ಗಾಜಾ: ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ಇನ್ನೂ ನಿಂತಿಲ್ಲ. (Hamas Terrorists) ಇದೀಗ ಇಸ್ರೇಲ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಮೂವರು ಪ್ಯಾಲೆಸ್ಟೀನಿಯನ್ನರನ್ನು ಭಾನುವಾರ ಗಾಜಾದಲ್ಲಿ ದ್ದ ಜನಸಮೂಹದ ಮುಂದೆ ಹಮಾಸ್ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂವರು ಹಮಾಸ್ ಬಂದೂಕುಧಾರಿಗಳ ಮುಂದೆ ಕಣ್ಣುಮುಚ್ಚಿ ನೆಲದ ಮೇಲೆ ಮಂಡಿಯೂರಿ ಕುಳಿತಿರುವ ಮೂವರು ವ್ಯಕ್ತಿಗಳು ಕುಳಿತಿದ್ದು, ಉಗ್ರರು ಶಸ್ರ್ತಗಳನ್ನು ಹಿಡಿದು ನಿಂತಿದ್ದಾರೆ. ವ್ಯಕ್ತಿಯೊಬ್ಬ ಕಾಗದದ ತುಣುಕಿನಿಂದ ಅರೇಬಿಕ್ ಭಾಷೆಯಲ್ಲಿ ಜೋರಾಗಿ ಏನ್ನನ್ನೋ ಓದುತ್ತಿದ್ದಾನೆ.
ಪ್ಯಾಲೆಸ್ತೀನಿಯನ್ ಕ್ರಾಂತಿಕಾರಿ ಕಾನೂನಿನ ವಿಷಯಕ್ಕೆ ಅನುಗುಣವಾಗಿ ಮತ್ತು ಪ್ಯಾಲೆಸ್ಟೀನಿಯನ್ ಕ್ರಾಂತಿಕಾರಿ ನ್ಯಾಯಾಲಯದ ಆಧಾರದ ಮೇಲೆ, ತಾಯ್ನಾಡಿಗೆ ದ್ರೋಹ ಬಗೆದ, ತಮ್ಮ ಜನರಿಗೆ ಮತ್ತು ಅವರ ಉದ್ದೇಶಕ್ಕೆ ದ್ರೋಹ ಬಗೆದ ಮತ್ತು ತಮ್ಮದೇ ಆದ ಜನರನ್ನು ಕೊಲ್ಲಲು ಶತ್ರುಗಳ ಜೊತೆ ಕೈಜೋಡಿಸಿದ ವಿರುದ್ಧ ಮರಣದಂಡನೆ ವಿಧಿಸಲಾಯಿತು" ಎಂದು ಭಯೋತ್ಪಾದಕರು ಹೇಳಿದ್ದಾರೆ.
ಜನಸಮೂಹವು "ಅಲ್ಲಾಹು ಅಕ್ಬರ್!" ಎಂದು ಘೋಷಣೆ ಕೂಗುವುದನ್ನು ಕೇಳಬಹುದು. ನಂತರ ಮೂವರ ತಲೆ ಮತ್ತು ದೇಹದ ಮೇಲ್ಭಾಗಕ್ಕೆ ಗುಂಡು ಹಾರಿಸಲಾಯಿತು, ಭಯೋತ್ಪಾದಕರು ಅವರ ಶವಗಳ ಮೇಲೆ ನಿಮಗೆ ನರಕದಲ್ಲಿ ಘೋರ ಶಿಕ್ಷೆ ಕಾದಿದೆ ಎಂದು ಬರೆದಿದ್ದಾರೆ. ಭಾನುವಾರದ ದೃಶ್ಯಗಳಲ್ಲಿ, ಒಬ್ಬ ಶಸ್ತ್ರಸಜ್ಜಿತ ವ್ಯಕ್ತಿ ಯಾಸರ್ ಅಬು ಶಬಾಬ್‌ನನ್ನು ಅವರು ಕೊಲ್ಲಲು ಪ್ರಯತ್ನಿಸುತ್ತಿರುವ "ಪ್ರಮುಖ ಸಹಯೋಗಿ" ಎಂದು ಗುರುತಿಸುತ್ತಾನೆ. ಅಬು ಶಬಾಬ್ ಇಸ್ರೇಲ್ ಸರ್ಕಾರದಿಂದ ಶಸ್ತ್ರಸಜ್ಜಿತವಾಗಿರುವ ಒಂದು ಗುಂಪಿನ ಪ್ರಮುಖ ನಾಯಕ. ಇದು ಇಸ್ರೇಲಿ ಮಿಲಿಟರಿ ನಿಯಂತ್ರಣದಲ್ಲಿರುವ ರಫಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಗುಂಪು ಹಮಾಸ್‌ಗೆ ವಿರೋಧ ಪಡೆ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದೆ.
ಶನಿವಾರ ಹಮಾಸ್ ನ ಸಶಸ್ತ್ರ ವಿಭಾಗ ಕಸ್ಸಾಮ್ ಬ್ರಿಗೇಡ್ ಗಾಝಾದಲ್ಲಿ ಒತ್ತೆಯಾಳುಗಳಾಗಿರುವ 48 ಒತ್ತೆಯಾಳುಗಳ ʻವಿದಾಯ ಚಿತ್ರʼವನ್ನು ಬಿಡುಗಡೆ ಮಾಡಿದೆ. ಹಮಾಸ್ ಈ ಹಿಂದೆ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಿದ್ಧ ಎಂದು ಹೇಳಿತ್ತು.
ಈ ಸುದ್ದಿಯನ್ನೂ ಓದಿ: Israel- Hamas: ಗಾಜಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ; ಹಮಾಸ್ ಭಯೋತ್ಪಾದಕ ಸೇರಿ 5 ಅಲ್ ಜಜೀರಾ ಪತ್ರಕರ್ತರು ಸಾವು
ಇಸ್ರೇಲ್ ಪಡೆಗಳು ಗಾಜಾ ಪಟ್ಟಿಯನ್ನು ತೊರೆದು ಯುದ್ಧವನ್ನು ಕೊನೆಗೊಳಿಸಬೇಕು ಎಂಬುದು ಹಮಾಸ್‌ನ ಬೇಡಿಕೆಯಾಗಿತ್ತು. ಆದರೆ, ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ರಾಜಕೀಯ ಉಳುವಿಗಾಗಿ ಪ್ರಸ್ತಾಪವನ್ನು ತಿರಸ್ಕರಿಸಿ, ಹಮಾಸ್ ನಿರ್ನಾಮ ಮಾಡುವುದೇ ಯುದ್ಧದ ಗುರಿ ಎಂದು ಇಸ್ರೇಲ್ ಹೇಳುತ್ತಿದೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಒತ್ತೆಯಾಳುಗಳ ಫೋಟೋ ರಿಲೀಸ್ ಮಾಡಿ ಹಮಾಸ್ ಒತ್ತೆಯಾಳುಗಳ ಬಗ್ಗೆ ಸಾವು-ಬದುಕಿನ ಬಗ್ಗೆ ಸಂದೇಶ ರವಾನೆ ಮಾಡಿದೆ.