ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Krishna Janmastami 2025: ಎಲ್ಲೆಡೆ ಶುರುವಾಯ್ತು ಕೃಷ್ಣ ಜನ್ಮಾಷ್ಟಮಿ ಹಬ್ಬದ ಶಾಪಿಂಗ್

Krishna Janmastami 2025: ಈ ವಾರದ ಕೊನೆಯಲ್ಲಿ ಆಗಮಿಸುವ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶಾಪಿಂಗ್ ಎಲ್ಲೆಡೆ ಆರಂಭವಾಗಿದೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‌ಈಗಾಗಲೇ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಮುದ್ದು ಕೃಷ್ಣನ ಅಲಂಕಾರಿಕ ಸಾಮಗ್ರಿಗಳು, ಕೃಷ್ಣನ ಪುಟ್ಟ ಪುಟ್ಟ ಬೊಂಬೆಗಳು, ಮೂರ್ತಿಗಳು, ಆಕರ್ಷಕ ಮಿನಿಯೇಚರ್ ಜೋಕಾಲಿಗಳು, ಡಿಸೈನರ್‌ಕೊಳಲು, ಬಣ್ಣಬಣ್ಣದ ಮಡಿಕೆಗಳು ಸೇರಿದಂತೆ ನಾನಾ ಸಾಮಗ್ರಿಗಳು ಆಗಮಿಸಿವೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು
1/5

ಕೃಷ್ಣ ಜನ್ಮಾಷ್ಟಮಿ ಹಬ್ಬದ ಶಾಪಿಂಗ್ ಎಲ್ಲೆಡೆ ಆರಂಭವಾಗಿದೆ. ಹೌದು, ಈಗಾಗಲೇ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಮುದ್ದು ಕೃಷ್ಣನ ಅಲಂಕಾರಿಕ ಸಾಮಗ್ರಿಗಳು, ಕೃಷ್ಣನ ಪುಟ್ಟ ಪುಟ್ಟ ಬೊಂಬೆಗಳು, ಮೂರ್ತಿಗಳು, ಆಕರ್ಷಕ ಮಿನಿಯೇಚರ್ ಜೋಕಾಲಿಗಳು, ಡಿಸೈನರ್‌ಕೊಳಲು, ಬಣ್ಣಬಣ್ಣದ ಮಡಿಕೆಗಳು ಸೇರಿದಂತೆ ನಾನಾ ಸಾಮಗ್ರಿಗಳು ಆಗಮಿಸಿವೆ.

2/5

ಮುದ್ದು ಕೃಷ್ಣನ ಬೊಂಬೆಗಳು / ಮೂರ್ತಿಗಳು

ಬಣ್ಣ ಬಣ್ಣದ ಪುಟ್ಟ ಮುದ್ದು ಕೃಷ್ಣನ ಪುಟ್ಟ ಮೂರ್ತಿಗಳಿಂದಿಡಿದು ಆಳೆತ್ತರದ ಕೃಷ್ಣನ ಮೂರ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ನಾನಾ ಮೆಟಿರೀಯಲ್‌ಗಳಲ್ಲಿ ಸಿದ್ಧಪಡಿಸಿರುವ ಅನ್‌ ಬ್ರೇಕಬಲ್ ಕೃಷ್ಣನ ಮೂರ್ತಿಗಳು ಈ ಬಾರಿ ಎಲ್ಲರ ಗಮನಸೆಳೆದಿವೆ. ರಾಧೆ ಜತೆಗಿರುವ ಜೋಡಿ ಗೋಪಾಲ ಮೂರ್ತಿಗಳು ಮೊದಲಿಗಿಂತ ಹೆಚ್ಚು ವಿನ್ಯಾಸದಲ್ಲಿ ಎಂಟ್ರಿ ನೀಡಿವೆ.

