ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ಮ್ಯಾನ್ಮಾರ್‌, ಅರ್ಜೆಂಟೀನಾದಲ್ಲಿ ಭೂಕಂಪನ

Earthquake: ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಮುಂಜಾನೆ 3.6 ತೀವ್ರತೆಯ ಭೂಕಂಪ ಹಾಗೂ ಅರ್ಜೆಂಟೀನಾದಲ್ಲಿ ಗುರುವಾರ 5.7 ತೀವ್ರತೆಯ ಭೂಕಂಪ ಸಂಭವಿಸಿವೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ವರದಿ ಮಾಡಿದೆ. ಎರಡೂ ಕಡೆ ಸಾವುನೋವುಗಳು ವರದಿಯಾಗಿಲ್ಲ.

ನವದೆಹಲಿ: ಮ್ಯಾನ್ಮಾರ್‌ ಹಾಗೂ ಅರ್ಜೆಂಟೀನಾದಲ್ಲಿ ಭೂಕಂಪನ (earthquake) ಸಂಭವಿಸಿದೆ. ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಮುಂಜಾನೆ 03:43 ಕ್ಕೆ (ಭಾರತೀಯ ಪ್ರಮಾಣಿತ ಸಮಯ) 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ತಿಳಿಸಿದೆ. ಹಾಗೇ ಅರ್ಜೆಂಟೀನಾದ ಸ್ಯಾಂಟಿಯಾಗೊ ಡೆಲ್ ಎಸ್ಟೆರೊ ಪ್ರಾಂತ್ಯದಲ್ಲಿ ಗುರುವಾರ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ವರದಿ ಮಾಡಿದೆ.

ಮ್ಯಾನ್ಮಾರ್‌ನಲ್ಲಿ ಭೂಮಿಯ ಹೊರಪದರದಿಂದ 60 ಕಿ.ಮೀ ಕೆಳಗೆ ಭೂಕಂಪ ಸಂಭವಿಸಿದೆ. ಬುಧವಾರ ತಡರಾತ್ರಿ ಮ್ಯಾನ್ಮಾರ್ನಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ ಹೊರಪದರದ ಒಳಗೆ 10 ಕಿ.ಮೀ ಆಳದಲ್ಲಿತ್ತು.

ಇನ್ನು ಯುಎಸ್ಜಿಎಸ್ ಅಂಕಿಅಂಶಗಳ ಪ್ರಕಾರ, ಭೂಕಂಪವು 21:37 (ಯುಟಿಸಿ) ಗೆ ಸಂಭವಿಸಿದ್ದು, ಅದರ ಕೇಂದ್ರಬಿಂದು ಉತ್ತರ ಅರ್ಜೆಂಟೀನಾದ ಎಲ್ ಹೊಯೊ ಪಟ್ಟಣದಿಂದ ಪಶ್ಚಿಮಕ್ಕೆ 29 ಕಿಲೋಮೀಟರ್ ದೂರದಲ್ಲಿದೆ. ಭೂಕಂಪನವು ಸುಮಾರು 571 ಕಿಲೋಮೀಟರ್ (354 ಮೈಲಿ) ಆಳದಲ್ಲಿ ಹುಟ್ಟಿಕೊಂಡಿತು. ಭೂಕಂಪದ ನಿರ್ದೇಶಾಂಕಗಳನ್ನು 27.064S ಮತ್ತು 63.523W ನಲ್ಲಿ ದಾಖಲಿಸಲಾಗಿದೆ.

ಸಾವುನೋವುಗಳು, ಗಾಯಗಳು ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.

ಮಂಗಳವಾರ ತಡರಾತ್ರಿ ಮಧ್ಯ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದರು. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ವರದಿಯ ಪ್ರಕಾರ, ಫಿಲಿಪೈನ್ಸ್‌ನ ಪಲೊಂಪನ್‌ನ ಪಶ್ಚಿಮಕ್ಕೆ ಮತ್ತು ಸೆಬು ಪ್ರಾಂತ್ಯದ ಬೊಗೊ ನಗರದ ಹತ್ತಿರ ರಾತ್ರಿ 10 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿತ್ತು.

ಇದನ್ನೂ ಓದಿ: Earthquake: ಭಾರೀ ಭೂಕಂಪ; ಫಿಲಿಪೈನ್ಸ್‌ನಲ್ಲಿ ಬರೋಬ್ಬರಿ 31 ಬಲಿ

ಹರೀಶ್‌ ಕೇರ

View all posts by this author