ಗಯಾ: ಈ ನೀಚ ಘಟನೆಯ ಕುರಿತು ಓದುತ್ತಿದ್ದರೆ ಆಕ್ರೋಶ ಮೂಡಬಹುದು. ಜತೆಗೆ ಕೃತ್ಯ ಎಸಗಿದ ಯುವಕನ ಬಗ್ಗೆ ಅಸಹ್ಯ ಉಂಟಾಗಬಹುದು. ಮಾನವೀಯ ಸಂಬಂಧಕ್ಕೆ ಬೆಲೆಯೇ ಇಲ್ಲವೆ ಎನ್ನುವ ಪ್ರಶ್ನೆಯೂ ಹಾದು ಹೋಗಬಹುದು. ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ಹೌದು, ಬಿಹಾರದ (Bihar) ಬೋಧ್ ಗಯಾದ (Bodh Gaya) BMP-3 ಪರೇಡ್ ಮೈದಾನದಲ್ಲಿ ಗೃಹ ರಕ್ಷಕರ ನೇಮಕಾತಿ (Home Guard Recruitment ) ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದ ಮಹಿಳೆಯೊಬ್ಬರು ಆಂಬುಲೆನ್ಸ್‌ನಲ್ಲಿ (Ambulance) ಆಸ್ಪತ್ರೆಗೆ ಸಾಗಿಸುವ ವೇಳೆ ಚಾಲಕ ಮತ್ತು ಟೆಕ್ನೀಷಿಯನ್‌ನಿಂದ ಅತ್ಯಾಚಾರಕ್ಕೊಳಗಾದ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧೀಕ್ಷಕ ಆನಂದ್ ಕುಮಾರ್ ಅವರ ಪತ್ರಿಕಾ ಪ್ರಕಟಣೆಯ ಪ್ರಕಾರ, ಓಟದ ಸ್ಪರ್ಧೆಯ ವೇಳೆ ಮಹಿಳೆಯು ಮೂರ್ಛೆ ಹೋಗಿದ್ದರಿಂದ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಂಬುಲೆನ್ಸ್ ಚಾಲಕ ವಿನಯ್ ಕುಮಾರ್ ಮತ್ತು ಟೆಕ್ನೀಷಿಯನ್ ಅಜಿತ್ ಕುಮಾರ್ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಇಬ್ಬರೂ ಆರೋಪಿಗಳನ್ನು ಎರಡು ಗಂಟೆಗಳೊಳಗೆ ಬಂಧಿಸಲಾಗಿದೆ.
ಬೋಧ್ ಗಯಾದ SDPO ಸೌರಭ್ ಜೈಸ್ವಾಲ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಫೊರೆನ್ಸಿಕ್ ತಂಡವು ಸಾಕ್ಷ್ಯ ಸಂಗ್ರಹಕ್ಕೆ ತೆರಳಿದ್ದು, ಸ್ಥಳದ CCTV ದೃಶ್ಯಾವಳಿಗಳು ಆರೋಪಿಗಳ ಗುರುತಿಸುವಿಕೆಗೆ ಸಹಾಯಕವಾಗಿವೆ. ಬೋಧ್ ಗಯಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಈ ಸುದ್ದಿಯನ್ನು ಓದಿ: Maharashtra Crime: ವೇಟ್ ಮಾಡಿ ಅಂದಿದ್ದೇ ತಪ್ಪಾಯ್ತು; ಸ್ವಲ್ಪ ಹೊತ್ತು ಕಾಯಿರಿ ಎಂದಿದ್ದ ರಿಸೆಪ್ಷನಿಸ್ಟ್ ಮೇಲೆ ರೋಗಿಯ ಸಂಬಂಧಿಯಿಂದ ಹಲ್ಲೆ
“ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು, ಆರೋಪಪಟ್ಟಿಯನ್ನು ಶೀಘ್ರ ಸಲ್ಲಿಸಲಾಗುವುದು ಮತ್ತು ಆರೋಪಿಗಳ ವಿರುದ್ಧ ವೇಗದ ತನಿಖೆ ಮೂಲಕ ಕಾನೂನು ಕ್ರಮಕ್ಕೆ ಪ್ರಯತ್ನಿಸಲಾಗುವುದು” ಎಂದು SSP ಆನಂದ್ ಕುಮಾರ್, ತಿಳಿಸಿದ್ದಾರೆ. ಈ ಘಟನೆಯು ನೇಮಕಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸ್ಥಳೀಯರು ಮತ್ತು ಮಹಿಳಾ ಸಂಘಟನೆಗಳು ಈ ದೌರ್ಜನ್ಯವನ್ನು ಖಂಡಿಸಿದ್ದು, ಕಠಿಣ ಶಿಕ್ಷೆಗೆ ಒತ್ತಾಯಿಸಿವೆ.
ಇತ್ತೀಚೆಗೆ ಅತ್ಯಾಚಾರ, ಮಹಿಳಾ ದೌರ್ಜನ್ಯ ಕುರಿತಾದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಲ್ಲೆಡೆ ಈ ಗಂಭೀರ ವಿಚಾರದ ಕುರಿತು ಗಹನವಾದ ಚರ್ಚೆ ನಡೆಯುತ್ತಿದೆ. ಅದರೂ ಒಂದರ ಮೇಲೆ ಒಂದರಂತೆ, ಒಂದರ ಬೆನ್ನಲ್ಲೇ ಮತ್ತೊಂದು ಎಂಬಂತೆ ಅತ್ಯಾಚಾರ ಪ್ರಕರಣ ವರದಿಯಾಗುತ್ತಲ್ಲೇ ಇದೆ. ಅದೂ ದೇಶದ ಪ್ರತಿಷ್ಠಿತ ನಗರರಗಳಲ್ಲಿ, ನಡೆಯುತ್ತಿರೋದು ಒಂಟಿ ಹೆಣ್ಮಕ್ಕಳು ರಾತ್ರಿ ವೇಳೆ ಸಂಚರಿಸುವುದು ಸುರಕ್ಷಿತರೇ? ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆಯೇನೋ ಎನ್ನುವ ಆತಂಕ ಜನರಲ್ಲಿ ಪ್ರಶ್ನೆ ಮಾಡಿದೆ. ಈ ಮಧ್ಯೆ ಅತ್ಯಾಚಾರ, ಮಹಿಳಾ ದೌರ್ಜನ್ಯ ನಡೆಸುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಅದು ಇಂತಹ ದುಷ್ಕೃತ್ಯ ನಡೆಸುವ ದುಷ್ಕರ್ಮಿಗಳಿಗೆ ಪಾಠವಾಗಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.