ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yoga Fashionwears 2025: ಯೋಗ ಪ್ರಿಯರಿಗೂ ಬಂತು ಟ್ರೆಂಡಿ ಫ್ಯಾಷನ್ ವೇರ್ಸ್

Yoga Fashionwears 2025: ಯೋಗ ಪ್ರಿಯರಿಗೂ ಇಷ್ಟವಾಗುವಂತಹ ಧರಿಸಿದಾಗ ಆರಾಮ ಎಂದೆನಿಸುವ ಯೋಗ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಬಿಡುಗಡೆಗೊಂಡಿವೆ. ಫ್ಯಾಷನೆಬಲ್ ಯೋಗ ಫ್ಯಾಷನ್‌ವೇರ್‌ಗಳು ಟ್ರೆಂಡಿಯಾಗಿವೆ. ಇಂದು ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ. ಆಯ್ಕೆ ಹೇಗೆ? ಎಂಬುದರ ಕುರಿತಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್
1/5

ಯೋಗ ಮಾಡುವ ಸಮಯದಲ್ಲಿ ಆರಾಮ ಎಂದೆನಿಸುವ ಫ್ಯಾಷನೆಬಲ್ ಯೋಗ ಫ್ಯಾಷನ್‌ವೇರ್‌ಗಳು ಇಂದು ಟ್ರೆಂಡಿಯಾಗಿವೆ. ಹೌದು, ಯೋಗ ಪ್ರಿಯರ ಅಭಿಲಾಷೆಗೆ ತಕ್ಕಂತೆ, ಯೋಗ ಮಾಡುವಾಗ ಧರಿಸುವ ಕಂಫರ್ಟಬಲ್ ಫ್ಯಾಷನ್‌ವೇರ್‌ಗಳು ಇಂದು ಎಲ್ಲಾ ವಯೋಮಾನದವರನ್ನು ಸೆಳೆದಿವೆ.

2/5

ಗ್ಲಾಮರಸ್ ಯೋಗ ಔಟ್‌ಫಿಟ್ಸ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರೇಮಿಗಳು ಹೆಚ್ಚಾದಂತೆ ಗ್ಲಾಮರಸ್ ಲುಕ್ ನೀಡುವ ಯೋಗದ ಔಟ್‌ಫಿಟ್‌ಗಳು ಹೆಚ್ಚು ಪ್ರಚಲಿತಗೊಂಡಿವೆ. ಫಿಟ್ಟಾಗಿ ಕೂರುವ ಕ್ರಾಪ್ ಟಾಪ್‌ನಂತಹ ಸ್ಲಿವ್ಲೆಸ್ ಟಾಪ್, ಲೆಗ್ಗಿಂಗ್ಸ್‌ನಂತಿರುವ ಬ್ರಿಥೆಬಲ್ ಪ್ಯಾಂಟ್‌ಗಳು ನೈಲಾನ್, ಪಾಲಿಸ್ಟರ್, ಸ್ಪಾಂಡೆಕ್ಸ್ ಹಾಗೂ ಕಾಟನ್ ಫ್ಯಾಬ್ರಿಕ್‌ನಲ್ಲಿ ಹೆಚ್ಚಾಗಿ ದೊರೆಯುತ್ತಿದ್ದು, ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಮಾರಾಟಗಾರರು.

