ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming Case: ಸೂಸೈಡ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌- ಮನೆಯೊಡತಿಯ ಅಕ್ರಮ ಸಂಬಂಧಕ್ಕೆ ಬಲಿಯಾಯ್ತಾ ನಾಲ್ಕು ಜೀವ?

ಬಾಲ್ಯದ ಸ್ನೇಹಿತನೊಂದಿಗೆ ಪತಿ ಸಂಬಂಧ ಹೊಂದಿದ್ದರಿಂದ ಪತಿ ತನ್ನ ಇಬ್ಬರು ಮಕ್ಕಳು ಮತ್ತು ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿತ್ತು. ಈ ಪ್ರಕರಣವನ್ನು ಬೇಧಿಸಿದ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

ಸಾಗರ್: ಅತ್ತೆ, ಪತಿ ಮತ್ತು ಇಬ್ಬರು ಮಕ್ಕಳು ಸೇರಿ ಒಟ್ಟು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ (Self Harming) ಸಂಬಂಧಿಸಿ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು (Woman, lover arrested) ಬಂಧಿಸಲಾಗಿದೆ. ಮಧ್ಯಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ ( Sagar district) ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದ್ರೌಪದಿ ಮನೋಹರ್ ಮತ್ತು ಆಕೆಯ ಪ್ರಿಯಕರ ಸುರೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 25ರಂದು ರಾತ್ರಿ ದ್ರೌಪದಿ ಮನೋಹರ್ ಪತಿ ಮನೋಹರ್ ಲೋಧಿ (45), ಅತ್ತೆ ಫೂಲ್ರಾಣಿ (70), 18 ಮತ್ತು 16 ವರ್ಷದ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮನೋಹರ್ ಲೋಧಿ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಪೊಲೀಸರು ಮನೋಹರ್ ಲೋಧಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಜುಲೈ 25ರಂದು ರಾತ್ರಿ ಮನೋಹರ್ ಲೋಧಿ, ಅವರ ತಾಯಿ ಫೂಲ್ರಾಣಿ, ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿದ ಸಾಗರ್ ನ ಪೊಲೀಸರು ತನಿಖೆಯ ಸಮಯದಲ್ಲಿ ಮನೋಹರ್ ಲೋಧಿ ಅವರ ಪತ್ನಿ ದ್ರೌಪದಿ, ಮನೋಹರ್ ಅವರ ಬಾಲ್ಯದ ಸ್ನೇಹಿತ ಸುರೇಂದ್ರ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಪತ್ತೆ ಹಚ್ಚಿದ್ದಾರೆ. ದ್ರೌಪದಿ ಮಗಳು ತನ್ನ ತಾಯಿ ಸುರೇಂದ್ರನ ಜೊತೆ ಏಕಾಂತದಲ್ಲಿ ಇದ್ದುದ್ದನ್ನು ನೋಡಿ ತಂದೆಗೆ ತಿಳಿಸಿದ್ದು, ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಕುಟುಂಬದವರು ದ್ರೌಪದಿಯೊಂದಿಗೆ ಮಾತನಾಡಲು ಪ್ರಯತ್ನಿಸಿದರು ಮತ್ತು ಸುರೇಂದ್ರನ ಜೊತೆ ಸಂಬಂಧವನ್ನು ಕೊನೆಗೊಳಿಸುವಂತೆ ಕೇಳಿಕೊಂಡರು. ಆದರೆ ಆಕೆ ತಾನು ಸುರೇಂದ್ರ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಳು. ಒಂದು ವೇಳೆ ನನಗೆ ಒತ್ತಡ ಹಾಕಿದರೆ ವರದಕ್ಷಿಣೆ ಕಾನೂನಿನ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದಳು.

ಇದನ್ನೂ ಓದಿ: Shashi Tharoor: ಕೊಹ್ಲಿ, ತಂಡಕ್ಕೆ ನಿಮ್ಮ ಅವಶ್ಯಕತೆ ಇದೆ; ಶಶಿ ತರೂರ್

ಈ ಕುರಿತು ಸುರೇಂದ್ರನನ್ನು ಸಂಪರ್ಕಿಸಿದ ಮನೋಹರ್ ಆತನಲ್ಲಿ ಸಂಬಂಧವನ್ನು ಕೊನೆಗೊಳಿಸುವಂತೆ ಮನವಿ ಮಾಡಿದರು. ಆದರೆ ಆತ ಕೂಡ ನಿರಾಕರಿಸಿದ್ದಾನೆ. ಮನೆಯಲ್ಲಿ ಪದೇ ಪದೇ ಬೆದರಿಕೆ, ಉದ್ವಿಗ್ನತೆಯಿಂದಾಗಿ ಕುಟುಂಬವು ಮುರಿದುಬೀಳುವ ಹಂತಕ್ಕೆ ತಲುಪಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಪೊಲೀಸರು ಮನೋಹರ್ ಪತ್ನಿ ದ್ರೌಪದಿ ಮತ್ತು ಆಕೆಯ ಗೆಳೆಯ ಸುರೇಂದ್ರ ನನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author