ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ನಟಿ ಶುಭಾ ರಕ್ಷಾಗೆ ಸ್ಕರ್ಟ್ ಮೇಲೆ ಲವ್ವಾಯ್ತು!

Shubha Raksha: ಪ್ರತಿ ಔಟ್‌ಫಿಟ್‌ಗಳಲ್ಲೂ ಗ್ಲಾಮರಸ್ ಆಗಿ ಕಾಣುವ ನಟಿ ಹಾಗೂ ಮಾಡೆಲ್ ಶುಭಾ ರಕ್ಷಾಗೆ ಇತ್ತೀಚೆಗೆ ಸ್ಕರ್ಟ್‌ಗಳ ಮೇಲೆ ಲವ್ ಆಗಿದೆಯಂತೆ! ಈ ಕುರಿತಂತೆ ಖುದ್ದು ಅವರೇ ಹೇಳಿಕೊಂಡಿದ್ದಾರೆ. ಅವರ ಫ್ಯಾಷನ್ ಲವ್ ಬಗ್ಗೆ ಇಲ್ಲಿದೆ ವಿವರ.

ಚಿತ್ರಗಳು: ಶುಭಾ ರಕ್ಷಾ
1/5

ಗ್ಲಾಮರಸ್ ಲುಕ್‌

ಒಂದಲ್ಲ ಒಂದು ಔಟ್‌ಫಿಟ್‌ಗಳಲ್ಲಿ ಸದಾ ಗ್ಲಾಮರಸ್ ಆಗಿ ಕಾಣುವ ನಟಿ ಹಾಗೂ ಮಾಡೆಲ್ ಶುಭಾ ರಕ್ಷಾಗೆ ಇತ್ತೀಚೆಗೆ ಸ್ಕರ್ಟ್ ಮೇಲೆ ಲವ್ ಆಗಿದೆಯಂತೆ. ಹೌದು, ಸದಾ ವೆಸ್ಟರ್ನ್ ಹಾಗೂ ಎಥ್ನಿಕ್‌ವೇರ್‌ ಹೀಗೆ ಎಲ್ಲ ಬಗೆಯ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವ ಅವರು, ಆಗಾಗ್ಗೆ ಸಾಕಷ್ಟು ಪ್ರಯೋಗಾತ್ಮಕ ಡಿಸೈನರ್‌ವೇರ್‌ಗಳನ್ನು ಧರಿಸುತ್ತಿರುತ್ತಾರೆ. ಅವರೇ ಹೇಳುವಂತೆ, ಎಲ್ಲರಿಗೂ ಗ್ಲಾಮರಸ್ ಆಗಿ ಕಾಣಲು ಸಾಧ್ಯವಿಲ್ಲ. ಪ್ರತಿಯೊಂದು ಉಡುಪಿನಲ್ಲೂ ಗ್ಲಾಮರಸ್ ಆಗಿ ಕಾಣಲು ಕೆಲವರಿಗೆ ಮಾತ್ರ ಸಾಧ್ಯ. ಅದು ನನಗೆ ಸಿದ್ಧಿಸಿದೆ ಎನ್ನುತ್ತಾರೆ.

2/5

ಶುಭಾ ರಕ್ಷಾ ಸ್ಕರ್ಟ್ ಲುಕ್

ಅಂದಹಾಗೆ, ನಾನು ಯಾವಾಗಲೂ ಒಂದೇ ರೀತಿಯ ಫ್ಯಾಷನ್‌ಗೆ ಅಂಟಿಕೊಂಡಿರುವುದಿಲ್ಲ! ಸದಾ ಬದಲಿಸುತ್ತಿರುತ್ತೇನೆ. ಈ ಮಧ್ಯೆ ನಾನು ಆನ್‌ಲೈನ್‌ನಲ್ಲಿ ಕೊಂಡಂತಹ ಟಾಪ್ ಹಾಗೂ ಕಲೆಕ್ಷನ್‌ನಲ್ಲಿದ್ದ ಸ್ಕರ್ಟ್ ಮಿಕ್ಸ್ ಮ್ಯಾಚ್ ಮಾಡಿ ಧರಿಸಿದೆ. ಇದು ಯಾವ ಮಟ್ಟಿಗೆ ನನಗೆ ಇಷ್ಟವಾಯಿತೆಂದರೆ ನೋಡುಗರಿಗೂ ಕೂಡ ಪ್ರಿಯವಾಗಿದೆ. ಅಲ್ಲದೇ ನೋಡಲು ಇದು ಡಿಸೈನರ್ ಔಟ್‌ಫಿಟ್ ಎಂದೆನಿಸಿದೆ ಎಂದಿದ್ದಾರೆ ಶುಭಾ ರಕ್ಷಾ.

