ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Festive Season Fashion 2025: ಗೌರಿ-ಗಣೇಶ ಹಬ್ಬದ ಸಡಗರಕ್ಕೆ ಸಾಥ್ ನೀಡಲು ಎಂಟ್ರಿ ನೀಡಿದ ಟ್ರೆಡಿಷನಲ್ ಉದ್ದ ಲಂಗ

Festive Season Fashion 2025: ಈ ಬಾರಿ ಗೌರಿ-ಗಣೇಶ ಹಬ್ಬದ ಹೆಣ್ಣು ಮಕ್ಕಳ ಟ್ರೆಡಿಷನಲ್ ಫ್ಯಾಷನ್‌ನಲ್ಲಿ ಮಿನಿ ಉದ್ದ ಲಂಗದ ಡಿಸೈನರ್‌ವೇರ್‌ಗಳು ಕಾಲಿಟ್ಟಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಕಿಡ್ಸ್ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರತಿ ಬಾರಿಯಂತೆ ಈ ಬಾರಿಯೂ ಗೌರಿ-ಗಣೇಶ ಹಬ್ಬದ ಸಂಭ್ರಮಿಸಲು ಹೆಣ್ಣು ಮಕ್ಕಳಿಗೆಂದೇ ಟ್ರೆಡಿಷನಲ್ ಲುಕ್ ನೀಡುವ ಬಗೆಬಗೆಯ ಉದ್ದ ಲಂಗದ ಡಿಸೈನರ್‌ವೇರ್‌ಗಳು (Festive Season Fashion 2025) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ ಮಾರುಕಟ್ಟೆಯಲ್ಲಿ ಈ ಹೊಸ ರೂಪದ ಉದ್ದ ಲಂಗಗಳು ಲೆಕ್ಕವಿಲ್ಲದಷ್ಟು ಪ್ರಿಂಟ್ಸ್ ಹಾಗೂ ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆ. ಅಲ್ಲದೇ, ಬೇಡಿಕೆ ಕೂಡ ಮೊದಲಿಗಿಂತ ಹೆಚ್ಚಾಗಿದೆ ಎನ್ನುತ್ತಾರೆ ಕಿಡ್ಸ್ ಫ್ಯಾಷನ್ ಸೆಂಟರ್‌ವೊಂದರ ಮಾಲೀಕರು. ಅವರ ಪ್ರಕಾರ, ಇದೀಗ ಈ ಕಾನ್ಸೆಪ್ಟ್‌ನ ಡ್ರೆಸ್‌ಗಳು ಯಾವ ಮಟ್ಟಿಗೆ ಪಾಪುಲರ್ ಆಗಿವೆ ಎಂದರೆ, ಪುಟ್ಟ ಕಂದಮ್ಮಗಳಿಂದಿಡಿದು ಟೀನೇಜ್ ಹೆಣ್ಣು ಮಕ್ಕಳ ಫ್ಯಾಷನ್‌ನಲ್ಲೂ ಪಾಪುಲರ್ ಆಗಿದೆ ಎನ್ನುತ್ತಾರೆ.

