ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಡೆನಿಮ್‌ ಕೋ ಆರ್ಡ್ ಫ್ಯಾಷನ್‌ಗೆ ಸೈ ಎಂದ ನಟಿ ಮಾನ್ವಿತಾ ಕಾಮತ್‌

Star Fashion 2025: ನಟಿ ಮಾನ್ವಿತಾ ಕಾಮತ್‌ ಡೆನಿಮ್‌ ಕೋ ಆರ್ಡ್ ಸೆಟ್‌ ಫ್ಯಾಷನ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್‌ಕೋಡ್‌ನಲ್ಲಿ ಅವರ ಸ್ಟೈಲಿಂಗ್‌ ಹೇಗಿದೆ? ವಿಶೇಷತೆಯೇನು? ಎಂಬುದರ ಬಗ್ಗೆ ನಮ್ಮ ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿದ್ದಾರೆ.

ಚಿತ್ರಗಳು: ಮಾನ್ವಿತಾ ಕಾಮತ್‌, ನಟಿ., ಚಿತ್ರಕೃಪೆ: ಫೋಕಸ್‌ ಫೋಟೋಗ್ರಾಫಿ ಸರ್ವೀಸ್‌
1/5

ಡೆನಿಮ್‌ ಫ್ಯಾಷನ್‌ಗೆ ನಟಿ ಮಾನ್ವಿತಾ ಕಾಮತ್‌ ಸೈ ಎಂದಿದ್ದಾರೆ. ನಯಾ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಮಾನ್ವಿತಾ ಕಾಮತ್‌ ಈ ಲುಕ್‌ನಲ್ಲಿ ಕೊಂಚ ಬದಲಾಗಿ ಕಾಣಿಸಿಕೊಂಡಿದ್ದಾರೆ.

2/5

ಸ್ಟೈಲಿಶ್‌ ಲುಕ್‌ನಲ್ಲಿ ಮಾನ್ವಿತಾ

ಅಂದಹಾಗೆ, ಡೆನಿಮ್‌ ಔಟ್‌ಫಿಟ್‌ಗಳು ಎಂದೂ ಮಾಯವಾಗದ ಫ್ಯಾಷನ್‌ ಎನ್ನಬಹುದು. ಇದಕ್ಕೆ ಪೂರಕ ಎಂಬಂತೆ, ನಟಿ ಮಾನ್ವಿತಾ ಕ್ರಾಪ್‌ ಕಾರ್ಸೆಟ್‌ ಶೈಲಿಯ ಟಾಪ್‌ ಜತೆಗೆ ಬಿಗ್‌ ಪಾಕೆಟ್‌ ಇರುವಂತಹ ಡೆನಿಮ್‌ ಪ್ಯಾಂಟ್‌ ಧರಿಸಿದ್ದಾರೆ. ಇದು ನೋಡಲು ಡೆನಿಮ್‌ ಕೋ ಆರ್ಡ್ ಸೆಟ್‌ನಂತಿದೆ. ಅಲ್ಲದೇ, ಈ ಕ್ರಾಪ್‌ ಟಾಪ್‌ಗೆ ಚೈನ್‌ ಫ್ರಿಂಝ್‌ ಸ್ಟೈಲ್‌ ಮಾಡಿರುವುದು ಕೊಂಚ ಫಂಕಿ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ಬದಲಾದ ಮಾನ್ವಿತಾ ಹೇರ್‌ಸ್ಟೈಲ್‌

ಇನ್ನು, ಈ ಡೆನಿಮ್‌ ಕೋ ಆರ್ಡ್ ಲುಕ್‌ ಮಾತ್ರವಲ್ಲ, ಅವರ ಹೇರ್‌ಸ್ಟೈಲ್‌ ಕೂಡ ಬದಲಾಗಿದೆ. ಹಣೆಯ ಮೇಲಿನ ಫ್ರಂಟ್‌ ಫ್ರಿಂಝ್‌ ಕಟ್‌ ಅಥವಾ ಫ್ರಂಟ್‌ ಬ್ಯಾಂಗ್‌ ಅವರ ಇಡೀ ಲುಕ್ಕನ್ನು ಬದಲಿಸಿದೆ. ನೋಡಲು ತೀರಾ ಕಾಲೇಜು ಹುಡುಗಿಯಂತೆ ಅಂದರೆ, ಯಂಗ್‌ ಲುಕ್‌ ನೀಡಿದೆ. ಇದರೊಂದಿಗೆ ಅವರ ಮಿನಿಮಲ್‌ ಆಕ್ಸೆಸರೀಸ್‌ ಸೆನ್ಸ್ ಹಾಗೂ ಮಾಡಿರುವ ಲೈಟ್‌ ಮೇಕಪ್‌ ಮಾನ್ವಿತಾರನ್ನು ಅತ್ಯಾಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ನಟಿ ಮಾನ್ವಿತಾ ಹೊಸ ಫ್ಯಾಷನ್‌ ಬ್ರಾಂಡ್‌

ಟಗರು ಪುಟ್ಟಿ ಎಂದೇ ಖ್ಯಾತಿ ಗಳಿಸಿರುವ ನಟಿ ಮಾನ್ವಿತಾ ಕಾಮತ್‌ ಮೊದಲಿನಿಂದಲೂ ಸ್ಟೈಲಿಶ್‌ ನಟಿ ಎಂದೇ ಗುರುತಿಸಿಕೊಂಡವರು. ಇದೀಗ ಸಿನಿಮಾ ಮಾತ್ರವಲ್ಲ, ಅವರು ತಮ್ಮದೇ ಹೊಸ ಫ್ಯಾಷನ್‌ ಬ್ರಾಂಡ್‌ ಮೆನೆಕಿನ್‌ ಕೂಡ ತೆರೆದಿದ್ದಾರೆ. ಹೆರಿಟೇಜ್‌ ಸಿಲ್ಕ್‌ ಫ್ಯಾಬ್ರಿಕ್‌ನಲ್ಲಿ ಸೂಟ್‌ಗಳನ್ನು ವಿನ್ಯಾಸಗೊಳಿಸಿ, ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ. ಸಿನಿಮಾ ಜತೆ ಇದು ನನ್ನ ಹೊಸ ಉದ್ಯಮ ಎಂದು ಹೇಳಿದ್ದಾರೆ.

5/5

ಕಳೆದ ಬಾರಿ ವಿಶ್ವವಾಣಿಯೊಂದಿಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಫ್ಯಾಷನ್‌ ಹಾಗೂ ಹೊಸ ಉದ್ಯಮದ ಬಗ್ಗೆ ಮಾತನಾಡಿದ್ದ, ಮಾನ್ವಿತಾ, ಹೊಸ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಈ ಬಾರಿ ಅವರೇ ತಮ್ಮ ಡೆನಿಮ್‌ ಲುಕ್‌ ಬಗ್ಗೆ ಒಲವು ವ್ಯಕ್ತಪಡಿಸಿದರು.

ಶೀಲಾ ಸಿ ಶೆಟ್ಟಿ

View all posts by this author