ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel- Hamas: ಗಾಜಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ; ಹಮಾಸ್‌ ಭಯೋತ್ಪಾದಕ ಸೇರಿ 5 ಅಲ್ ಜಜೀರಾ ಪತ್ರಕರ್ತರು ಸಾವು

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಕದನ ಇನ್ನೂ ನಿಂತಿಲ್ಲ. ಭಾನುವಾರ ಗಾಜಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತನಂತೆ ನಟಿಸುತ್ತಿದ್ದ ಹಮಾಸ್ ಸೆಲ್ ನಾಯಕನನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಸಾವನ್ನಪ್ಪಿದ ಐದು ಅಲ್ ಜಜೀರಾ ಪತ್ರಕರ್ತರ ಗುಂಪಿನಲ್ಲಿ 28 ವರ್ಷದ ಅನಸ್ ಅಲ್-ಶರೀಫ್ ಕೂಡ ಇದ್ದ ಎಂದು ಇಸ್ರೇಲ್‌ ಸೇನೆ ಹೇಳಿದೆ.

ಟೆಲ್‌ ಅವೀವ್‌: ಹಮಾಸ್‌ ಹಾಗೂ ಇಸ್ರೇಲ್‌ (Israel- Hamas) ನಡುವಿನ ಕದನ ಇನ್ನೂ ನಿಂತಿಲ್ಲ. ಭಾನುವಾರ ಗಾಜಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತನಂತೆ ನಟಿಸುತ್ತಿದ್ದ ಹಮಾಸ್ ಸೆಲ್ ನಾಯಕನನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಆದಾಗ್ಯೂ, ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಹೊರಗೆ ಪತ್ರಕರ್ತರನ್ನು ಇರಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಪೂರ್ವ ಗಾಜಾ ನಗರದ ಟೆಂಟ್ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ ಐದು ಅಲ್ ಜಜೀರಾ ಪತ್ರಕರ್ತರ ಗುಂಪಿನಲ್ಲಿ 28 ವರ್ಷದ ಅನಸ್ ಅಲ್-ಶರೀಫ್ ಕೂಡ ಇದ್ದ ಎಂದು ಇಸ್ರೇಲ್‌ ಸೇನೆ ಹೇಳಿದೆ.

ಅಲ್-ಶರೀಫ್ ಹಮಾಸ್ ಘಟಕದ ಮುಖ್ಯಸ್ಥನಾಗಿದ್ದ. ಇಸ್ರೇಲಿ ನಾಗರಿಕರು ಮತ್ತು ಐಡಿಎಫ್ (ಇಸ್ರೇಲಿ) ಪಡೆಗಳ ವಿರುದ್ಧ ರಾಕೆಟ್ ದಾಳಿಗಳನ್ನು ನಡೆಸುವ ಯೋಜನೆ ನಡೆಸಲಾಗಿತ್ತು. ಹೀಗಾಗಿ ದಾಳಿ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ. ಸೇನೆಯು ಗಾಜಾದಲ್ಲಿ ಕಂಡುಬಂದ ಗುಪ್ತಚರ ಮತ್ತು ದಾಖಲೆಗಳನ್ನು ಪುರಾವೆಯಾಗಿ ಉಲ್ಲೇಖಿಸಿ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಪತ್ರಕರ್ತರ ಗುಂಪುಗಳು ಮತ್ತು ಅಲ್ ಜಜೀರಾ ಈ ಹತ್ಯೆಗಳನ್ನು ಖಂಡಿಸಿವೆ. ಬಲಿಯಾದವರಲ್ಲಿ ಅಲ್ ಜಜೀರಾ ವರದಿಗಾರರಾದ ಅನಸ್ ಅಲ್-ಶರೀಫ್ ಮತ್ತು ಮೊಹಮ್ಮದ್ ಕ್ರೈಕೆ, ಹಾಗೆಯೇ ಕ್ಯಾಮೆರಾಮೆನ್ ಇಬ್ರಾಹಿಂ ಜಹೆರ್, ಮೊಮೆನ್ ಅಲಿವಾ ಮತ್ತು ಮೊಹಮ್ಮದ್ ನೌಫಲ್ ಸೇರಿದ್ದಾರೆ ಎಂದು ಪತ್ರಿಕಾ ಸಂಸ್ಥೆ ತಿಳಿಸಿದೆ.

ಗಾಜಾದಿಂದ ಅಲ್-ಷರೀಫ್ ವರದಿ ಮಾಡುವುದರಿಂದ ಆತನ ಜೀವಕ್ಕೆ ಅಪಾಯವಿದೆ ಎಂದು ಪತ್ರಿಕಾ ಸ್ವಾತಂತ್ರ್ಯ ಗುಂಪು ಮತ್ತು ವಿಶ್ವಸಂಸ್ಥೆಯ ತಜ್ಞರು ಈ ಹಿಂದೆ ಎಚ್ಚರಿಸಿದ್ದರು. ಜುಲೈನಲ್ಲಿ ಅಂತರರಾಷ್ಟ್ರೀಯ ಸಮುದಾಯವು ಅಲ್ ಷರೀಫ್ ಅವರನ್ನು ರಕ್ಷಿಸುವಂತೆ ಒತ್ತಾಯಿಸಿದ ಪತ್ರಕರ್ತರ ರಕ್ಷಣಾ ಸಮಿತಿಯು ಒಂದು ಹೇಳಿಕೆಯಲ್ಲಿ, ಇಸ್ರೇಲ್ ಅವರ ವಿರುದ್ಧದ ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ ಎಂದು ಹೇಳಿದೆ. ಅಲ್-ಷರೀಫ್ ಸಾವಿಗೂ ಮುನ್ನ ಪೋಸ್ಟ್‌ ಒಂದನ್ನು ಮಾಡಿದ್ದು, ಅದರಲ್ಲಿ ಸತ್ಯವನ್ನು ಜನರಿಗೆ ತಿಳಿಸಲು ಹೋರಾಡುತ್ತಿದ್ದೇನೆ. ಸಾವಿಗೂ ತಾನು ಹೆದರುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಕದನ ವಿರಾಮಕ್ಕೆ ಇಸ್ರೇಲ್-ಸಿರಿಯಾ ನಾಯಕರ ನಡುವೆ ಒಮ್ಮತ; ಶಾಂತಿಗೆ ಅಮೆರಿಕ ಕರೆ

ಗಾಜಾ ವಶ!

ಹಮಾಸ್ ಕೊನೆಗೊಳಿಸಲು ಗಾಜಾ ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಉದ್ದೇಶಿಸಿರುವುದಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗಾಜಾ ನಗರದಲ್ಲಿ ಅಧಿಕಾರದ ನಿಯಂತ್ರಣವನ್ನು ಸ್ನೇಹಪರ ಅರಬ್ ಪಡೆಗಳಿಗೆ ಹಸ್ತಾಂತರಿಸಲಾಗುವುದು ಎಂದು ಘೋಷಿಸಿದ್ದಾರೆ. ಇಸ್ರೇಲ್ ಈಗಾಗಲೇ ಗಾಜಾ ನಗರದ ಮುಕ್ಕಾಲು ಭಾಗವನ್ನು ವಶಪಡಿಸಿಕೊಂಡಿದೆ.