ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Reserves: ಹೆಚ್ಚು ಚಿನ್ನ ಹೊಂದಿರುವ ದೇಶಗಳಲ್ಲಿ ಭಾರತದ ಸ್ಥಾನ ಯಾವುದು?

Countries with the most gold: ವಿಶ್ವದಲ್ಲೇ ಎಂಟು ದೇಶಗಳು ಅತೀ ಹೆಚ್ಚು ಚಿನ್ನದ ನಿಕ್ಷೇಪಗಳನ್ನು ಹೊಂದಿದೆ. ಇದರಲ್ಲಿ ಭಾರತವೂ ಸ್ಥಾನ ಪಡೆದಿದೆ. ಇತ್ತೀಚೆಗೆ ಪ್ರಕಟವಾದ ಅಂಕಿ ಅಂಶಗಳ ಪ್ರಕಾರ ದೇಶಗಳ ಆರ್ಥಿಕ ಶಕ್ತಿ ಮತ್ತು ಸ್ಥಿರತೆಯನ್ನು ಎತ್ತಿ ತೋರಿಸುವ ಚಿನ್ನದ ನಿಕ್ಷೇಪಗಳು ಯಾವ ದೇಶದಲ್ಲಿ ಎಷ್ಟಿದೆ ಎನ್ನುವ ಕಿರು ಮಾಹಿತಿ ಇಲ್ಲಿದೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿನ್ನದ (Gold rate) ಬೆಲೆ ಗಗನಕ್ಕೆ ಏರುತ್ತಿದೆಯಾದರೂ ಒಂದು ಖುಷಿ ಪಡಬಹುದಾದ ಸಂಗತಿ ಇದೆ. ವಿಶ್ವದ ಈ ಎಂಟು ದೇಶಗಳು ಹೆಚ್ಚಿನ ಚಿನ್ನದ ನಿಕ್ಷೇಪಗಳನ್ನು (Gold Reserves) ಹೊಂದಿದೆ. ಇದರಲ್ಲಿ ಭಾರತವೂ(Gold Reserves in India) ಸೇರಿದೆ ಎಂದು ವಿಶ್ವ ಚಿನ್ನದ ಮಂಡಳಿಯ (World Gold Council shows) ಇತ್ತೀಚಿನ ಅಂಕಿ ಅಂಶಗಳು ದೃಢಪಡಿಸಿವೆ. ದೇಶಗಳ ಆರ್ಥಿಕ ಶಕ್ತಿ ಮತ್ತು ಸ್ಥಿರತೆಯ ಸಂಕೇತವಾಗಿರುವ ಚಿನ್ನವು ಹಣದುಬ್ಬರ ಮತ್ತು ಕರೆನ್ಸಿ ಏರಿಳಿತ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರದಂತೆ ರಕ್ಷಿಸುತ್ತದೆ.

ಚಿನ್ನವನ್ನು ದೇಶದ ಬಹುದೊಡ್ಡ ಸಂಪತ್ತು ಎಂದು ಪರಿಗಣಿಸಲಾಗಿದೆ. ಹೀಗಾಗಿಯೇ ಇದರ ಮೌಲ್ಯ ದಿನೇ ದಿನೇ ಹೆಚ್ಚಾಗುತ್ತದೆ. ಡಿಜಿಟಲ್ ಪಾವತಿ ಮತ್ತು ಕ್ರಿಪ್ಟೋಕರೆನ್ಸಿಯೇ ಹೆಚ್ಚಾಗಿ ಬಳಕೆಯಾಗುತ್ತಿದ್ದರೂ ಕೂಡ ಚಿನ್ನ ಈಗ ದೇಶದ ಆರ್ಥಿಕ ಸ್ಥಿರತೆಯ ಪ್ರಮುಖ ಆಧಾರಸ್ತಂಭವಾಗಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ವಿಶ್ವ ಚಿನ್ನದ ಮಂಡಳಿಯ ಇತ್ತೀಚಿನ ಅಂಕಿ ಅಂಶದ ಪ್ರಕಾರ ಈ ಎಂಟು ರಾಷ್ಟ್ರಗಳು ಪ್ರಸ್ತುತ ಅತಿ ಹೆಚ್ಚಿನ ಮೌಲ್ಯದ ಚಿನ್ನದ ನಿಕ್ಷೇಪಗಳನ್ನು ಹೊಂದಿವೆ.

ಯುನೈಟೆಡ್ ಸ್ಟೇಟ್ಸ್

ವಿಶ್ವದಲ್ಲೇ ಅತೀ ಹೆಚ್ಚಿನ ಮೌಲ್ಯದ ಚಿನ್ನದ ನಿಕ್ಷೇಪವು ಯುಎಸ್ ನಲ್ಲಿದೆ. ಇಲ್ಲಿ 8,133.46 ಟನ್‌ಗಳಷ್ಟು ಚಿನ್ನದ ನಿಕ್ಷೇಪಗಳಿದ್ದು, 2000 ರಿಂದ 2025 ರವರೆಗೆ ಇಲ್ಲಿ ಸರಾಸರಿ 8,134.78 ಟನ್‌ಗಳಷ್ಟಿದ್ದವು.

