ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Robbery case: ನಿವೃತ್ತ ಪೊಲೀಸ್‌ ಅಧಿಕಾರಿಯನ್ನೇ ದೋಚಿದ ಮೂವರ ಬಂಧನ

Bengaluru: ಕೆಲದಿನಗಳ ಹಿಂದೆ ಹೆಬ್ಬಾಳದ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ನಿವೃತ್ತ ಅಧಿಕಾರಿ ಸುಬ್ಬಣ್ಣ ಎಂದಿನಂತೆ ಮಾರ್ನಿಂಗ್ ವಾಕಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಾಸ್ಕ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದರು. ಚಾಕು ತೋರಿಸಿ ಕತ್ತಿನಲ್ಲಿದ್ದ ಸರ ಕಸಿದುಕೊಂಡಿದ್ದರು.

ಬೆಂಗಳೂರು: ಬೆಂಗಳೂರಿನಲ್ಲಿ ತಮ್ಮಷ್ಟಕ್ಕೇ ವಾಕಿಂಗ್‌ (walking) ಮಾಡುವುದು ಕೂಡ ಸಂಕಷ್ಟ ಎಂಬಂತಾಗಿದೆ. ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ (Retired officer) ಒಬ್ಬರು ವಾಕಿಂಗ್‌ ಮಾಡುತ್ತಿದ್ದಾಗಲೇ ದರೋಡೆಗೆ (Robbery case) ತುತ್ತಾಗಿದ್ದಾರೆ. ಪ್ರತಿನಿತ್ಯ ವಾಕಿಂಗ್​​ಗೆ ಹೋಗುತ್ತಿದ್ದ ಜಾಗದಲ್ಲೇ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಚಿನ್ನಾಭರಣ ಕಳೆದುಕೊಂಡಿದ್ದು, ದರೋಡೆಕೋರರನ್ನು ಇದೀಗ ಪೊಲೀಸರು (Bengaluru police) ಹೆಡೆಮುರಿ (arrest) ಕಟ್ಟಿದ್ದಾರೆ.

ಕೆಲದಿನಗಳ ಹಿಂದೆ ಹೆಬ್ಬಾಳದ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ನಿವೃತ್ತ ಅಧಿಕಾರಿ ಸುಬ್ಬಣ್ಣ ಎಂದಿನಂತೆ ಮಾರ್ನಿಂಗ್ ವಾಕಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಾಸ್ಕ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದರು. ಚಾಕು ತೋರಿಸಿ ಕತ್ತಿನಲ್ಲಿದ್ದ ಸರ ಕಸಿದುಕೊಂಡಿದ್ದರು. ಇವರ ದಾಳಿ ತಡೆಯಲು ಮುಂದಾದ ಸುಬ್ಬಣ್ಣ ಕೈಗೆ ಚಾಕುವಿನಿಂದ ಹಲ್ಲೆ ಕೂಡ ಮಾಡಿದ್ದಾರೆ. ಬಳಿಕ ಕೈಯಲ್ಲಿದ್ದ ಚಿನ್ನದ ಬ್ರೇಸ್​ ಲೇಟ್​ ಕಿತ್ಕೊಂಡು ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗಿದ್ದರು. ನಂತರ ಸುಬ್ಬಣ್ಣ ಸಂಜಯ್ ನಗರ ಪೊಲೀಸ್ ಠಾಣೆಗೆ ರಾಬರಿ ಬಗ್ಗೆ ದೂರು ನೀಡಿದ್ದರು. ಪೊಲೀಸರು ಸಾಕಷ್ಟು ತಲಾಶ್‌ ಬಳಿಕ ಡಿಜೆ ಹಳ್ಳಿಯ ಮೂವರು ರಾಬರ್‌ಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂದಿತರನ್ನು ಮೊಹಮ್ಮದ್ ಸಲ್ಮಾನ್, ಮೋಸೀನ್, ಮೊಹಮ್ಮದ್ ಇರ್ಫಾನ್ ಎಂದು ಗುರುತಿಸಲಾಗಿದೆ. ಒಂದೇ ಏರಿಯಾದ ಈ ಮೂವರಲ್ಲಿ ಮೋಸಿನ್ ಮತ್ತು ಇರ್ಫಾನ್ ರಾಬರಿ ಮಾಡಿದರೆ, ಸಲ್ಮಾನ್ ತಾನು ಕದ್ದ ಬೈಕ್​ನಲ್ಲಿ ಇನ್ನಿಬ್ಬರಿಗೆ ಸಹಾಯ ಮಾಡಿದ್ದ. ಹೀಗಾಗಿ ಮೂರು ಜನರನ್ನು ಬಂಧಿಸಿರುವ ಸಂಜಯ್ ನಗರ ಪೊಲೀಸರು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ನಾಲ್ಕಾರು ಸುಲಿಗೆ, ರಾಬರಿ ಕೇಸ್‌ಗಳು ವರದಿಯಾಗುತ್ತಿದ್ದು, ಕಳೆದ ಒಂದು ತಿಂಗಳಲ್ಲಿ 100ಕ್ಕೂ ಹೆಚ್ಚು ಸುಲಿಗೆ, ರಾಬರಿ ಕೇಸ್​ಗಳು ದಾಖಲಾಗಿವೆ. ಮಾರಕಾಸ್ತ್ರಗಳನ್ನು ತೋರಿಸಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ. ಖಾಕಿ ಪಡೆ ಎಷ್ಟೇ ಅಲರ್ಟ್ ಆಗಿದ್ದರೂ, ಎಷ್ಟೇ ಆರೆಸ್ಟ್ ಮಾಡಿದರೂ ಕ್ರಿಮಿನಲ್‌ಗಳ ಸಂಖ್ಯೆ ಅದಕ್ಕಿಂತ ಹೆಚ್ಚಿದೆ.

ಇದನ್ನೂ ಓದಿ: Physical Abuse: ಮದುವೆಯಾಗುವುದಾಗಿ ನಂಬಿಸಿ ವಕೀಲೆಗೆ ಅತ್ಯಾಚಾರ, ಕಾನ್‌ಸ್ಟೇಬಲ್‌ ಸೆರೆ

ಹರೀಶ್‌ ಕೇರ

View all posts by this author