ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri Saree Shopping 2025: ನವರಾತ್ರಿಗೆ ಸೀರೆ ಶಾಪಿಂಗ್‌ ಮಾಡುವವರಿಗೆ ಇಲ್ಲಿದೆ 5 ಸಿಂಪಲ್‌ ಟಿಪ್ಸ್

Navaratri Saree Shopping 2025: ಮುಂಬರುವ ನವರಾತ್ರಿ ಹಬ್ಬದ ಸಂಭ್ರಮಕ್ಕೆ ಈಗಾಗಲೇ ಸೀರೆ ಶಾಪಿಂಗ್‌ ಭರ್ಜರಿಯಾಗಿ ನಡೆಯುತ್ತಿದೆ. ಈ 9 ದಿನಗಳ ಸೀರೆ ಸೆಲೆಕ್ಷನ್‌ ಮಾಡುವುದು ಹೇಗೆ? ಯಾವ ಟಿಪ್ಸ್ ಫಾಲೋ ಮಾಡಿದರೇ ಉತ್ತಮ? ಎಂಬುದರ ಬಗ್ಗೆ ಸೀರೆ ಎಕ್ಸ್‌ಪರ್ಟ್ ಇಲ್ಲಿ ಸಿಂಪಲ್‌ ಐಡಿಯಾ ನೀಡಿದ್ದಾರೆ.

ಚಿತ್ರಕೃಪೆ: ಮಿಂಚು
1/5

ನವರಾತ್ರಿಗೆ 9 ಸೀರೆ ಶಾಪಿಂಗ್‌ ಮಾಡುತ್ತಿದ್ದೀರಾ? ಶಾಪಿಂಗ್‌ ಮಾಡುವ ಮುನ್ನ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಪಾಲಿಸಬೇಕಾದ್ದೇನು? ಈ ಎಲ್ಲದರ ಬಗ್ಗೆ ಸೀರೆ ಸ್ಟೈಲಿಸ್ಟ್ ಹಾಗೂ ಎಕ್ಸ್‌ಪರ್ಟ್ಸ್ ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

2/5

ಸೀರೆ ಕೊಳ್ಳುವ ಮೊದಲು ಪ್ಲ್ಯಾನ್‌ ಮಾಡಿ

ನೀವು ಯಾವ ಬಗೆಯ ಸೀರೆ ಈ ನವರಾತ್ರಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೀರಾ? ರೇಷ್ಮೆಯದ್ದಾ? ಡಿಸೈನರ್ರಾ? ಸಿಂಪಲ್‌ ಸೀರೆಯಾ? ಎಂಬುದನ್ನು ಮೊದಲೇ ಯೋಚಿಸಿ. ಕೊಳ್ಳುವ ಸೀರೆಯನ್ನು ಗಮನದಲ್ಲಿಟ್ಟುಕೊಂಡು ಪ್ಲ್ಯಾನ್‌ ಮಾಡಿ, ಖರೀದಿಸಿ.

ಸೀರೆ ಬಜೆಟ್‌ ಫಿಕ್ಸ್ ಮಾಡಿಟ್ಟುಕೊಳ್ಳಿ

ನವರಾತ್ರಿಗೆ ನೀವು ಎಷ್ಟು ಸೀರೆ ಕೊಳ್ಳುತ್ತಿದ್ದೀರಾ? ಯಾವ ಬಜೆಟ್‌ ಸೀರೆಗಳನ್ನು ಕೊಳ್ಳಬೇಕು? ಜಾಸ್ತಿ ರೇಟ್‌ನದ್ದೋ ಅಥವಾ ಕಡಿಮೆ ರೇಟ್‌ನದ್ದೋ ಎಂಬುದನ್ನು ಮನಗಂಡು ಬಜೆಟ್‌ ಫಿಕ್ಸ್ ಮಾಡಿ.

3/5

ವಾರ್ಡ್ರೋಬ್‌ನಲ್ಲಿ ಇಲ್ಲದ ಸೀರೆ ಖರೀದಿಸಿ

ಪ್ರತಿ ಮಹಿಳೆಯ ಬಳಿಯು ರಾಶಿ ರಾಶಿ ಸೀರೆಗಳಿರುತ್ತವೆ. ಆದರೂ ಮತ್ತೆ ಮತ್ತೇ ಕೊಳ್ಳಬೇಕು, ಉಡಬೇಕು ಎಂಬ ಆಸೆ ಇರುತ್ತದೆ. ಕೆಲವೊಮ್ಮೆ ಅದೇ ಬಣ್ಣದ ಅದೇ ಡಿಸೈನ್‌ನ ಸೀರೆ ಇದ್ದರೂ, ನೋಡಲು ಹೆಚ್ಚು ಕಮ್ಮಿ ಅದೇ ರೀತಿ ಇರುವಂತಹ ಸೀರೆಗಳನ್ನು ಕೊಂಡುಕೊಳ್ಳುವುದು ಕಾಮನ್‌. ಮನೆಗೆ ಬಂದು ವಾರ್ಡ್ರೋಬ್‌ ತೆಗೆದಾಗಲೇ ಗೊತ್ತಾಗುವುದು. ಅದೇ ರೀತಿಯ ಸೀರೆ ಕೊಂಡಿದ್ದೇವೆಂದು, ಇವನ್ನು ಉಟ್ಟಾಗ ಮತ್ತೇ ಹಳೆಯ ಸೀರೆಯಂತೆ ಕಾಣುತ್ತವೆ. ಹಾಗಾಗಿ ಸೀರೆ ಶಾಪಿಂಗ್‌ ಹೋಗುವ ಮುನ್ನ ವಾರ್ಡ್ರೋಬ್‌ ಪರಿಶೀಲಿಸುವುದನ್ನು ಮರೆಯಬೇಡಿ.

4/5

ಆನ್‌ಲೈನ್‌ ಜಾಹೀರಾತುಗಳಿಗೆ ಮಾರು ಹೋಗಿ ಸೀರೆ ಕೊಳ್ಳಬೇಡಿ

ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಆನ್‌ಲೈನ್‌ ಸೀರೆ ಮಾರಾಟ ಹೆಚ್ಚಾಗಿದೆ. ಈ ಜಾಹೀರಾತುಗಳಿಗೆ ಮಾರು ಹೋಗಿ ಸೀರೆ ಖರೀದಿ ಮಾಡಿ, ಮೋಸ ಹೋಗಬೇಡಿ. ಅವು ಉತ್ತಮ ಬ್ರ್ಯಾಂಡ್‌ ಹಾಗೂ ನಂಬಿಕಸ್ತವಾಗಿದ್ದಲ್ಲಿ ಮಾತ್ರ ಆನ್‌ಲೈನ್‌ನಲ್ಲಿ ಖರೀದಿಸಿ.

5/5

ಕಲರ್‌ ಪ್ಯಾಲೆಟ್‌ಗೆ ತಕ್ಕಂತೆ ಸೀರೆ ಬಣ್ಣ ಆಯ್ಕೆ ಮಾಡಿ

ನವರಾತ್ರಿಯಲ್ಲಿ ಉಡುವ ಆಯಾ ಬಣ್ಣದ ಕಲರ್‌ ಪ್ಯಾಲೇಟ್‌ಗೆ ತಕ್ಕಂತೆ ಸೀರೆ ಕಲರ್‌ ಆಯ್ಕೆ ಮಾಡಿ, ಖರೀದಿಸಿ.

ಶೀಲಾ ಸಿ ಶೆಟ್ಟಿ

View all posts by this author