3/5

ಅತ್ಯಾಕರ್ಷಕ ಮಿನಿಯೇಚರ್ ಜೋಕಾಲಿ

ಹಬ್ಬದ ರಂಗನ್ನು ಹೆಚ್ಚಿಸಲು ಪುಟ್ಟ ಕೃಷ್ಣನನ್ನು ತೂಗುವ ಮಿನಿಯೇಚರ್‌ ಜೋಕಾಲಿಗಳು ಹೊಸ ವಿನ್ಯಾಸದಲ್ಲಿ ಬಂದಿವೆ. ಇತ್ತೀಚೆಗೆ ಪುಟ್ಟ ಪುಟ್ಟ ಜೋಕಾಲಿಗಳಲ್ಲಿ ಉತ್ಸವ ಮೂರ್ತಿ ಮುದ್ದು ಕೃಷ್ಣನ ಇರಿಸಿ ಶೋಗಿಡುವುದು ಸಾಮಾನ್ಯವಾಗಿದೆ. ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ. ಮಕ್ಕಳಿಗೂ ಇವು ಇಷ್ಟವಾಗುತ್ತವೆ. ಹಾಗಾಗಿ ಇವುಗಳ ಮಾರಾಟ ಜೋರಾಗಿಯೇ ನಡೆದಿದೆ ಎನ್ನುತ್ತಾರೆ ಗಾಂಧಿಬಜಾರ್‌ನ ಮಾರಾಟಗಾರರು.

4/5

ಡಿಸೈನರ್ ಕೊಳಲು

ಎಂದಿನಂತೆ ಮಕ್ಕಳಿಗೆ ಪ್ರಿಯವಾಗಿರುವ ನವಿಲುಗರಿ ಕೊಳಲು, ಮುತ್ತಿನ ಕೊಳಲು ಹಾಗೂ ಕಾರ್ಟೂನ್‌ ವಿನ್ಯಾಸವಿರುವ ಕೊಳಲುಗಳು ಮಾರುಕಟ್ಟೆಗೆ ಆಗಮಿಸಿವೆ.

ಮುದ್ದು ಕನಯ್ಯನ ಹೆಜ್ಜೆಯ ಸ್ಟಿಕ್ಕರ್ಸ್

ಮನೆಯ ಅಂಗಳದಲ್ಲಿ ಅಂಟಿಸಬಹುದಾದ ಹಾಗೂ ಉತ್ಸವ ಮೂರ್ತಿ ಕೃಷ್ಣನ ಹೆಜ್ಜೆಯ ಇನ್‌ಸ್ಟಂಟ್ ಸ್ಟಿಕ್ಕರ್‌ಗಳು ನಾನಾ ವಿನ್ಯಾಸದಲ್ಲಿ ಬಂದಿವೆ. ಕುಂದನ್‌ನ ವೈಟ್, ರೆಡ್, ಪಿಂಕ್ ಹೀಗೆ ನಾನಾ ಶೇಡ್‌ಗಳಿರುವ ಹೆಜ್ಜೆಯ ಸ್ಟಿಕ್ಕರ್‌ಗಳು, ಸಿಲ್ವರ್‌ಶೇಡ್, ಪರ್ಲ್, ಗೋಲ್ಡನ್‌ ಶೇರ್‌ನ ಮಣಿಗಳಿರುವ ಡಿಸೈನ್‌ನವು ಸಿಗುತ್ತಿವೆ.

5/5

ಅಲಂಕಾರಿಕ ಕಲರ್‌ಫುಲ್‌ ಮಡಿಕೆಗಳು

ಮನೆಯ ಕಾರ್ನರ್‌ನಲ್ಲಿಇಲ್ಲವೇ ಅಂಗಳದಲ್ಲಿ ಕಟ್ಟಬಹುದಾದ ಕಲರ್‌ಫುಲ್ ಅಲಂಕೃತಗೊಂಡ ಮಡಿಕೆಗಳು ಮಾರುಕಟ್ಟೆಯ ರಂಗೇರಿಸಿವೆ. ನೋಡಲು ಮನಮೋಹಕವಾಗಿರುವ ಈ ಮಡಿಕೆಗಳು ನಾನಾ ಸೈಝ್‌ನಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಮಲ್ಲೇಶ್ವರದ ವ್ಯಾಪಾರಿ ರಮಣ ಹಾಗೂ ರಾಜನ್.

ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಮಾಡುವವರಿಗೆ ಒಂದಿಷ್ಟು ಟಿಪ್ಸ್

  • ಮರು ಬಳಕೆ ಮಾಡುವಂತಹ ಅಲಂಕಾರಿಕ ವಸ್ತುಗಳನ್ನು ಖರೀದಿಸಿ.
  • ಹೊಸ ವಿನ್ಯಾಸದವನ್ನು ಆಯ್ಕೆ ಮಾಡಿ.
  • ಟ್ರೆಡಿಷನಲ್ ಲುಕ್ ಇರುವಂತವಕ್ಕೆ ಪ್ರಾಮುಖ್ಯತೆ ನೀಡಿ.

ಶೀಲಾ ಸಿ ಶೆಟ್ಟಿ

View all posts by this author