| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಥ್ನಿಕ್‌ವೇರ್ಸ್, ಮಿಕ್ಸ್-ಮ್ಯಾಚ್ ಡಿಸೈನರ್‌ವೇರ್ಸ್ ಸೇರಿದಂತೆ ವೈವಿಧ್ಯಮಯ ಕಂಫರ್ಟಬಲ್ ಫ್ಯಾಷನ್‌ವೇರ್ಸ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ತಾರೆಯರು ರಂಗು ರಂಗಾಗಿ ಹೋಳಿ (Stars Holi Fashion 2025) ಆಚರಿಸಿದರು. ಹಬ್ಬದ ಥೀಮ್‌ಗೆ ತಕ್ಕಂತೆ ಎಥ್ನಿಕ್ ಲುಕ್‌ನಲ್ಲಿ ಸಿನಿಮಾ ನಟಿಯರು ಕಾಣಿಸಿಕೊಂಡರೆ, ನಟರು ತಮಗೆ ಕಂಫರ್ಟಬಲ್ ಎಂದನಿಸಿದ ಕ್ಯಾಶುವಲ್ ವೇರ್ಸ್ ಹಾಗೂ ವೈಟ್ ಧೋತಿ-ಕುರ್ತಾ, ಪೈಜಾಮ-ಶಾರ್ಟ್ ಕುರ್ತಾಗಳಲ್ಲಿ ಕಾಣಿಸಿಕೊಂಡರು. ಇನ್ನು ಕಿರುತೆರೆ ನಟ-ನಟಿಯರು ತಮ್ಮದೇ ಆದ ಹೋಳಿ ಉಡುಪುಗಳಲ್ಲಿ ಮಿಂದೆದ್ದರು. ಪೇಜ್3 ಹಾಗೂ ಫ್ಯಾಷನ್ ಸೆಲೆಬ್ರೆಟಿಗಳು ರಂಗಿನ ಹಬ್ಬದ ಡ್ರೆಸ್‌ಕೋಡ್‌ನಲ್ಲಿ ಹೋಳಿ ಹಬ್ಬವನ್ನು ಕಲರ್‌ಫುಲ್ ಆಗಿ ಆಚರಿಸಿದರು. ಹೀಗೆ ತಾರೆಯರು, ಮಾಡೆಲ್‌ಗಳು ಹಾಗೂ ಇತರೇ ಕ್ಷೇತ್ರದ ಸೆಲೆಬ್ರೆಟಿಗಳು ಫೆಸ್ಟಿವ್ ಸೆಲೆಬ್ರೇಷನ್‌ಗೆ ಹೊಂದುವಂತೆ ವೈವಿಧ್ಯಮಯ ಔಟ್‌ಫಿಟ್‌ಗಳನ್ನು ಧರಿಸಿ, ಸಂಭ್ರಮಿಸಿದರು.

ಬಾಲಿವುಡ್ ತಾರೆಯರ ಹೋಳಿ ಔಟ್‌ಫಿಟ್ಸ್
ಬಾಲಿವುಡ್‌ನಲ್ಲಿ ಕೇಳಬೇಕೇ! ಆಕರ್ಷಕ ಡಿಸೈನರ್ ಔಟ್‌ಫಿಟ್‌ಗಳಲ್ಲಿ ನಟ-ನಟಿಯರು ಹೋಳಿ ಪಾರ್ಟಿ ಮಾಡಿದರು. ಕೆಲವೆಡೆ ಡ್ರೆಸ್‌ಕೋಡ್‌ಗೆ ತಕ್ಕಂತೆ ವೈಟ್ ಕುರ್ತಾ ಹಾಗೂ ಪೈಜಾಮದಲ್ಲಿ ನಟರು ಕಾಣಿಸಿಕೊಂಡರೆ, ನಟಿಯರು ಮಾತ್ರ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡು ಪೋಸ್ ನೀಡಿದರು. ಈ ಲಿಸ್ಟ್‌ನಲ್ಲಿ, ಬಿಗ್ ಬಿ ಫ್ಯಾಮಿಲಿ, ಕತ್ರೀನಾ ಕೈಫ್-ವಿಕ್ಕಿ ಕೌಶಲ್, ರಣ್‌ದೀಪ್ ಹೂಡಾ, ಕಾರ್ತಿಕ್ ಆರ್ಯನ್, ಶಿಲ್ಪಾ ಶೆಟ್ಟಿ, ಕಂಗನಾ, ಸೋನಾಕ್ಷಿ ಸಿನ್ಹಾ, ರಾಶಿ ಖನ್ನಾ, ಮಿಲಿಂದ್ ಸುಮನ್, ಊರ್ವಶಿ ರೌತೇಲಾ, ತಮನ್ನಾ, ವಿಜಯ್ ವರ್ಮಾ, ಟೈಗರ್ ಶ್ರಾಫ್, ಅನನ್ಯಾ, ಶ್ರದ್ಧಾ, ದಿಶಾ ಪಟಾನಿ, ಜಾನ್ವಿ, ಅಂಕಿತಾ, ಇಶಾ ಡಿಯೋಲ್, ಸ್ಮೃತಿ ಖನ್ನಾ ಸ್ನೇಹಿತರ ವರ್ಗ ಸೇರಿದಂತೆ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಡಿಸೈನರ್ ಔಟ್‌ಫಿಟ್‌ಗಳಲ್ಲಿ ಹೈಲೈಟ್ ಆದರು.
ಈ ಸುದ್ದಿಯನ್ನೂ ಓದಿ | Holi Beauty Tips: ಹೋಳಿಯಾಟದ ನಂತರ ತ್ವಚೆ & ಕೂದಲ ಆರೈಕೆ ಹೇಗೆ?

ಹೋಳಿಯಲ್ಲಿ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡ ತಾರೆಯರು
ಬಾಲಿವುಡ್‌ನ ಬಿಚ್ಚಮ್ಮರೆಂದೇ ಹೆಸರಾದ ನಟಿ ಪೂನಂ ಪಾಂಡೇ, ಶರ್ಲೀನ್, ಚೋಪ್ರಾ, ಸನ್ನಿ ಲಿಯೋನ್ ಸೇರಿದಂತೆ ಸಾಕಷ್ಟು ನಟಿಯರು ಹಾಟ್ & ಗ್ಲಾಮರಸ್ ಔಟ್‌ಫಿಟ್‌ನಲ್ಲಿ ಹೋಳಿ ಆಚರಿಸಿ, ಪಡ್ಡೆ ಹುಡುಗರ ಗಮನ ಸೆಳೆದರು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)