Earthquake: ಭಾರೀ ಭೂಕಂಪ; ಫಿಲಿಪೈನ್ಸ್‌ನಲ್ಲಿ ಬರೋಬ್ಬರಿ 31 ಬಲಿ
ಭಾರೀ ಭೂಕಂಪಕ್ಕೆ ಸ್ಯಾನ್ ರೆಮಿಜಿಯೊ ಪಟ್ಟಣದಲ್ಲಿ ಬ್ಯಾಸ್ಕೆಟ್‌ಬಾಲ್ ಆಟದ ಸಮಯದಲ್ಲಿ ಕ್ರೀಡಾ ಸಂಕೀರ್ಣ ಕುಸಿದು ಬಿದ್ದಿದೆ. ಪರಿಣಾಮವಾಗಿ ಫಿಲಿಪೈನ್ಸ್ ಕೋಸ್ಟ್ ಗಾರ್ಡ್‌ನ ಮೂವರು ಸದಸ್ಯರು ಮತ್ತು ಒಬ್ಬ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ.

-

ಫಿಲಿಪೈನ್ಸ್: ಮಂಗಳವಾರ ತಡರಾತ್ರಿ ಮಧ್ಯ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ವರದಿಯ ಪ್ರಕಾರ, ಫಿಲಿಪೈನ್ಸ್‌ನ ಪಲೊಂಪನ್‌ನ ಪಶ್ಚಿಮಕ್ಕೆ ಮತ್ತು ಸೆಬು ಪ್ರಾಂತ್ಯದ ಬೊಗೊ ನಗರದ ಹತ್ತಿರ ರಾತ್ರಿ 10 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ.
ಫಿಲಿಪೈನ್ಸ್ ರೆಡ್‌ಕ್ರಾಸ್‌ನ ಅಧ್ಯಕ್ಷ ರಿಚರ್ಡ್ ಗಾರ್ಡನ್ ಮಾಹಿತಿ ನೀಡಿದ್ದು, ಭಾರೀ ಭೂಕಂಪಕ್ಕೆ ಸ್ಯಾನ್ ರೆಮಿಜಿಯೊ ಪಟ್ಟಣದಲ್ಲಿ ಬ್ಯಾಸ್ಕೆಟ್‌ಬಾಲ್ ಆಟದ ಸಮಯದಲ್ಲಿ ಕ್ರೀಡಾ ಸಂಕೀರ್ಣ ಕುಸಿದು ಬಿದ್ದಿದೆ. ಪರಿಣಾಮವಾಗಿ ಫಿಲಿಪೈನ್ಸ್ ಕೋಸ್ಟ್ ಗಾರ್ಡ್‌ನ ಮೂವರು ಸದಸ್ಯರು ಮತ್ತು ಒಬ್ಬ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಕೆಲವು ಚರ್ಚ್‌ಗಳು, ಶಾಲೆಗಳು ಕುಸಿದು ಬಿದ್ದಿವೆ. ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು. ಇನ್ನು ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಭೂಕಂಪದಿಂದಾಗಿ ಮಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನೂ ವಿಡಿಯೊದಲ್ಲಿ ಕಾಣಬಹುದಾಗಿದೆ.
M6.9 earthquake SHAKES Cebu, Philippines
— RT (@RT_com) September 30, 2025
Quake takes out lights as people panic and animals flee in terror
Emergency workers inspecting damage across the region pic.twitter.com/rgYv5BfvqJ
ಈ ಸುದ್ದಿಯನ್ನೂ ಓದಿ: India vs West Indies Tests: ನೋ ರೆಸ್ಟ್; ವಿಂಡೀಸ್ ಟೆಸ್ಟ್ ಸರಣಿಗೆ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ನಮ್ಮ ಕಚೇರಿಯಲ್ಲಿ ನಮಗೆ ಕಂಪನದ ಅನುಭವವಾಯಿತು, ಅದು ತುಂಬಾ ಪ್ರಬಲವಾಗಿತ್ತು. ನಮ್ಮ ಲಾಕರ್ ಎಡದಿಂದ ಬಲಕ್ಕೆ ಚಲಿಸುತ್ತಿರುವುದನ್ನು ನಾವು ನೋಡಿದ್ದೇವೆ, ಸ್ವಲ್ಪ ಸಮಯದವರೆಗೆ ನಮಗೆ ಸ್ವಲ್ಪ ತಲೆತಿರುಗಿದ ಅನುಭವವಾಯಿತು. ಸದ್ಯ ನಾವೆಲ್ಲರೂ ಸುರಕ್ಷಿತರಾಗಿದ್ದೇವೆ ಎಂದು ಸೆಬು ಅಗ್ನಿಶಾಮಕ ದಳದ ಸಿಬ್ಬಂದಿ ಜೋಯ್ ಲೀಗುಯಿಡ್ ಸ್ಯಾನ್ ಫರ್ನಾಂಡೊ ತಿಳಿಸಿದ್ದಾರೆ. ಇದಲ್ಲದೆ, ಮಧ್ಯ ಮನಿಲಾದ ದಕ್ಷಿಣಕ್ಕೆ ಸುಮಾರು 70 ಕಿಮೀ (45 ಮೈಲುಗಳು) ದೂರದಲ್ಲಿರುವ ತಾಲ್ ಜ್ವಾಲಾಮುಖಿಯಿಂದ ಸಣ್ಣ ಸ್ಫೋಟವೂ ಸಂಭವಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಷ್ಯಾದ (Russia) ಪೂರ್ವ ಪ್ರದೇಶದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿತ್ತು. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವು 7.8 ತೀವ್ರತೆಯನ್ನು ಹೊಂದಿದ್ದು, ಕೇವಲ 10 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿತ್ತು. ಬಲವಾದ ಕಂಪನದ ನಂತರ 5.8 ತೀವ್ರತೆಯನ್ನು ತಲುಪಿದ ನಂತರದ ಭೂಕಂಪಗಳ ಸರಣಿ ಸಂಭವಿಸಿದೆ.