ಲಂಡನ್: ಬೇರೆ ದೇಶಗಳಲ್ಲಿ ಭಾರತೀಯರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದೌರ್ಜನ್ಯಗಳ ನಡುವೆ ಭಾರತೀಯ ಮಹಿಳೆಯ ಮೇಲೆ ನಡೆದ ಅತ್ಯಾಚಾರ (Physical Assault) ಆತಂಕ ಮೂಡಿಸಿದೆ. ಇಂಗ್ಲೆಂಡಿನ ಓಲ್ಡ್‌ಬರಿ ಪಟ್ಟಣದಲ್ಲಿ ಇಪ್ಪತ್ತರ ಹರೆಯದ ಸಿಖ್ ಮಹಿಳೆಯೊಬ್ಬರ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿ ಜನಾಂಗೀಯ ನಿಂದನೆ ಮಾಡಿದ್ದಾರೆ. ಬಳಿಕ ಆಕೆ ಮೇಲೆ ಹಲ್ಲೆ ನಡೆಸಿ ನೀನು ಈ ದೇಶವನ್ನು ಬಿಟ್ಟು ನಿನ್ನ ದೇಶಕ್ಕೆ ತೊಲಗು ಎಂದು ಆಕೆಗೆ ಬೆದರಿಕೆ ಹಾಕಲಾಗಿದೆ. ಕಳೆದ ಮಂಗಳವಾರ ಬೆಳಿಗ್ಗೆ 8:30 ರ ಸುಮಾರಿಗೆ ಓಲ್ಡ್‌ಬರಿಯ ಟೇಮ್ ರಸ್ತೆಯ ಬಳಿ ಈ ಘಟನೆ ಸಂಭವಿಸಿದೆ.
ಸದ್ಯ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರನ್ನು ಪತ್ತೆಹಚ್ಚಲು ಸಹಾಯಕ್ಕಾಗಿ ಕೋರಿದ್ದಾರೆ. ದಾಳಿಕೋರರು ಜನಾಂಗೀಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮಹಿಳೆ ನಮಗೆ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ, ಸಿಸಿಟಿವಿ ಮತ್ತು ವಿಧಿವಿಜ್ಞಾನ ವಿಚಾರಣೆಗಳು ನಡೆಯುತ್ತಿವೆ ಎಂದು ಹೇಳಿದರು. ಒಬ್ಬ ತಲೆ ಬೋಳಿಸಿಕೊಂಡು ಗಾಢ ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದ. ಇನ್ನೊಬ್ಬ ಮತ್ತೊಬ್ಬ ಶಂಕಿತ ಬೂದು ಬಣ್ಣದ ಟಾಪ್ ಧರಿಸಿದ್ದ ಎಂದು ಮಹಿಳೆ ಹೇಳಿದ್ದಾಳೆ.
ಈ ಘಟನೆಯು ಸ್ಥಳೀಯ ಸಿಖ್ ಸಮುದಾಯವನ್ನು ಕೆರಳಿಸಿದೆ. ಬ್ರಿಟಿಷ್ ಸಂಸದೆ ಪ್ರೀತ್ ಕೌರ್ ಗಿಲ್ ಈ ಘಟನೆಯನ್ನು ಖಂಡಿಸಿದರು ಮತ್ತು ಇತ್ತೀಚಿನ ದಿನಗಳಲ್ಲಿ "ಬಹಿರಂಗ ಜನಾಂಗೀಯತೆ" ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಎಂದು ಹೇಳಿದರು. ನಮ್ಮ ಸಿಖ್ ಸಮುದಾಯ ಮತ್ತು ಪ್ರತಿಯೊಂದು ಸಮುದಾಯಕ್ಕೂ ಸುರಕ್ಷಿತ, ಗೌರವಾನ್ವಿತ ಮತ್ತು ಮೌಲ್ಯಯುತ ಭಾವನೆ ಹೊಂದುವ ಹಕ್ಕಿದೆ. ಓಲ್ಡ್‌ಬರಿಯಲ್ಲಿ ಅಥವಾ ಬ್ರಿಟನ್‌ನಲ್ಲಿ ಎಲ್ಲಿಯೂ ಜನಾಂಗೀಯತೆ ಮತ್ತು ಸ್ತ್ರೀದ್ವೇಷಕ್ಕೆ ಸ್ಥಾನವಿಲ್ಲ" ಎಂದು ಬರ್ಮಿಂಗ್‌ಹ್ಯಾಮ್ ಎಡ್ಜ್‌ಬಾಸ್ಟನ್‌ನ ಶಾಸಕರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Malayalam Rapper : ಖ್ಯಾತ ಮಲಯಾಳಂ ರ‍್ಯಾಪ್ ಸ್ಟಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಇಲ್ಫೋರ್ಡ್ ಸೌತ್‌ನ ಮತ್ತೊಬ್ಬ ಸಂಸದ ಜಾಸ್ ಅಥ್ವಾಲ್ ಇದನ್ನು "ನೀಚ, ಜನಾಂಗೀಯ, ಸ್ತ್ರೀದ್ವೇಷಿ ದಾಳಿ" ಎಂದು ಕರೆದರು, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಈ ದಾಳಿಯು ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಉದ್ವಿಗ್ನತೆಯ ಪರಿಣಾಮವಾಗಿದೆ ಮತ್ತು ಈಗ, ಒಬ್ಬ ಯುವತಿಯು ಜೀವನಪರ್ಯಂತ ಆಘಾತಕ್ಕೊಳಗಾಗಿದ್ದಾಳೆ ಈ ಕುರಿತು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಒಂದು ತಿಂಗಳ ಹಿಂದೆ ವೊಲ್ವರ್‌ಹ್ಯಾಂಪ್ಟನ್‌ನ ರೈಲ್ವೆ ನಿಲ್ದಾಣದ ಹೊರಗೆ ಮೂವರು ಹದಿಹರೆಯದವರು ಇಬ್ಬರು ವೃದ್ಧ ಸಿಖ್ ಪುರುಷರ ಮೇಲೆ ಹಲ್ಲೆ ನಡೆಸಿದ ನಂತರ ಈ ಘಟನೆ ನಡೆದಿದೆ. ಆ ಹುಡುಗರು ಅವರನ್ನು ಕಾಲಿನಿಂದ ಒದ್ದು, ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು.