ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಇಂಗ್ಲೀಷ್‌ ಕಲರ್‌ನ ಕಾರ್ಸೆಟ್‌ ಸೂಟ್‌ನಲ್ಲಿ ನಟಿ ಕೃತಿ ಕರಬಂಧ ಪಾಶ್‌ ಲುಕ್‌!

Star Fashion 2025: ಬಹುಭಾಷಾ ತಾರೆ ಕೃತಿ ಕರಬಂಧ ಇತ್ತೀಚೆಗೆ ಟ್ರೆಂಡಿಯಾಗಿರುವ ಆಕಾಶ ನೀಲಿ ವರ್ಣದ ಪಾಸ್ಟೆಲ್‌ ಶೇಡ್‌ನ ಇಂಗ್ಲೀಷ್‌ ಕಲರ್‌ನ ಆಫ್‌ ಶೋಲ್ಡರ್‌ ಕಾರ್ಸೆಟ್‌ ಸೂಟ್‌ನಲ್ಲಿ ಪಾಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಕಾರ್ಸೆಟ್‌ ಪ್ರಿಯರಿಗೆ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಕೂಡ ನೀಡಿದ್ದಾರೆ.

ಚಿತ್ರಗಳು: ಕೃತಿ ಕರಬಂಧ, ನಟಿ
1/5

ಇತ್ತೀಚೆಗೆ ಟ್ರೆಂಡಿಯಾಗಿರುವ ಇಂಗ್ಲೀಷ್‌ ಕಲರ್‌ ಕಾರ್ಸೆಟ್‌ ಸೂಟ್‌ನಲ್ಲಿ ನಟಿ ಕೃತಿ ಕರಬಂಧ ಅತ್ಯಾಕರ್ಷಕವಾಗಿ ಪಾಶ್‌ ಆಗಿ ಕಾಣಿಸಿಕೊಂಡಿದ್ದಾರೆ.

2/5

ಕಾರ್ಸೆಟ್‌ನಲ್ಲಿ ಕೃತಿ ಸ್ಲಿಮ್‌ ಲುಕ್‌

ಹೌದು, ಕನ್ನಡದ ಗೂಗ್ಲಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ನಂತರ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾದ ಕೃತಿ ಕರಬಂಧ ಹಿಂದಿಯ ವೆಬ್‌ ಸೀರಿಸ್‌ಗಳಲ್ಲೂ ನಟಿಸುತ್ತಿದ್ದು, ಈ ಸಂಬಂಧಿತ ಇವೆಂಟ್‌ನಲ್ಲಿ ಪಾಸ್ಟೆಲ್‌ ಶೇಡ್‌ ಕಾರ್ಸೆಟ್‌ನಲ್ಲಿ ಮಿಂಚಿದ್ದಾರೆ. ಗ್ಲಾಮರಸ್‌ ಲುಕ್‌ ನೀಡುವ ಆಫ್‌ ಶೋಲ್ಡರ್‌ ಕಾರ್ಸೆಟ್‌ ಸೂಟ್‌ ಇದಾಗಿದ್ದು, ಕಂಪ್ಲೀಟ್‌ ವೆಸ್ಟರ್ನ್‌ ಲುಕ್‌ ಅವರಿಗೆ ನೀಡಿದೆ. ಅಲ್ಲದೇ, ಸ್ಲಿಮ್‌ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ವೆಸ್ಟರ್ನ್‌ ಟಚ್‌ ನೀಡುವ ಕಾರ್ಸೆಟ್‌ ಸೂಟ್‌

ಅಂದಹಾಗೆ, ಇತ್ತೀಚೆಗೆ ಕಾರ್ಸೆಟ್‌ ಔಟ್‌ಫಿಟ್‌ಗಳು ಟ್ರೆಂಡಿಯಾಗಿವೆ. ಯಾವ ತಾರೆಯರು ನೋಡಿದರೂ ಕಾರ್ಸೆಟ್‌ ಡಿಸೈನರ್‌ವೇರ್‌ ಅಥವಾ ಸೂಟ್‌ಗಳಲ್ಲಿ ಕಂಡು ಬರುತ್ತಿದ್ದಾರೆ. ಹಾಗೆಂದು ಎಲ್ಲರೂ ಒಂದೇ ಬಗೆಯ ಕಾರ್ಸೆಟ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ! ಬದಲಿಗೆ ಅವರ ಬಾಡಿ ಮಾಸ್‌ ಇಂಡೆಕ್ಸ್‌ಗೆ ಮ್ಯಾಚ್‌ ಆಗುವಂತಹ ಕಾರ್ಸೆಟ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ನಟಿ ಕೃತಿ ಕರಬಂಧ ಕೂಡ ಕಾರ್ಸೆಟ್‌ ಅಂದರೇ, ಆಫ್‌ ಶೋಲ್ಡರ್‌ ನೆಕ್‌ಲೈನ್‌ ಹಾಗೂ ಶೋಲ್ಡರ್‌ ಸ್ಲೀವ್‌ ಇಲ್ಲದ ಆಕಾಶ ನೀಲಿ ವರ್ಣದ ಕಾರ್ಸೆಟ್‌ ಕ್ರಾಪ್‌ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಸೆಟ್‌ಗೆ ನ್ಯಾರೋ ಸ್ಟ್ರೇಟ್‌ ಕಟ್‌ ಪ್ಯಾಂಟ್‌ ಧರಿಸಿದ್ದಾರೆ. ಇದು ಅವರನ್ನು ಸಖತ್‌ ಆಗಿ ಬಿಂಬಿಸಿದೆ ಎನ್ನುತ್ತಾರೆ ವಿಮರ್ಶಕರು.

4/5

ಕಾರ್ಸೆಟ್‌ ಕೋ ಆರ್ಡ್ ಸೆಟ್‌ ಅಥವಾ ಸೂಟ್‌

ಕಾರ್ಸೆಟ್‌ ಹಾಗೂ ಪ್ಯಾಂಟ್‌ ಒಂದೇ ಕಲರ್‌ನದ್ದಾಗಿದ್ದು, ಸಾಲಿಡ್‌ ಕಲರ್‌ ಹೊಂದಿರುವಂತವು ಕೋ ಆರ್ಡ್ ಸೆಟ್‌ ಅಥವಾ ಸೂಟ್‌ ಕೆಟಗರಿಗೆ ಸೇರುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ನನಗಂತೂ ವೆಸ್ಟರ್ನ್‌ ಲುಕ್‌ ನೀಡಿದ ಈ ಕಾರ್ಸೆಟ್‌ ಸೂಟ್‌ ಸಖತ್‌ ಇಷ್ಟವಾಗಿದೆ ಎಂದಿರುವ ಕೃತಿ ಫ್ಯಾಷನ್‌ ಪ್ರಿಯರಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

5/5

ಕೃತಿ ಕಾರ್ಸೆಟ್‌ ಸ್ಟೈಲಿಂಗ್‌ ಟಿಪ್ಸ್

  • ಫಿಟ್‌ ಬಾಡಿ ಮಾಸ್‌ ಇಂಡೆಕ್ಸ್ ಇದ್ದವರು ಮಾತ್ರ ಈ ಸ್ಟೈಲಿಂಗ್‌ ಮಾಡಿ.
  • ಗ್ಲಾಮರಸ್‌ ಲುಕ್‌ ಬೇಕೆಂದವರೂ ಕೂಡ ಇದನ್ನು ಧರಿಸಬಹುದು.
  • ಟೀನೇಜ್‌ ಹುಡುಗಿಯರಿಗೆ ಇದು ಹೇಳಿ ಮಾಡಿಸಿದ ಔಟ್‌ಫಿಟ್‌

ಶೀಲಾ ಸಿ ಶೆಟ್ಟಿ

View all posts by this author