ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

American Airlines: ಭೀಕರ ದುರಂತ! ಟೇಕ್‌ ಆಫ್‌ ವೇಳೆ ಹೊತ್ತಿ ಉರಿದ 173 ಪ್ರಯಾಣಿಕರಿದ್ದ ವಿಮಾನ

Plane Tyre Catches Fire: ಅಮೆರಿಕದಲ್ಲಿ ಬೆಳ್ಳಂ ಬೆಳಗ್ಗೆ ಭಾರೀ ಅವಘಡವೊಂದು ಸಂಭವಿಸಿದೆ. ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (DEN) ದಿಂದ ಮಿಯಾಮಿ (MIA) ಗೆ ಹಾರಲು ನಿಗದಿಯಾಗಿದ್ದ ಅಮೇರಿಕನ್ ಏರ್ಲೈನ್ಸ್ ವಿಮಾನವು ಟೇಕ್ ಆಫ್ ಆಗುವ ಮೊದಲೇ ವಿಮಾನದ ಟೈರ್ ಬೆಂಕಿಗೆ ಆಹುತಿಯಾಗಿ, ಪ್ರಯಾಣಿಕರು ಗಾಯಗೊಂಡಿದ್ದಾರೆ

ಟೇಕ್‌ ಆಫ್‌ ವೇಳೆ ಹೊತ್ತಿ ಉರಿದ ವಿಮಾನ- ವಿಡಿಯೊ ಇದೆ

Rakshita Karkera Rakshita Karkera Jul 27, 2025 8:51 AM

ವಾಷಿಂಗ್ಟನ್‌: ಅಹಮದಾಬಾದ್‌ನಲ್ಲಿ ಕೆಲವು ತಿಂಗಳ ಹಿಂದೆ ಸಂಭವಿಸಿದ ಭೀಕರ ವಿಮಾನ ದುರಂತ ಮಾಸುವ ಮುನ್ನವೇ ಅಂತಹದ್ದೇ ಒಂದು ಘಟನೆ ಅಮೆರಿಕದಲ್ಲಿ ನಡೆದಿದೆ. ವಿಮಾನ ಟೇಕ್‌ ಆಫ್‌ ಆಗ್ತಿದ್ದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅನೇಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (DEN) ದಿಂದ ಮಿಯಾಮಿ (MIA) ಗೆ ಹಾರಲು ನಿಗದಿಯಾಗಿದ್ದ ಅಮೇರಿಕನ್ ಏರ್ಲೈನ್ಸ್ ವಿಮಾನವು ಟೇಕ್ ಆಫ್ ಆಗುವ ಮೊದಲೇ ವಿಮಾನದ ಟೈರ್ ಬೆಂಕಿಗೆ ಆಹುತಿಯಾಗಿ, ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆಯು ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ. ಎಲ್ಲಾ ಗ್ರಾಹಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು, ಮತ್ತು ನಮ್ಮ ನಿರ್ವಹಣಾ ತಂಡವು ವಿಮಾನವನ್ನು ಪರಿಶೀಲನೆ ನಡೆಸುತ್ತಿದೆ ಎಂದು ವಿಮಾನಯಾನ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಘಟನೆಯ ವೀಡಿಯೊದಲ್ಲಿ, ತುರ್ತು ಸ್ಲೈಡ್‌ಗಳ ಮೂಲಕ ಪ್ರಯಾಣಿಕರು ವಿಮಾನದಿಂದ ಹೊರಬರುತ್ತಿರುವುದು ಮತ್ತು ವಿಮಾನದ ಎಡ ಹಿಂಭಾಗದ ಭಾಗದಿಂದ ಹೊಗೆಯಾಡುತ್ತಿರುವುದನ್ನು ಕಾಣಬಹುದು. ಇನ್ನು ಈ ವಿಮಾನದಲ್ಲಿ ಒಟ್ಟು 173 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ವಿಮಾನದಲ್ಲಿದ್ದರು. ವಿಮಾನಯಾನ ಸಂಸ್ಥೆಯ ಪ್ರಕಾರ, ಪ್ರಯಾಣಿಕರನ್ನು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿಕೊಡಲಾಗಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Flight delayed: ಏರ್‌ ಇಂಡಿಯಾದ ವಿಮಾನದ ರೆಕ್ಕೆಯಲ್ಲಿ ಸಿಲುಕಿದ ಹುಲ್ಲು; ಬ್ಯಾಂಕಾಕ್‌ಗೆ ತೆರಳಬೇಕಿದ್ದ ವಿಮಾನ 5 ಗಂಟೆ ವಿಳಂಬ

ವಿಡಿಯೊ ಇಲ್ಲಿದೆ