ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yoga Hairstyles 2025: ಯೋಗ ಮಾಡುವ ಹುಡುಗಿಯರಿಗಾಗಿ ಕಂಫರ್ಟಬಲ್ ಹೇರ್‌ಸ್ಟೈಲ್ಸ್

Yoga Hairstyles 2025: ಯೋಗ ಮಾಡುವ ಹುಡುಗಿಯರಿಗೆ ಕಂಫರ್ಟಬಲ್ ಆಗುವಂತಹ ಒಂದಿಷ್ಟು ಹೇರ್‌ಸ್ಟೈಲ್‌ಗಳಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ಹಾಕಿಕೊಂಡಾಗ ಕಂಫರ್ಟಬಲ್ ಎಂದೆನಿಸುತ್ತವೆ. ಅವು ಯಾವುವು? ಎಂಬುದರ ಬಗ್ಗೆ ಯೋಗ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್
1/5

ಯೋಗ ಪ್ರಿಯ ಹುಡುಗಿಯರಿಗೆ ಆರಾಮ ಎಂದೆನಿಸುವ ಒಂದಿಷ್ಟು ಬಗೆಯ ಹೇರ್‌ಸ್ಟೈಲ್‌ಗಳನ್ನು ಹೇರ್‌ಸ್ಟೈಲಿಸ್ಟ್‌ಗಳು ಡಿಕ್ಲೇರ್ ಮಾಡಿದ್ದಾರೆ. ನೋಡಲು ಆಕರ್ಷಕವಾಗಿ ಕಾಣುವ ಇವು ಹಾಕಿಕೊಂಡಾಗ ಕಂಫರ್ಟಬಲ್ ಎಂದೆನಿಸುತ್ತವೆ.

ಆಕರ್ಷಕ ರಿವರ್ಸ್ ಫ್ರೆಂಚ್ ಫ್ಲಾಟ್ ಜಡೆ

ಫ್ರೆಂಚ್ ಫ್ಲಾಟ್ ಎಂದೇ ಹೆಸರಾಗಿರುವ ಈ ಹೇರ್‌ಸ್ಟೈಲ್‌ ಅನ್ನು ಉಲ್ಟಾ ಹಾಕಿದಾಗ ಅದನ್ನು ರಿವರ್ಸ್ ಫ್ರೆಂಚ್ ಜಡೆಯೆಂದು ಹೇಳಬಹುದು. ಈ ಜಡೆ ಹಾಕುವುದು ಸುಲಭ. ಕೂದಲನ್ನು ಸ್ಟಿಫ್ಫಾಗಿ ಇರಿಸುತ್ತದೆ. ನೋಡಲು ಚೆನ್ನಾಗಿ ಬಿಂಬಿಸುತ್ತದೆ.

2/5

ಟಾಪ್ ನಾಟ್ ಹೇರ್‌ಸ್ಟೈಲ್‌

ನೆತ್ತಿ ಮೇಲೆ ಹಾಕುವ ತುರುಬಿಗೆ ಹೀಗೆ ಕರೆಯಲಾಗುತ್ತದೆ. ಈ ಹೇರ್‌ಸ್ಟೈಲ್‌ ಮಾಡಿದಲ್ಲಿ ಯೋಗ ಮಾಡುವಾಗ ಹೆಚ್ಚು ಸೆಕೆಯಾಗದು. ಆರಾಮ ಎನಿಸುವ ಹೇರ್‌ಸ್ಟೈಲ್‌ ಇದು. ಅತಿ ಹೆಚ್ಚು ತಲೆ ಭಾಗವನ್ನು ಬಗ್ಗಿಸಿ, ಕೆಳಗಿಳಿಸಿ ಮಾಡುವ ಯೋಗಾಸನಕ್ಕೆ ಈ ಹೇರ್ ಸ್ಟೈಲ್ ನಾಟ್ ಓಕೆ.

3/5

ಆರಾಮದಾಯಕ ಸೈಡ್ ಜಡೆ

ಇದು ನಮ್ಮ ಸಾಂಪ್ರದಾಯಿಕ ಶೈಲಿಯ ಜಡೆಯ ವಿನ್ಯಾಸದ ಒಂದು ಶೈಲಿ. ಆದರೆ, ಈ ಸ್ಟೈಲ್‌ನಲ್ಲಿ ಜಡೆಯನ್ನು ಕಿವಿಯ ಹಿಂದೆ ಅಂದರೆ ಕೊಂಚ ಸೈಡಿಗೆ ಹಾಕಬೇಕಾಗುತ್ತದೆ. ಇದನ್ನು ಹೆಣೆಯುವುದು ತೀರಾ ಸಿಂಪಲ್. ಗ್ಲಾಮರಸ್ ಲುಕ್ ನೀಡದಿದ್ದರೂ ಕಂಫರ್ಟಬಲ್ ಫೀಲ್ ನೀಡುತ್ತದೆ.

4/5

ಡಿಫರೆಂಟ್ ಲುಕ್ ನೀಡುವ ಬಬಲ್ ಪೋನಿಟೇಲ್

ಬಬಲ್ ಪೋನಿಟೇಲ್‌ಗಾಗಿ ಹೀಗೆ ಮಾಡಿ. ರಬ್ಬರ್ ಬ್ಯಾಂಡ್‌ನಿಂದ ನೆತ್ತಿಯ ಸಮೀಪ ಜುಟ್ಟು ಹಾಕಿ, ನಂತರ ಇಡೀ ಕೂದಲನ್ನು ಸಮನಾಂತರವಾಗಿ ತೆಗೆದುಕೊಂಡು ಮಧ್ಯೆ ಮಧ್ಯೆ ಚಿಕ್ಕ ಕಲರ್ ರಬ್ಬರ್ ಬ್ಯಾಂಡ್ ಹಾಕುತ್ತಾ ಬಂದಲ್ಲಿ ಬಬ್ಬಲ್ ಪೋನಿಟೇಲ್ ಹೇರ್‌ಸ್ಟೈಲ್‌ ಸಿದ್ಧ.

5/5

ಉದ್ದ ಕೂದಲಿನವರಿಗೆ ಫಿಶ್‌ಟೇಲ್ ಬ್ರೈಡ್ಸ್

ಉದ್ದ ಕೂದಲಿರುವವರು ಫಿಶ್ ಟೇಲ್ ವಿನ್ಯಾಸ ಮಾಡಿಕೊಳ್ಳಬಹುದು. ಇದು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ ಹಾಗೂ ಕೂದಲು ಹಾರಾಡುವುದಿಲ್ಲ. ಜಡೆಯನ್ನೇ ವಿಭಿನ್ನವಾಗಿ ಹಾಕುವುದು ಈ ಹೇರ್‌ಸ್ಟೈಲ್‌ನ ಹೈಲೈಟ್.

ಶೀಲಾ ಸಿ ಶೆಟ್ಟಿ

View all posts by this author