3/5

ಶುಭಾ ರಕ್ಷಾ ಫ್ಯಾಷನ್ ಟಾಕ್

ನಾನು ಫ್ಯಾಷನ್ ಫಾಲೋ ಮಾಡುವುದಕ್ಕಿಂತ ಇಂದು ಯಾವುದು ಚಾಲ್ತಿಯಲ್ಲಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳುತ್ತೇನೆ. ನಂತರ ಅದಕ್ಕೆ ತಕ್ಕಂತೆ ಟ್ರೆಂಡ್‌ಗೆ ಹೊಂದಿಕೊಳ್ಳುತ್ತೇನೆ. ಯಾವತ್ತೂ ಧರಿಸುವ ಔಟ್‌ಫಿಟ್‌ ಬಗ್ಗೆ ನಿರ್ಲಕ್ಷ್ಯ ತೋರುವುದಿಲ್ಲ. ನನಗೆ ನಾನೇ ಟ್ರೆಂಡ್ ಸೆಟ್ಟರ್ ಆಗುತ್ತೇನೆ ಎನ್ನುತ್ತಾರೆ ಶುಭಾ ರಕ್ಷಾ.

4/5

ಶುಭಾ ರಕ್ಷಾ ಚಾಯ್ಸ್

ನನಗೆ ಬ್ಲಾಕ್ ಹಾಗೂ ರೆಡ್‌ನ ಎಲ್ಲ ಶೇಡ್‌ಗಳು ನನಗಿಷ್ಟ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗ ಸೀಸನ್‌ಗೆ ತಕ್ಕಂತೆ ಲೆಕ್ಕವಿಲ್ಲದಷ್ಟು ಬಗೆಯ ಗ್ಲಾಮರಸ್ ಔಟ್‌ಫಿಟ್‌ಗಳನ್ನು ಧರಿಸಬೇಕಾಗುತ್ತದೆ ಎನ್ನುವ ಶುಭಾ ರಕ್ಷಾ ಈಗಾಗಲೇ ಸಾಕಷ್ಟು ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದಾರೆ.

5/5

ಸ್ಕರ್ಟ್ಸ್ ಪ್ರಿಯರಿಗೆ ಶುಭಾ ರಕ್ಷಾ ನೀಡಿದ 5 ಸಿಂಪಲ್ ಟಿಪ್ಸ್

  • ನಿಮ್ಮ ಪರ್ಸನಾಲಿಟಿಗೆ ಮ್ಯಾಚ್ ಆಗುವ ಸ್ಕರ್ಟ್ ಆಯ್ಕೆ ಮಾಡಿ.
  • ಆದಷ್ಟೂ ಸೀಸನ್‌ಗೆ ತಕ್ಕಂತಹ ವಿನ್ಯಾಸ ಚೂಸ್ ಮಾಡಿ.
  • ಮಾಡರ್ನ್ ಟಚ್ ನೀಡಲು ಸ್ಲಿಟ್ ಇಲ್ಲವೇ ಕ್ರಾಪ್ ಟಾಪ್ ಧರಿಸಿ.
  • ಸಿಂಪಲ್ ಲುಕ್ ನಿಮ್ಮದಾಗಿರಲಿ.
  • ಮೇಕೋವರ್ ಆಕರ್ಷಕವಾಗಿರಲಿ.

ಶೀಲಾ ಸಿ ಶೆಟ್ಟಿ

View all posts by this author