ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tata Motors: ಕೇವಲ ಒಂದೇ ವರ್ಷದಲ್ಲಿ ಉ.ಪ್ರದೇಶದ ಯುಪಿಎಸ್‌ಆರ್‌ಟಿಸಿಯಿಂದ ಮೂರನೇ ಬಾರಿಗೆ ಬಸ್ ಚಾಸಿಸ್ ಆರ್ಡರ್ ಅನ್ನು ಗೆದ್ದ ಟಾಟಾ ಮೋಟಾರ್ಸ್

ಎಲ್‌ಪಿಓ 1618 ಬಸ್ ಚಾಸಿಸ್‌ ಯ ಆರ್ಡರ್ ಅನ್ನು ಸ್ಪರ್ಧಾತ್ಮಕ ಇ-ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಟಾಟಾ ಗೆದ್ದುಕೊಂಡಿದೆ ಮತ್ತು ಬಸ್ ಚಾಸಿಸ್ ಅನ್ನು ಪರಸ್ಪರ ಒಪ್ಪಿತ ನಿಯಮಗಳ

ಎಲ್‌ಪಿಓ 1618 ಬಸ್ ಚಾಸಿಯ 1,297 ಯುನಿಟ್ ಗಳನ್ನು ಒದಗಿಸಲು ರಾಜ್ಯ ಸಾರಿಗೆ ಸಂಸ್ಥೆಯು ಟಾಟಾ ಮೋಟಾರ್ಸ್ ಗೆ ಆರ್ಡರ್ ನೀಡಿದೆ.
ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ಇಂದು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಯುಪಿಎಸ್‌ಆರ್‌ಟಿಸಿ) 1,297 ಬಸ್ ಚಾಸಿಗಳ ಆರ್ಡರ್ ಪಡೆದಿರುವುದಾಗಿ ಘೋಷಿಸಿದೆ. ಈ ಮೂಲಕ ಕೇವಲ ಒಂದು ವರ್ಷದಲ್ಲಿ ಯುಪಿಎಸ್‌ಆರ್‌ಟಿಸಿಯು ಮೂರು ಆರ್ಡರ್ ನೀಡುವ ಮೂಲಕ ಒಟ್ಟು 3,500 ಯುನಿಟ್‌ ಗಳನ್ನು ಒದಗಿಸಲು ಟಾಟಾ ಮೋಟಾರ್ಸ್ ಗೆ ಆರ್ಡರ್ ನೀಡಿದಂತಾಗಿದೆ.
ಎಲ್‌ಪಿಓ 1618 ಬಸ್ ಚಾಸಿಸ್‌ ಯ ಆರ್ಡರ್ ಅನ್ನು ಸ್ಪರ್ಧಾತ್ಮಕ ಇ-ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಟಾಟಾ ಗೆದ್ದುಕೊಂಡಿದೆ ಮತ್ತು ಬಸ್ ಚಾಸಿಸ್ ಅನ್ನು ಪರಸ್ಪರ ಒಪ್ಪಿತ ನಿಯಮಗಳ ಅಡಿಯಲ್ಲಿ ಹಂತ ಹಂತವಾಗಿ ಸಾರಿಗೆ ಸಂಸ್ಥೆಗೆ ವಿತರಿಸಲಾಗುತ್ತದೆ.
ಟಾಟಾ ಎಲ್‌ಪಿಓ 1618 ಡೀಸೆಲ್ ಬಸ್ ಚಾಸಿಸ್ ಅನ್ನು ನಿರ್ದಿಷ್ಟವಾಗಿ ನಗರ ಸಾರಿಗೆ ಸೌಲಭ್ಯಕ್ಕೆ ಮತ್ತು ದೂರದ ಪ್ರಯಾಣಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಚಾಸಿಗಳು ಅವುಗಳ ಉತ್ತಮ ಕಾರ್ಯಕ್ಷಮತೆ, ಪ್ರಯಾಣಿಕರ ಸೌಕರ್ಯ ಮತ್ತು ಕಡಿಮೆ ಮಾಲೀಕತ್ವದ ವೆಚ್ಚಕ್ಕೆ ಜನಪ್ರಿಯವಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್‌ ನ ವಾಣಿಜ್ಯ ಪ್ರಯಾಣಿಕ ವಾಹನ ವ್ಯವಹಾರದ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಶ್ರೀ ಆನಂದ್ ಎಸ್ ಅವರು, "ನಮಗೆ ಅತ್ಯಾಧುನಿಕ ಬಸ್ ಚಾಸಿಯನ್ನು ಪೂರೈಸುವ ಅವಕಾಶವನ್ನು ನೀಡಿದ ಉತ್ತರ ಪ್ರದೇಶ ಸರ್ಕಾರ ಮತ್ತು ಯುಪಿಎಸ್‌ಆರ್‌ಟಿಸಿಗೆ ನಾವು ಧನ್ಯವಾದ ಸಲ್ಲಿಸುತ್ತಿದ್ದೇವೆ. ಈ ಆರ್ಡರ್ ವಿಭಾಗದಲ್ಲಿಯೇ ಪ್ರಮುಖ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಗೆ ದೊರೆತ ಗೌರವವಾಗಿದೆ.
ನಮ್ಮ ಉತ್ತಮ ಕಾರ್ಯಕ್ಷಮತೆ ಮತ್ತು ಯುಪಿಎಸ್‌ಆರ್‌ಟಿಸಿಯ ಸಾರಿಗೆ ಅಗತ್ಯಗಳನ್ನು ಪೂರೈಸುವ ನಮ್ಮ ಸಾಮರ್ಥ್ಯವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ನಾವು ಹೊಂದಿರುವ ತಾಂತ್ರಿಕ ಶಕ್ತಿ ಮತ್ತು ವಿಶ್ವಾಸಾ ರ್ಹತೆಯನ್ನು ಸಾರುತ್ತದೆ. ನಾವು ಯುಪಿಎಸ್‌ಆರ್‌ಟಿಸಿ ಯ ಮಾರ್ಗದರ್ಶನದ ಪ್ರಕಾರ ಉತ್ಪನ್ನ ಸರಬರಾಜು ಪ್ರಾರಂಭಿಸಲು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.