ಜರ್ಮನಿ

ಎರಡನೇ ಸ್ಥಾನದಲ್ಲಿರುವ ಜರ್ಮನಿಯಲ್ಲಿ 3,350.25 ಟನ್‌ಗಳಷ್ಟು ಚಿನ್ನದ ನಿಕ್ಷೇಪಗಳಿವೆ. 2000ರಿಂದ 2025ರ ನಡುವೆ ಸರಾಸರಿ 3,398.28 ಟನ್‌ಗಳಷ್ಟಿದ್ದವು.

ಇಟಲಿ

ಚಿನ್ನದ ಮೀಸಲುಗಳಲ್ಲಿ ಇಟಲಿ ನಿರಂತರವಾಗಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. 2025 ರ ಎರಡನೇ ತ್ರೈಮಾಸಿಕದಲ್ಲಿ ದೇಶದ ಚಿನ್ನದ ಸಂಗ್ರಹವು ಮೊದಲ ತ್ರೈಮಾಸಿಕದಂತೆಯೇ 2,451.84 ಟನ್‌ಗಳಷ್ಟಿತ್ತು. 2000 ರಿಂದ 2025 ರವರೆಗೆ, ಇಟಲಿಯ ಸರಾಸರಿ ಚಿನ್ನದ ಸಂಗ್ರಹವು 2,451.84 ಟನ್‌ಗಳಷ್ಟಿತ್ತು.

ಫ್ರಾನ್ಸ್

ಫ್ರಾನ್ಸ್‌ನ ಚಿನ್ನದ ಸಂಗ್ರಹವು 2,437 ಟನ್‌ಗಳಿದ್ದು, ಸ್ಥಿರವಾಗಿಯೇ ಉಳಿದಿದೆ. ದೇಶದ ಚಿನ್ನದ ಸಂಗ್ರಹವು 2012ರಲ್ಲಿ 2,435.38 ಟನ್‌ಗಳಿಗೆ ಇಳಿದಿದ್ದು, 2002 ರಲ್ಲಿ 3,000 ಟನ್‌ಗಳನ್ನು ಮೀರಿತ್ತು.

ರಷ್ಯಾ

ರಷ್ಯಾದಲ್ಲೂ ಚಿನ್ನದ ಮೀಸಲು 2,329.63 ಟನ್‌ಗಳಲ್ಲಿ ಸ್ಥಿರವಾಗಿ ಉಳಿದಿವೆ. ಇದು 2000 ರಿಂದ 2025 ರವರೆಗೆ ಮೀಸಲು ಸರಾಸರಿ 1,181.88 ಟನ್‌ಗಳಾಗಿದ್ದು, 2024 ರ ಎರಡನೇ ತ್ರೈಮಾಸಿಕದಲ್ಲಿ 2,335.85 ಟನ್‌ಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು.

gold1

ಚೀನಾ

ಚೀನಾ ತನ್ನ ಮೀಸಲುಗಳಲ್ಲಿ ಸುಮಾರು 2,279.6 ಟನ್ ಚಿನ್ನದೊಂದಿಗೆ ಆರನೇ ಸ್ಥಾನದಲ್ಲಿದೆ. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ನಿಯತಕಾಲಿಕವಾಗಿ ಚಿನ್ನದ ನಿಕ್ಷೇಪಗಳಲ್ಲಿ ಹೆಚ್ಚಳವನ್ನು ವರದಿ ಮಾಡಿದ್ದು, ಇದು ಅದರ ಆರ್ಥಿಕ ಸ್ಥಿರತೆಯನ್ನು ತೋರಿಸಿದೆ.

ಸ್ವಿಟ್ಜರ್ಲೆಂಡ್

ಸಣ್ಣ ದೇಶವಾಗಿದ್ದರೂ ಸ್ವಿಟ್ಜರ್ಲೆಂಡ್ ಸುಮಾರು 1,040 ಟನ್ ಚಿನ್ನದ ನಿಕ್ಷೇಪಗಳನ್ನು ಹೊಂದಿದೆ. ದೇಶದ ಹಣಕಾಸು ಮೂಲಸೌಕರ್ಯದ ಪ್ರಮುಖ ಭಾಗವಾಗಿರುವ ಚಿನ್ನ ಮೀಸಲುಗಳನ್ನು ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ನಿರ್ವಹಿಸುತ್ತದೆ.

ಇದನ್ನೂ ಓದಿ: Tirupati Tirumala: ಬೆಳಗಾವಿಯಲ್ಲಿಯೂ ನಿರ್ಮಾಣವಾಗಲಿದೆ ತಿರುಪತಿಯ ವೆಂಕಟೇಶ್ವರ ದೇವಾಲಯ

ಭಾರತ

2025ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಮೀಸಲು 880 ಟನ್‌ಗಳಷ್ಟಾಗಿದೆ. ಇದು ಮೊದಲ ತ್ರೈಮಾಸಿಕದಲ್ಲಿ 879.60 ಟನ್‌ಗಳಷ್ಟಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿದೆ. 2000 ಮತ್ತು 2025 ರ ನಡುವಿನ ಸರಾಸರಿ ಮೀಸಲು 531 ಟನ್‌ಗಳಾಗಿದ್ದವು.

ವಿದ್ಯಾ ಇರ್ವತ್ತೂರು

View all posts by this author