3/5

ಮಿಕ್ಸ್-ಮ್ಯಾಚ್ ಫ್ಯಾಷನ್

ಯೋಗ ಫ್ಯಾಷನ್‌ವೇರ್‌ನಲ್ಲಿ ಧರಿಸುವ ಪ್ಯಾಂಟ್‌ಗೆ ಮಿಕ್ಸ್-ಮ್ಯಾಚ್ ಮಾಡುವ ಟ್ರೆಂಡ್ ಕೂಡ ಚಾಲ್ತಿಯಲ್ಲಿದೆ. ಕ್ರಾಪ್ಡ್ ಟ್ಯಾಂಕ್ ಟಾಪ್ಸ್, ಶಾರ್ಟ್ ಟೀ ಶರ್ಟ್, ಸ್ಲಿಮ್ ಫಿಟ್ ಟೀ ಶರ್ಟ್‌ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಅಲ್ಲದೇ, ಇದೀಗ ಪಾಸ್ಟೆಲ್ ಶೇಡ್‌ಗಳು ಹೆಚ್ಚು ಜನಪ್ರಿಯಗೊಂಡಿದ್ದು, ಅದರೊಂದಿಗೆ ಯುವತಿಯರು ಮಿಲಿಟರಿ ಸ್ಟೈಲ್ ಯೋಗ ಔಟ್‌ಫಿಟ್ಸ್, ಫ್ಲೋರಲ್ ಯೋಗ ಸೆಟ್, ಹಾಲ್ಟರ್ ಟ್ಯಾಂಕ್ ಟಾಪ್, ರಾಸಾ ಟಾಪ್, ಹೈ ವೇಸ್ಟ್ ಲೆಗ್ಗಿಂಗ್ಸ್, ಡಿಸ್ಕೋ ಹೈ ವೇಸ್ಟ್ ಪ್ಯಾಂಟ್ಸ್, ಟ್ವಿಸ್ಟ್ ಬ್ಯಾಕ್ ಟೀ ಶರ್ಟ್, ರೈಡರ್ಸ್ ಲೆಗ್ಗಿಂಗ್ಸ್, ಒಪನ್ ಬ್ಯಾಕ್ ಟೀ ಶರ್ಟ್, ಬಾಡಿ ಸೂಟ್ಸ್, ಹಾರೆಮ್ ಪ್ಯಾಂಟ್ಸ್, ಮೆಶ್ ಕಟ್ಔಟ್ಸ್ ಪ್ಯಾಂಟ್ಸ್ ಆಯ್ಕೆ ಮಾಡತೊಡಗಿದ್ದಾರೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

4/5

ಮೆನ್ಸ್ ಯೋಗ ಔಟ್‌ಫಿಟ್ಸ್

ಇನ್ನು, ಪುರುಷರ ಯೋಗ ಔಟ್‌ಫಿಟ್ ವೆರೈಟಿಯಲ್ಲಿ ಎಂದಿನಂತೆ ಈಗಲೂ ಅತಿ ಹೆಚ್ಚು ಜನಪ್ರಿಯವಾಗಿರುವುದು ಯೋಗ ಶಾರ್ಟ್ಸ್, ವೆಂಟಿಲೇಷನ್ ಟ್ಯಾಂಕ್ ಟೀ ಶರ್ಟ್, ಇಂಟೆಂಟ್ ಪ್ಯಾಂಟ್, ಯೋಗ ಸ್ವೆಟ್ ಪ್ಯಾಂಟ್, ಕಂಪ್ರೆಶನ್ ಪ್ಯಾಂಟ್ಸ್, ಯೋಗ ಜಾಗರ್ಸ್ ಎನ್ನುತ್ತಾರೆ ಓಂ ಯೋಗ ಸ್ಟುಡಿಯೋನ ಯೋಗ ಮಾಸ್ಟರ್ ರಾಜ್.

5/5

ಯೋಗ ಔಟ್‌ಫಿಟ್ಸ್ ಆಯ್ಕೆ ಹೀಗಿರಲಿ

  • ಯೋಗ ಔಟ್‌ಫಿಟ್ಸ್ ಧರಿಸಿದಾಗ ಕಂಪರ್ಟಬಲ್ ಫೀಲ್ ಆಗಬೇಕು.
  • ಬ್ರಿಥೆಬಲ್ ಯೋಗ ಔಟ್ಫಿಟ್ಸ್ ಆಯ್ಕೆ ಮಾಡುವುದು ಉತ್ತಮ.
  • ಈ ಔಟ್‌ಫಿಟ್‌ಗಳು ಯಾವುದೇ ಔಟ್‌ಫಿಟ್ ದೇಹದ ಅಂಗಾಂಗವನ್ನು ಹಿಡಿದಿಡಬಾರದು.
  • ಫಿಟ್ಟಿಂಗ್ ಇದ್ದರೂ ಕೈ ಕಾಲು ಸುಲಭವಾಗಿ ಆಡಿಸುವಂತಹ ಔಟ್‌ಫಿಟ್ ಆಯ್ಕೆ ಮಾಡಬೇಕು.
  • ಧರಿಸುವ ಟಾಪ್ ಅಥವಾ ಟೀ ಶರ್ಟ್ ಅಪ್ ಸೈಡ್ ಡೌನ್ ಆದಾಗ ನೆಕ್‌ಲೈನ್ ಅಥವಾ ಕಾಲರ್ ಮುಖದ ಮೇಲೆ ಇಳಿಯಬಾರದು.
  • ದೇಹ ಫ್ಲೆಕ್ಸಿಬಲ್ ಆಗಿರುವಂತೆ, ಧರಿಸುವ ಔಟ್‌ಫಿಟ್ ಕೂಡ ಸಾಫ್ಟ್ ಆಗಿರಬೇಕು.

ಶೀಲಾ ಸಿ ಶೆಟ್ಟಿ

View all posts by this author