ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Festive Season Shopping 2025: ಗೌರಿ ಹಬ್ಬದ ಸೀರೆ ಶಾಪಿಂಗ್‌ಗೂ ಮುನ್ನ ಗಮನದಲ್ಲಿಡಬೇಕಾದ ಅಂಶಗಳಿವು!

Festive Season Shopping 2025: ಹಬ್ಬದ ಈ ಸೀಸನ್‌ನಲ್ಲಿ ಸೀರೆ ಖರೀದಿಗೆ ತೆರಳುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದಿಷ್ಟು ಅಂಶಗಳನ್ನು ಶಾಪಿಂಗ್ ಎಕ್ಸ್‌ಪರ್ಟ್ಸ್ ತಿಳಿಸಿದ್ದಾರೆ. ಅವು ಯಾವುವು? ಕೊಳ್ಳುವಾಗ ನೀವು ಮಾಡಬೇಕಾದ್ದೇನು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಮಿಂಚು
1/5

ಗೌರಿ ಹಬ್ಬದ ಸೀರೆ ಶಾಪಿಂಗ್ ಈಗಾಗಲೇ ಎಲ್ಲೆಡೆ ಭರದಿಂದ ಸಾಗಿದೆ. ಸಮೀಕ್ಷೆಯೊಂದರ ವರದಿ ಪ್ರಕಾರ, ಹಬ್ಬದ ಸೀಸನ್‌ನಲ್ಲಿ ಸೀರೆ ಖರೀದಿಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಂತೆ. ಶಾಪಿಂಗ್ ಎಕ್ಸ್‌ಪರ್ಟ್ಸ್ ಹೇಳುವಂತೆ, ಈ ಸಮಯದಲ್ಲಿ ನೀವೂ ಕೂಡ ಈ ಹಬ್ಬಕ್ಕೆ ನೀವೂ ಸೀರೆ ಖರೀದಿಸುತ್ತಿರುವಿರಾದಲ್ಲಿ, ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ.

ಮೊದಲು ವಾರ್ಡ್ರೋಬ್ ಚೆಕ್ ಮಾಡಿ

ಸೀರೆ ಶಾಪಿಂಗ್‌ಗೆ ಹೋಗುವ ಮುನ್ನ ನಿಮ್ಮ ವಾರ್ಡ್ರೋಬ್‌ನಲ್ಲಿ ಯಾವ್ಯಾವ ವರ್ಣದ ವಿನ್ಯಾಸದ ಹಾಗೂ ಶೇಡ್‌ನ ಸೀರೆಗಳಿವೆ ಎಂಬುದನ್ನು ತಿಳಿದುಕೊಂಡಿರಿ. ಖರೀದಿ ಅತುರದಲ್ಲಿ ಸೇಮ್‌ ಟು ಸೇಮ್‌ ವಿನ್ಯಾಸದ ಅದೇ ವರ್ಣದ ಸೀರೆಗಳನ್ನು ಕೊಂಡು ಬರುವಂತಾಗಬಾರದು.

2/5

ಬಜೆಟ್ ಪ್ಲಾನಿಂಗ್ ಮಾಡಿ

ಸೀರೆ ಖರೀದಿಗೆ ಪ್ಲಾನ್‌ ಮಾಡಿದ ತಕ್ಷಣ ಎಷ್ಟು ಬೆಲೆಯ ಸೀರೆಗಳನ್ನು ಖರೀದಿಸಬೇಕು? ಎಷ್ಟು ಸೀರೆಯ ಅಗತ್ಯವಿದೆ ಎಂಬುದರ ಬಗ್ಗೆ ಮೊದಲೇ ನಿರ್ಧರಿಸಿ, ತೆರಳಿ. ಕೊಳ್ಳುವಾಗ ಈ ಬಗ್ಗೆ ಚರ್ಚಿಸುವ ಅಗತ್ಯವಿರುವುದಿಲ್ಲ ಹಾಗೂ ಗೊಂದಲವುಂಟಾಗುವುದಿಲ್ಲ.

