-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಎಲ್ಲೆಡೆ ಫೆಸ್ಟಿವ್ ಥೀಮ್‌ನ ಫೋಟೊಶೂಟ್‌ಗಳು ಹೆಚ್ಚಾಗಿವೆ. ಹೌದು, ಹೆಣ್ಣು ಮಕ್ಕಳು ರಾಧೆಯಂತೆ ಕಾಣಿಸಿಕೊಂಡರೆ, ಗಂಡು ಮಕ್ಕಳು ಮುದ್ದು ಕೃಷ್ಣನಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಕೃಷ್ಣ ಜನ್ಮಾಷ್ಟಮಿ (Krishna Janmastami 2025) ಪ್ರಯುಕ್ತ ಕೇವಲ ಸೆಲೆಬ್ರೆಟಿಗಳು ಮಾತ್ರವಲ್ಲ, ಸಾಮಾನ್ಯ ಫ್ಯಾಷನ್ ಪ್ರಿಯ ಮಹಿಳೆಯರು ಕೂಡ ತಂತಮ್ಮ ಇಷ್ಟನುಸಾರವಾಗಿ ಟ್ರೆಡಿಷನಲ್ ಔಟ್‌ಗಳಲ್ಲಿ ಕಾಣಿಸಿಕೊಂಡು ಮಕ್ಕಳಿಗೆ ಕೃಷ್ಣನ ಅವತಾರ ಮಾಡಿ ವಿಶೇಷ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇನ್ನು ಕೆಲವರು ತಂತಮ್ಮ ಹೆಣ್ಣು ಮಕ್ಕಳನ್ನು ರಾಧೆಯಂತೆ ಸಿಂಗರಿಸುತ್ತಿದ್ದಾರೆ. ಗಂಡು ಮಕ್ಕಳನ್ನು ಸಾಂಪ್ರದಾಯಿಕ ಲುಕ್‌ನ ಮುದ್ದು ಕೃಷ್ಣನಂತೆ ಅಲಂಕರಿಸುತ್ತಿದ್ದಾರೆ. ಮತ್ತೆ ಕೆಲವರು ಕಂದಮ್ಮಗಳೊಂದಿಗೆ ಪ್ರೀತಿಯ ಯಶೋದೆಯಾಗಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಹಬ್ಬದ ಸೀಸನ್ ಸಂಭ್ರಮವನ್ನು ಹೆಚ್ಚಿಸತೊಡಗಿದೆ ಎನ್ನುತ್ತಾರೆ ಮೇಕೋವರ್ ಆರ್ಟಿಸ್ಟ್ ಮಾಲಾ.

ಎಲ್ಲೆಡೆ ಆರಂಭಗೊಂಡ ಸ್ಪರ್ಧೆ
ಅಂದಹಾಗೆ, ಇದೀಗ ಎಲ್ಲೆಡೆ ಕೃಷ್ಣ ವೇಷ-ಭೂಷಣ ಸ್ಪರ್ಧೆಗಳು ಎಲ್ಲೆಡೆ ಆರಂಭಗೊಂಡಿದೆ. ಪರಿಣಾಮ, ಪೋಷಕರು ತಂತಮ್ಮ ಮಕ್ಕಳನ್ನು ಕೃಷ್ಣ ಹಾಗೂ ರಾಧೆಯಾಗಿ ಡ್ರೆಸ್ ಮಾಡಿ, ಫೋಟೊಶೂಟ್ ಮಾಡಿಸುತ್ತಿದ್ದಾರೆ.

ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಮೇಕೋವರ್ ಸ್ಟುಡಿಯೋಗಳು ಇನ್ಸ್ಟಂಟ್ ರೆಡಿಮೇಡ್ ಥೀಮ್ ಇರುವಂತಹ ಫೋಟೋಶೂಟ್ ಪ್ಯಾಕೆಜ್ಗಳನ್ನು ನೀಡುತ್ತಿವೆ. ಆಯಾ ಆಯ್ಕೆಗೆ ತಕ್ಕಂತೆ ದರವನ್ನೂ ಕೂಡ ನಿಗದಿ ಮಾಡಿವೆ.

ಜನ್ಮಾಷ್ಟಮಿ ಹೆಸರಲ್ಲಿ ಟ್ರೆಡಿಷನಲ್ ಆಚರಣೆ
ಒಟ್ಟಾರೆ, ಕೃಷ್ಣ ಜನ್ಮಾಷ್ಟಮಿ ಹಬ್ಬದ ಹೆಸರಲ್ಲಿ ನಮ್ಮ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಗೆ ಪ್ರಾಮುಖ್ಯತೆ ಹೆಚ್ಚಾಗುತ್ತಿರುವುದು ಶ್ಲಾಘನೀಯ ವಿಚಾರ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Krishna Janmastami 2025: ಎಲ್ಲೆಡೆ ಶುರುವಾಯ್ತು ಕೃಷ್ಣ ಜನ್ಮಾಷ್ಟಮಿ ಹಬ್ಬದ ಶಾಪಿಂಗ್