Festive Season Fashion 2025 1

ಹಳ್ಳಿ ಡ್ರೆಸ್‌ಕೋಡ್‌ಗೆ ಡಿಮ್ಯಾಂಡ್

ಉದ್ದ ಲಂಗ ನಮ್ಮ ಸ್ಥಳೀಯ ಲೋಕಲ್ ಭಾಷೆಯಲ್ಲಿ ಕರೆಯುವ ಹೆಸರು. ಇದನ್ನು ಕೊಂಚ ಸ್ಟೈಲಾಗಿ ಹಾಗೂ ಫ್ಯಾಷೆನಬಲ್ ಆಗಿ ತೋರ್ಪಡಿಸಿದಾಗ ಅದು ಲೆಹೆಂಗಾದ ರೂಪ ತಳೆಯುತ್ತದೆ ಎನ್ನುತ್ತಾರೆ ಡಿಸೈನರ್ ಶೀಲ್ಪಾ ಪೂಜಾರಿ. ಅವರ ಪ್ರಕಾರ, ನಮ್ಮ ರಾಜ್ಯದ ಹಳ್ಳಿಗಳಲ್ಲಿ ಈ ಡ್ರೆಸ್‌ಕೋಡ್ ಮೊದಲಿನಿಂದಲೂ ಇತ್ತು. ಆದರೆ, ಸಿಂಪಲ್ ಆಗಿತ್ತು. ಇದೀಗ ಇದೇ ಉಡುಪು ಫ್ಯಾಷನೆಬಲ್ ಆಗಿ ಪರಿವರ್ತನೆಯಾಗಿದೆ ಎನ್ನುತ್ತಾರೆ.

Festive Season Fashion 2025 2

ಟ್ರೆಂಡಿಯಾಗಿರುವ ಉದ್ದ ಲಂಗದ ಡ್ರೆಸ್‌ಗಳಿವು

ಹೊಟ್ಟೆಯ ಮೇಲೆ ನಿಲ್ಲುವ ಕ್ರಾಪ್ ಬ್ಲೌಸ್ ಇರುವಂತಹ ಉದ್ದ ಲಂಗ, ಲೆಹೆಂಗಾದಂತೆ ಕಾಣುವ ಡಿಸೈನರ್ ಉದ್ದ ಲಂಗ, ಪ್ರಿಂಟೆಡ್ ಚಿತ್ತಾರವಿರುವ ಉದ್ದ ಲಂಗ, ಕಾಂಟ್ರಾಸ್ಟ್ ಶೇಡ್‌ನ ಉದ್ದ ಲಂಗ ಬ್ಲೌಸ್ ಸೇರಿದಂತೆ ನಾನಾ ಬಗೆಯವು ಸದ್ಯ ಟ್ರೆಂಡಿಯಾಗಿವೆ ಎನ್ನುತ್ತಾರೆ ಡಿಸೈನರ್ ಶಿಲ್ಪಾ.

Festive Season Fashion 2025 3

ಮಕ್ಕಳ ಉದ್ದ ಲಂಗದ ಆಯ್ಕೆ ಹೀಗಿರಲಿ

  • ಎತ್ತರಕ್ಕೆ ತಕ್ಕಂತೆ ಉದ್ದ ಲಂಗದ ಉಡುಪನ್ನು ಆಯ್ಕೆ ಮಾಡಿ.
  • ಆದಷ್ಟೂ ಕಲರ್‌ಫುಲ್ ಇರುವಂತಹದ್ದನ್ನು ಖರೀದಿಸಿ.
  • ಮಕ್ಕಳಿಗೆ ಇಷ್ಟವಾಗುವಂತಹ ಡಿಸೈನ್ದ್ದನ್ನು ಕೊಳ್ಳಿ.
  • ಸಾಫ್ಟ್ ಫ್ಯಾಬ್ರಿಕ್‌ನ ಉದ್ದ ಲಂಗಕ್ಕೆ ಪ್ರಾಧಾನ್ಯತೆ ನೀಡಿ.
  • ಟ್ರೆಂಡಿಯಾಗಿರುವುದನ್ನು ಖರೀದಿಸಿ.
  • ಸಾಫ್ಟ್ ಫ್ಯಾಬ್ರಿಕ್‌ಗೆ ಆದ್ಯತೆ ನೀಡಿ.
  • ಮಕ್ಕಳಿಗೆ ಇಷ್ಟವಾಗುವಂತಹ ವಿನ್ಯಾಸದ್ದನ್ನು ಖರೀದಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Festival Fashion 2025: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಲೆಹೆಂಗಾ ರೂಪದಲ್ಲಿ ಲಗ್ಗೆ ಇಟ್ಟ ಲಂಗ-ದಾವಣಿ

ಶೀಲಾ ಸಿ ಶೆಟ್ಟಿ

View all posts by this author