ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Woman Murdered: ಪ್ರಾಣವನ್ನೇ ಕಸಿದ ಪ್ರೀತಿ! ಪ್ರೇಯಸಿಯನ್ನು ಬರ್ಬರವಾಗಿ ಕೊಂದ ಭಗ್ನ ಪ್ರೇಮಿ

Woman Murdered: ರಾಜಸ್ಥಾನದ ಬನ್ಸ್‌ವಾರಾ ಜಿಲ್ಲೆಯಲ್ಲಿ ಮಾಜಿ ಪ್ರಿಯಕರನೊಬ್ಬ ಶಿಕ್ಷಕಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹತ್ಯೆ ನಡೆದಾಗ ಶಿಕ್ಷಕಿ ಕಲಿಂಜರಾ ಪಟ್ಟಣದ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಾ ಕುಳಿತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬನ್ಸ್‌ವಾರಾ: ರಾಜಸ್ಥಾನದ (Rajasthan) ಬನ್ಸ್‌ವಾರಾ ಜಿಲ್ಲೆಯಲ್ಲಿ ಮಾಜಿ ಪ್ರಿಯಕರನೊಬ್ಬ (Ex-Lover) ಶಿಕ್ಷಕಿಯ (Teacher) ಮೇಲೆ ಕತ್ತಿಯಿಂದ (Sword) ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹತ್ಯೆ ನಡೆದಾಗ ಶಿಕ್ಷಕಿ ಕಲಿಂಜರಾ ಪಟ್ಟಣದ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಾ ಕುಳಿತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆಸಿದ ನಂತರ ಆರೋಪಿ ಕಾರಿನಲ್ಲಿ ತೆರಳುವಾಗ ಮರಕ್ಕೆ ಡಿಕ್ಕಿಯಾಗಿದ್ದು. ಆತ ಕಾರನ್ನು ಬಿಟ್ಟು ಸ್ಥಳದಿಂದ ಓಡಿಹೋಗಿದ್ದು, ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ವಶಪಡಿಸಿಕೊಂಡ ಸಿಸಿಟಿವಿ ದೃಶ್ಯಾವಳಿಯಲ್ಲಿಕತ್ತಿ ಹಿಡಿದು ಕಾರಿನಿಂದ ಇಳಿದ ಆರೋಪಿ ಮಹಿಳೆಯ ಕಡೆಗೆ ಓಡುತ್ತಿರುವುದನ್ನು ಕಾಣಬಹುದು. ಕಲಿಂಜರಾ ಬಸ್ ನಿಲ್ದಾಣದ ಬಳಿ ಆಕೆಯ ಮೇಲೆ ಹಲ್ಲೆ ನಡೆಸಿ ನಂತರ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ.

ಮೃತ ಶಿಕ್ಷಕಿಯನ್ನು 36 ವರ್ಷದ ಲೀಲಾ ತಬಿಯಾರ್ ಎಂದು ಗುರ್ತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸಾವನ್ನಪ್ಪಿದ್ದಾಳೆ. ಆರೋಪಿಯ ಪತ್ತೆಗೆ ವಿವಿಧ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್ಪಿ ಹರ್ಷವರ್ಧನ್ ಅಗರ್ವಾಲ್ ಹೇಳಿದ್ದಾರೆ. ದಾಳಿಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಬಗಿಡೋರಾ ಡಿಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರು ಕಾರನ್ನು ವಶಪಡಿಸಿಕೊಂಡು ಕಲಿಂಜಾರ ಠಾಣೆಗೆ ಕಳುಹಿಸಿದರು. ಗಾಯಗೊಂಡ ಮಹಿಳೆಯನ್ನು ಎಂಜಿ ಆಸ್ಪತ್ರೆಗೆ ಕರೆದೊಯ್ದರೂ, ಎಲೆಕ್ಟ್ರೋಕಾರ್ಡಿಯೋಗ್ರಾಮ್ ನಂತರ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ

ಆರಂಭದಲ್ಲಿ, ಮೃತಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಮಹಿಳೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಕೆಲವು ಗಂಟೆಗಳ ನಂತರ, ಮೃತಳನ್ನು ಅರ್ಥುನಾ ನಿವಾಸಿ ಲೀಲಾ ತಬಿಯಾರ್ ಎಂದು ಗುರುತಿಸಲಾಯಿತು. ಲೀಲಾ, ಸಂಸ್ಕೃತದ ಎರಡನೇ ದರ್ಜೆಯ ಶಿಕ್ಷಕಿಯಾಗಿದ್ದು, ಸಜ್ಜನ್‌ಗಢ ಬ್ಲಾಕ್‌ನಲ್ಲಿರುವ ಛಿಯಾಮ್‌ಹುಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. 2023 ರಲ್ಲಿ ನೇಮಕಗೊಂಡ ಅವರು ಇನ್ನೂ ಪ್ರೊಬೇಷನರಿ ಅವಧಿಯಲ್ಲಿದ್ದರು.