3/5

ಆನ್‌ಲೈನ್ ಸೀರೆ ಖರೀದಿ ಮಾಡುವಾಗ ಎಚ್ಚರ

ಇಂಟರ್‌ನೆಟ್‌ನಲ್ಲಿ ಫೆಸ್ಟಿವ್‌ ಸೀಸನ್‌ಗೆ ಟ್ರೆಂಡಿಯಾಗಿರುವ ಸೀರೆಗಳ ಝಲಕ್‌ ನೋಡಿ. ಆನ್‌ಲೈನ್‌ನಲ್ಲಿ ಖರೀದಿಸುವುದಾದಲ್ಲಿ ಪ್ರಿಂಟ್ಸ್, ಕ್ವಾಲಿಟಿ ಬಗ್ಗೆ ಗ್ಯಾರಂಟಿ ಇರುವುದಿಲ್ಲ. ಬ್ರಾಂಡೆಡ್ ಹಾಗೂ ಬೋಟಿಕ್ ಸೀರೆಗಳಾದಲ್ಲಿ ಮಾತ್ರ ಎಕ್ಸ್‌ಚೇಂಜ್‌ ಸೌಲಭ್ಯ ಇರುತ್ತದೆ. ಹಾಗಾಗಿ ಬ್ರಾಂಡೆಡ್ ಸೀರೆಗಳಿಗೆ ಆದ್ಯತೆ ನೀಡಿ. ಆನ್‌ಲೈನ್‌ನಲ್ಲಾದಲ್ಲಿ ಸ್ಕ್ಯಾಮ್ ಬಗ್ಗೆ ಎಚ್ಚರವಿರಲಿ.

4/5

ಸೀರೆ ಸೆಂಟರ್‌ಗಳಲ್ಲಿ ಖರೀದಿಸಿ

ಆದಷ್ಟೂ ಆಫ್‌ಲೈನ್ ಅಂದರೆ, ಅಂಗಡಿ ಅಥವಾ ಶೋ ರೂಮ್‌ಗೆ ಭೇಟಿ ನೀಡಿ ಖರೀದಿಸಿ. ಗ್ರಾಹಕ ಸ್ನೇಹಿ ಶೋರೂಂಗೆ ತೆರಳಿ. ಯಾಕೆಂದರೆ, ನಿಮಗೆ ಕಣ್ಣಿಗೆ ಕಾಣುವ ಸಾಕಷ್ಟು ಬಗೆಯ ಸೀರೆಗಳನ್ನು ಕಣ್ತುಂಬಿಸಿಕೊಳ್ಳಬಹುದಲ್ಲದೇ, ಮೈ ಮೇಲೆ ಹಾಕಿಕೊಂಡು ಟ್ರಯಲ್ ಕೂಡ ನೋಡುವ ಅವಕಾಶವಿರುತ್ತದೆ.

5/5

ಟ್ರೆಂಡಿ ಸೀರೆಗಳ ಬಗ್ಗೆ ತಿಳಿದುಕೊಳ್ಳಿ

ಟ್ರೆಂಡಿ ಡಿಸೈನ್‌ನ ಯಾವ್ಯಾವ ಸೀರೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಫೆಸ್ಟೀವ್‌ ಸೀಸ್‌ನ್‌ ಸ್ಪೆಷಲ್ ಸೀರೆಗಳ್ಯಾವುವು? ಬೆಲೆ ಎಷ್ಟಿವೆ. ನಿರ್ವಹಣೆ ಹೇಗೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಿಮಗೆ ಯಾವ ಶೈಲಿಯ ಸೀರೆ ಬೇಕು ಎಂದು ಗೊತ್ತಿದ್ದಲ್ಲಿ ಮೊಬೈಲ್‌ನಲ್ಲಿಅದರ ಫೋಟೋ ಹಿಡಿದಿಟ್ಟುಕೊಳ್ಳಿ. ಎಲ್ಲಾ ಸೀರೆಗಳನ್ನು ತೆಗೆಸುವ ಬದಲು ಚಿತ್ರ ತೋರಿಸಿ ಕೇಳಿ, ನೋಡಿ.

ಶೀಲಾ ಸಿ ಶೆಟ್ಟಿ

View all posts by this author