ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy murder Case) ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆಳತಿ, ನಟಿ ಪವಿತ್ರಾ ಗೌಡ (Pavithra Gowda) ಅವರಿಗೆ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್‌ನಿಂದ (Supreme court) ತೀರ್ಪು ಬಂದ ಬಳಿಕ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ಪವಿತ್ರ ಗೌಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆದಿದ್ದು, ವಾದವಿವಾದದ ಬಳಿಕ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಹೈಕೋರ್ಟ್‌ನಲ್ಲಿ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ ಪವಿತ್ರಾ ಗೌಡ, ದರ್ಶನ್ ಸೇರಿ 7 ಜನ ಆರೋಪಿಗಳ ಜಾಮೀನು ಕ್ಯಾನ್ಸಲ್ ಮಾಡಿ ತಕ್ಷಣ ಬಂಧಿಸುವಂತೆ ಆದೇಶ ನೀಡಿತ್ತು. ಆಗಸ್ಟ್ 14ರಂದು ಪವಿತ್ರಾ ಗೌಡ ಮತ್ತೆ ಜೈಲು ಸೇರಿದ್ದರು.
ಜಾಮೀನಿನ ಮೇಲೆ ಹೊರಬಂದಿದ್ದ ಪವಿತ್ರಾ ಗೌಡ ರೆಡ್ ಕಾರ್ಪೆಟ್ ಬ್ಯುಸಿನೆಸ್ ಮತ್ತೆ ಶುರು ಮಾಡಿದ್ದರು. ಇನ್ನೇನು ಉದ್ಯಮ ಚಿಗುರಿಕೊಳ್ಳಬೇಕು ಅನ್ನುವಷ್ಟರಲ್ಲಿ ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಪವಿತ್ರ ಗೌಡಗೆ ಜಾಮೀನು ನೀಡುವಂತೆ ಹಿರಿಯ ವಕೀಲ ಬಾಲನ್ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ನಡೆದಿತ್ತು. Crpc ಮತ್ತು BNS ಇರುವ ವ್ಯತ್ಯಾಸದ ಬಗ್ಗೆ ವಾದ ಮಾಡಿದ್ದ ಬಾಲನ್ ಅವರು ಪ್ರಾಸಿಕ್ಯೂಷನ್ crpc ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ, Bns ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಿತ್ತು ಎಂದು ಬಾಲನ್ ವಾದಿಸಿದ್ದರು.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. IPC ಅಡಿಯಲ್ಲಿ ಸೆಕ್ಷನ್ ದಾಖಲು ಮಾಡಿದ್ದರು. ವಿಚಾರಣೆ ಮತ್ತು ಚಾರ್ಜ್ ಶೀಟ್ crpc ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದು ವಕೀಲರು ವಾದ ಮಾಡಿದ್ದರು. Crpc 173 ಈಗ ಅಮಾನ್ಯವಾಗಿದೆ. Bns ಬಂದ ಬಳಿಕ ಹಳೆ ಸೆಕ್ಷನ್‌ಗಳು ಇಲ್ಲ. ಹಳೆಯ ಕಾಯ್ದೆ ಅಡಿಯಲ್ಲಿ ಕೋರ್ಟ್ ಚಾರ್ಜ್ ಶೀಟ್ ಪರಿಗಣಿಸಿದ್ದು ಸರಿಯಲ್ಲ. ಅಸ್ತಿತ್ವದಲ್ಲಿ ಇಲ್ಲದ ಸಿಆರ್ ಪಿಸಿ ಕಾಯ್ದೆಯಡಿ ಜೈಲಿಗೆ ರಿಮ್ಯಾಂಡ್ ನೀಡಿದ್ದು ಸರಿಯಲ್ಲ. ಐಪಿಸಿ ಅಡಿ ಕೇಸ್ ದಾಖಲಾಗಿದ್ದರೂ ಬಿಎನ್ ಎಸ್ ಅಡಿಯಲ್ಲಿ ತನಿಖೆ ನಡೆಯಬೇಕು. ಜುಲೈ 1 2024 ರಿಂದ ಯಾವುದೇ ಅರ್ಜಿ ಬಿಎನ್ ಎಸ್ ಎಸ್ ಅಡಿ ಸಲ್ಲಿಸಬೇಕು ಎಂದು ಅವರು ವಾದಿಸಿದ್ದರು.
ಆರೋಪಪಟ್ಟಿ ಹಾಗೂ ಕಾಗ್ನಿಜೆನ್ಸ್ ಕಾನೂನು ಬದ್ದವಾಗಿಲ್ಲ. ಬಿಎನ್ ಎಸ್ ಬದಲು ಸಿ ಆರ್ ಪಿ ಸಿ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ ಎಂದು ಪಂಜಾಬ್, ಹರಿಯಾಣ ಹೈಕೋರ್ಟ್ ಉಲ್ಲೇಖಿಸಿ ವಾದ ಮಾಡಿದ್ದರು. ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಪ್ರಶ್ನಿಸುತ್ತಿಲ್ಲ. ತಾಂತ್ರಿಕ ಲೋಪ ಇರುವ ಕಾರಣ ಜಾಮೀನು ನೀಡುವಂತೆ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ: Actor Darshan: ಜೈಲಿನಲ್ಲಿ ಬೋಳು ತಲೆ, ಸುಕ್ಕುಗಟ್ಟಿದ ಮುಖದೊಂದಿಗೆ ದಾಸನ ʼದರ್ಶನʼ, ನಗುಮೊಗದಲ್ಲಿ ಪವಿತ್ರಾ ಗೌಡ!