-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನ್ನಡದ ಸ್ಟೈಲಿಶ್ ರ‍್ಯಾಪರ್ ಹಾಗೂ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ಇಶಾನಿ (Star Fashion 2025) ಸಖತ್ ಫ್ಯಾಷೆನಬಲ್ ಹುಡುಗಿ. ಅಷ್ಟೇಕೆ! ತಮ್ಮ ವಾರ್ಡ್ರೋಬ್ ತುಂಬೆಲ್ಲಾ ನಾನಾ ಬಗೆಯ ಜಾಕೆಟ್‌ಗಳನ್ನು ತುಂಬಿಸಿಕೊಂಡಿದ್ದಾರೆ. ಅವರ ಜಾಕೆಟ್ ಪ್ರೇಮ, ಫ್ಯಾಷನ್ ಲೈಫ್ ಹಾಗೂ ಮೇಕಪ್ ಬಗೆಗಿನ ಒಂದಿಷ್ಟು ವಿಷಯಗಳನ್ನು ಅವರು ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.
ವಿಶ್ವವಾಣಿ ನ್ಯೂಸ್: ಕನ್ನಡದ ಫ್ಯಾಷನೆಬಲ್ ರ‍್ಯಾಪರ್ ಎಂದು ಜನ ಗುರುತಿಸುತ್ತಾರಲ್ಲ! ಈ ಬಗ್ಗೆ ಹೇಳಿ?
ಇಶಾನಿ: ಈ ಬಗ್ಗೆ ನನಗೆ ಸಂತಸವಿದೆ. ಅದರಲ್ಲೂ ಫ್ಯಾಷೆನಬಲ್ ಎಂದು ಗುರುತಿಸಿಕೊಳ್ಳುವುದು ಸುಲಭವೇನಲ್ಲ!

ವಿಶ್ವವಾಣಿ ನ್ಯೂಸ್: ನೀವು ಜಾಕೆಟ್ ಲವ್ವರ್ ಎನ್ನುತ್ತಾರಲ್ಲ? ನಿಜವೇ?
ಇಶಾನಿ: ಹೌದು. ನಾನು ಜಾಕೆಟ್ ಲವ್ವರ್! ನನ್ನ ಬಳಿ ಲೆಕ್ಕವಿಲ್ಲದಷ್ಟು ಬಗೆಯ ಜಾಕೆಟ್‌ಗಳಿವೆ. ಸಾಕಷ್ಟು ಜಾಕೆಟ್‌ಗಳು ನನ್ನ ಲಕ್ಕಿ ಚಾರ್ಮ್ ಕೂಡ. ಲೆದರ್, ಫರ್, ಟ್ರಂಚ್ ಸ್ಟೈಲ್ ಹೀಗೆ ನಾನಾ ಬಗೆಯ ಜಾಕೆಟ್‌ಗಳಿವೆ. ಅವುಗಳನ್ನು ಧರಿಸಿದಾಗ ನನಗೆ ಖುಷಿಯಾಗುತ್ತದೆ.
ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಇಶಾನಿ: ನಾನು ಔಟಿಂಗ್ ಹೋದಾಗಲೆಲ್ಲಾ ಆದಷ್ಟೂ ಸನ್‌ಗ್ಲಾಸ್ ಬಳಸುತ್ತೇನೆ. ಸದಾ ಓಪನ್ ಹೇರ್‌ಸ್ಟೈಲ್‌ನಲ್ಲಿ ಫಂಕಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಗೋಲ್ಡ್ ಕವರ್ಡ್ ಜ್ಯುವೆಲರಿಗಳೆಂದರೇ ನನಗಿಷ್ಟ!

ವಿಶ್ವವಾಣಿ ನ್ಯೂಸ್: ನೀವು ಮೇಕಪ್ ಪ್ರಿಯರಾ?
ಇಶಾನಿ: ಮನೆಯಲ್ಲಿದ್ದಾಗ ನೋ ಮೇಕಪ್. ಆದರೆ, ಹೊರಗಡೆ ಹೋದಾಗ ಅಗತ್ಯಕ್ಕೆ ತಕ್ಕಂತೆ ಮೇಕಪ್ ಹಚ್ಚುತ್ತೇನೆ. ಮೇಕಪ್ ನನಗಿಷ್ಟ ಆದರೆ, ಅದನ್ನು ಶೂಟಿಂಗ್ ಹಾಗೂ ಮ್ಯೂಸಿಕ್ ಕಾನ್ಸೆರ್ಟ್‌ಗಳಲ್ಲಿ ಮಾತ್ರ ಹಾಕುತ್ತೇನೆ.
ವಿಶ್ವವಾಣಿ ನ್ಯೂಸ್: ನಿಮ್ಮ ಬ್ಯೂಟಿ ಸಿಕ್ರೇಟ್?
ಇಶಾನಿ: ನಮ್ಮ ಅಪ್ಪ- ಅಮ್ಮನ ಜೀನ್ಸ್! ಹೌದು, ನಾನೇನೂ ಬ್ಯೂಟಿ ಕೇರ್ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ನ್ಯಾಚುರಲ್ ಬ್ಯೂಟಿ ನನ್ನದು.

ವಿಶ್ವವಾಣಿ ನ್ಯೂಸ್: ನಿಮ್ಮ ಫಿಟ್ನೆಸ್ ಬಗ್ಗೆ ಹೇಳಿ?
ಇಶಾನಿ: ಜಿಮ್‌ಗೆ ಹೋಗುತ್ತೇನೆ. ಊಟ-ತಿಂಡಿಯಲ್ಲಿ ಆದಷ್ಟೂ ಎಚ್ಚರ ವಹಿಸುತ್ತೇನೆ. ಜಂಕ್ ಫುಡ್‌ನಿಂದ ದೂರವಿರುತ್ತೇನೆ. ಅನ್ನ ತಿನ್ನುವುದು ಕಡಿಮೆ. ರಾಗಿ ಗಂಜಿ ಕುಡಿಯುತ್ತೇನೆ. ಸ್ಟ್ರಿಕ್ಟ್ ಡಯಟ್ ಪಾಲಿಸುತ್ತೇನೆ.
ವಿಶ್ವವಾಣಿ ನ್ಯೂಸ್: ನಿಮ್ಮ ಅಭಿಮಾನಿಗಳಿಗೆ ನೀವು ನೀಡುವ ಫ್ಯಾಷನ್ & ಬ್ಯೂಟಿ ಟಿಪ್ಸ್ ಏನು ?
ಇಶಾನಿ: ನಿಮ್ಮ ಪರ್ಸಾನಾಲಿಟಿಗೆ ತಕ್ಕಂತೆ ಡ್ರೆಸ್‌ಕೋಡ್ ಪಾಲಿಸಿ.
ನಿಮ್ಮ ಡಯಟ್ ಹಾಗೂ ಫಿಟ್ನೆಸ್ ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ. ಹಾಗಾಗಿ ತಪ್ಪದೇ ಫಾಲೋ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Fashion Trend 2025: ಫಂಕಿ ಲುಕ್ ನೀಡುವ ವ್ರಾಪ್ ಹೆಡ್ ಬ್ಯಾಂಡ್ಸ್