ವಾಷಿಂಗ್ಟನ್: ಭಾರತ ಹಾಗೂ ಅಮೆರಿಕದ ಮದ್ಯೆ ಸುಂಕ ತೆರಿಗೆ (India Vs America) ನಡೆಯುತ್ತಿದೆ. ಮತ್ತೊಂದೆಡೆ ವೈರಿ ರಾಷ್ಟ್ರ ಪಾಕಿಸ್ತಾನದ ಜೊತೆ ಅಮೆರಿಕ ಒಪ್ಪಂದಗಳ ಮೇಲೆ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ. ಈ ಕುರಿತು ಇದೀಗ ಪೆಂಟಗನ್‌ನ (Asim Munir) ಮಾಜಿ ಅಧಿಕಾರಿಯೊಬ್ಬರು ಮಾತನಾಡಿದ್ದು, ಅಸಿಮ್ ಮುನೀರ್ ಸೂಟ್ ಧರಿಸಿದ ಒಸಾಮಾ ಬಿನ್ ಲಾಡೆನ್ ಎಂದು ಹೇಳಿದ್ದಾರೆ. ತನ್ನ ಸಿದ್ಧಾಂತವನ್ನು ಪಾಕಿಸ್ತಾನದ ಮೇಲೆ ಹೇರಲು ಹೊರಟಿದ್ದಾರೆ ಎಂದು ಅವರು ಹೇಳಿದ್ದಾರೆ. ಪರಮಾಣು ಬೆದರಿಕೆಗಳ ಬಗ್ಗೆಯೂ ಮೈಕೆಲ್ ರೂಬಿನ್ ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನ ಭಾರತಕ್ಕೆ ಪರಮಾಣು ಬೆದರಿಕೆಯನ್ನು ಹಾಕುತ್ತದೆ. ಇದರರ್ಥ ಕಾನೂನುಬದ್ಧ ರಾಷ್ಟ್ರವಾಗುವ ಹಕ್ಕನ್ನು ಕಳೆದುಕೊಂಡಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ಅವರು ಹೇಳಿದ್ದಾರೆ. ಮುನೀರ್‌ನನ್ನು ಉಗ್ರರ ಪಟ್ಟಿಗೆ ಸೇರಿಸಬೇಕು ಮತ್ತು ಈತನ ಅಂತ್ಯವು ಲಾಡೆನ್‌ನಂತೆ ಆಗಬೇಕು ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಮುನೀರ್‌ನಂತಹ ವ್ಯಕ್ತಿಯನ್ನು ಬೆಂಬಲಿಸುವವರಿಗೂ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು.
#WATCH | Washington DC, USA | On upcoming meeting between US and Russia, Former Pentagon official Michael Rubin says, "Donald Trump is a businessman and is used to horse-trading... He does not understand that a bad peace deal can actually advance war... He has the ambition to win… pic.twitter.com/gFjBR2xnRa
— ANI (@ANI) August 11, 2025
ಭಾರತಕ್ಕೆ ಶ್ಲಾಘನೆ
ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವದೆಹಲಿಯ ಮೇಲೆ ಹೆಚ್ಚುವರಿ ದಂಡ ವಿಧಿಸುವುದರಿಂದ ಅಮೆರಿಕ-ಭಾರತ ವ್ಯಾಪಾರ ಬಿಕ್ಕಟ್ಟು ಉಲ್ಬಣಗೊಂಡಿರುವ ಮಧ್ಯೆ ಮೈಕೆಲ್ ರೂಬಿನ್ ನರೇಂದ್ರ ಮೋದಿಯವರ ದಿಟ್ಟ ಕ್ರಮವನ್ನು ಶ್ಲಾಘಿಸಿದ್ದಾರೆ. ಭಾರತದ ಹಕ್ಕುಗಳಿಗಾಗಿ ಪ್ರಧಾನಿ ಮೋದಿ ನಿಂತಿರುವುದು ಇತಿಹಾಸಕಾರರಿಗೆ ನೆನಪಿಡುವ ಒಂದು ಘಟನೆಯಾಗಿ ಉಳಿಯಲಿದೆ ಎಂದು ಅವರು ಹೇಳಿದರು. ಟ್ರಂಪ್ ಮಾಡಿರುವುದು ದೊಡ್ಡ ತಪ್ಪು. ಅಮೆರಿಕಕ್ಕೆ ಭಾರತವನ್ನು ಮಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಆಗಸ್ಟ್ 15 ರಂದು ಅಲಾಸ್ಕಾದಲ್ಲಿ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಮಾತುಕತೆಗೆ ಮುಂಚಿತವಾಗಿ ಮಾಜಿ ಪೆಂಟಗನ್ ಅಧಿಕಾರಿಯ ಹೇಳಿಕೆಗಳು ಬಂದಿವೆ .
ಈ ಸುದ್ದಿಯನ್ನೂ ಓದಿ: Upendra Dwivedi: ಆಪರೇಷನ್ ಸಿಂಧೂರದಿಂದ ಪಾಕಿಸ್ತಾನ ಸೇನೆಗೆ ಭಾರೀ ನಷ್ಟ: ಭಾರತೀಯ ಸೇನಾ ಮುಖ್ಯಸ್ಥ
ರಷ್ಯಾದೊಂದಿಗಿನ ಇಂಧನ ವ್ಯಾಪಾರದ ಕುರಿತು ಅಮೆರಿಕದ ದ್ವಂದ್ವ ಮಾನದಂಡಗಳ ನೀತಿಯನ್ನು ಟೀಕಿಸಿದ ರೂಬಿನ್, ಅಮೆರಿಕ ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್ ಮತ್ತು ಇತರ ಕಾರ್ಯತಂತ್ರದ ಖನಿಜಗಳನ್ನು ಖರೀದಿಸುತ್ತದೆ. ಆದರೆ ಅದರ ಬಗ್ಗೆ ಮಾತನಾಡುವುದಿಲ್ಲ. ಭಾರತ ಖರೀದಿ ಮಾಡಿದರೆ ಅದು ತಪ್ಪು, "ಭಾರತ ತನ್ನ ಹಕ್ಕುಗಳಿಗಾಗಿ ನಿಲ್ಲುವುದು ಸರಿ ಎಂದು ಅವರು ಹೇಳಿದ್ದಾರೆ. ಟ್ರಂಪ್ ಬಗ್ಗೆ ವಾಗ್ದಾಳಿ ನಡೆಸಿದ ಅವರು ಟ್ರಂಪ್ ಅವರನ್ನು "ಕುದುರೆ ವ್ಯಾಪಾರಕ್ಕೆ ಒಗ್ಗಿಕೊಂಡಿರುವ ಉದ್ಯಮಿ" ಎಂದು ಟೀಕಿಸಿದರು.