೀದಿ ವೇಳೆ ಗ್ರಾಹಕರ ಬಿಗ್ ಫೈಟ್! ವಿಡಿಯೊ ವೈರಲ್
ಆರೋಪಿಗಳೆಲ್ಲರನ್ನೂ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 125/25 ರ ಅಡಿಯಲ್ಲಿ ಪ್ರಗ್ಜ್ಯೋತಿಷ್‌ಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 70(1) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.