Star Fashion 2025: ಜೆನ್ ಝೀ ಹುಡುಗಿಯರನ್ನು ಸೆಳೆದ ನಟಿ ಶಿಲ್ಪಾ ಶೆಟ್ಟಿಯ ಗ್ರೀನ್ ಶರಾರ
Star Fashion 2025: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಧರಿಸಿರುವ ಡಿಸೈನರ್ ಗ್ರೀನ್ ಶರಾರ, ಜೆನ್ ಝೀ ಹುಡುಗಿಯರನ್ನು ಸೆಳೆದಿದೆ. ಏನಿದು ಶರಾರ? ಇದ್ಯಾವ ಬಗೆಯ ಔಟ್‌ಫಿಟ್? ಡಿಸೈನ್ ಹೇಗಿದೆ? ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿವರಿಸಿದ್ದಾರೆ.
ನಟಿ ಶಿಲ್ಪಾ ಶೆಟ್ಟಿಯ ಗ್ರೀನ್ ಶರಾರ ಜೆನ್ ಝೀ (Gen Z Girls) ಹುಡುಗಿಯರನ್ನು ಆಕರ್ಷಿಸಿದೆ. ಹೌದು, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಧರಿಸಿರುವ ಡಿಸೈನರ್ ಗ್ರೀನ್ ಶರಾರ ಕಾರ್ಪೋರೇಟ್ ಕ್ಷೇತ್ರದ ಯುವತಿಯರನ್ನು ಹಾಗೂ ಟೀನೇಜ್ ಹುಡುಗಿಯರನ್ನೂ ಸೆಳೆದಿದೆ. ಜತೆಗೆ ಮುಂಬರುವ ಫೆಸ್ಟೀವ್ ಸೀಸನ್‌ನಲ್ಲಿ ಇಂಡೋ-ವೆಸ್ಟರ್ನ್ ಡಿಸೈನರ್‌ವೇರ್ ಲಿಸ್ಟ್‌ಗೆ ಸೇರಿಕೊಂಡಿದೆ.
ಅಂದಹಾಗೆ, ನಟಿ ಶಿಲ್ಪಾ ಶೆಟ್ಟಿ ಧರಿಸಿರುವ ಪ್ರಿಂಟೆಡ್ ಗ್ರೀನ್ ಶರಾರ ನೋಡಲು ಅತ್ಯಾಕರ್ಷಕವಾಗಿದ್ದು, ಸದ್ಯ ಟ್ರೆಂಡಿ ಡಿಸೈನರ್‌ವೇರ್ ಲಿಸ್ಟ್‌ಗೆ ಸೇರಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಅದರಲ್ಲೂ ಮುಂಬರುವ ಫೆಸ್ಟೀವ್ ಸೀಸನ್‌ನಲ್ಲಿ ಈ ಔಟ್‌ಫಿಟ್ ಗ್ಲಾಮರಸ್ ಹುಡುಗಿಯರಿಗೆ ಹೇಳಿ ಮಾಡಿಸಿದಂತಿದೆ. ಇಂಡೋ-ವೆಸ್ಟರ್ನ್ ಲುಕ್‌ಗೆ ಸಾಥ್ ನೀಡುವಂತಿದೆ ಎಂದಿದ್ದಾರೆ.
ಪ್ರಿಂಟೆಡ್ ಶರಾರದ ವಿಶೇಷತೆ
ಶಿಲ್ಪಾ ಶೆಟ್ಟಿಯ ಈ ಪ್ರಿಂಟೆಡ್ ಶರಾರ ಕಲಾಂಕಾರಿ ಪ್ರಿಂಟ್ಸ್ ಹೊಂದಿದೆ. ಶೈನಿಂಗ್ ಲೈನ್ಸ್ ಈ ಶರಾರವನ್ನು ಮಿನುಗಿಸಿದೆ. ಮೆಜೆಂತಾ ಹಾಗೂ ಗಿಣಿ ಹಸಿರಿನ ಟ್ರಾಪಿಕಲ್ ಪ್ರಿಂಟ್ಸ್‌ನಂತೆ ಕಾಣುವ ಕಲಾಂಕಾರಿ ವರ್ಕ್ ಇಡೀ ಔಟ್‌ಫಿಟನ್ನು ಹೈಲೈಟ್ ಮಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಏನಿದು ಶರಾರ?
ಶರಾರ ಡಿಸೈನರ್‌ವೇರ್ ನಿನ್ನೆ ಮೊನ್ನೆಯ ಡಿಸೈನರ್‌ವೇರ್ ಅಲ್ಲ! ಬಹು ಹಿಂದಿನಿಂದಲೂ ಸಾಕಷ್ಟು ಬಾರಿ ಟ್ರೆಂಡಿಯಾಗಿ ಮರೆಯಾಗಿದ್ದ ಉಡುಪಿದು. ಹೌದು, ನೋಡಲು ದೊಗಲೆ ಪ್ಯಾಂಟ್‌ನಂತೆ ಕಾಣಿಸುವ ಈ ಉಡುಪು ಮೊಗಲರ ಕಾಲದಿಂದಲೂ ಇದೆ. ಕಾಲಿನ ಮೇಲ್ಭಾಗದಲ್ಲಿ ಟೈಟಾಗಿರುವ ಈ ಪ್ಯಾಂಟ್ ಕೆಳಭಾಗದಲ್ಲಿ ಫ್ಲೇರ್ ಹೊಂದಿರುತ್ತದೆ. ಶಾರ್ಟ್ ಕುರ್ತಾ ಹಾಗೂ ಕಮೀಜ್‌ನೊಂದಿಗೂ ಇದನ್ನು ಧರಿಸಲಾಗುತ್ತದೆ. ಆದರೆ, ಕಾಲಬದಲಾದಂತೆ ಇದು ಫ್ಯಾಷನ್ ವಿನ್ಯಾಸಕರ ಕೈಗೆ ಸಿಲುಕಿ ಇಂಡೋ-ವೆಸ್ಟರ್ನ್ ರೂಪವನ್ನು ಪಡೆದುಕೊಂಡಿದೆ.
ಸೆಲೆಬ್ರೆಟಿಗಳ ವಾರ್ಡ್ರೋಬ್ ಸೇರಿದ ಶರಾರ
ಕ್ರಾಪ್ ಟಾಪ್ ಹಾಗೂ ಬ್ರಾಲೆಟ್‌ನೊಂದಿಗೆ ಸೆಲೆಬ್ರೆಟಿಗಳು ಶರಾರ ಧರಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.