ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Khalistani: ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಗುಂಡಾಗಳ ಗಲಭೆ: ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಭಂಗ

ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಕಾನ್ಸುಲ್ ಜನರಲ್ ಕಚೇರಿಯ ಹೊರಗೆ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಖಲಿಸ್ತಾನಿ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಭಾರತೀಯ ನಾಗರಿಕರು ಶಾಂತಿಯುತವಾಗಿ ಸೇರಿದ್ದಾಗ, ಕೆಲವು ಖಲಿಸ್ತಾನಿ ಗುಂಡಾಗಳು ಧ್ವಜಗಳನ್ನು ಹಿಡಿದು ಗಲಭೆ ಸೃಷ್ಟಿಸಿದರು. ಇದರಿಂದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಯಿತು ಎಂದು ʼದಿ ಆಸ್ಟ್ರೇಲಿಯಾ ಟುಡೇʼ ವರದಿ ಮಾಡಿದೆ.

ಘಟನೆಯ ದೃಶ್ಯ

ಕ್ಯಾನ್‌ಬೆರಾ: ಆಸ್ಟ್ರೇಲಿಯಾದ (Australia) ಮೆಲ್ಬರ್ನ್‌ನ (Melbourne) ಕಾನ್ಸುಲ್ ಜನರಲ್ ಕಚೇರಿಯ ಹೊರಗೆ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಖಲಿಸ್ತಾನಿ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಭಾರತೀಯ ನಾಗರಿಕರು ಶಾಂತಿಯುತವಾಗಿ ಸೇರಿದ್ದಾಗ, ಕೆಲವು ಖಲಿಸ್ತಾನಿ (Khalistani) ಗುಂಡಾಗಳು ಧ್ವಜಗಳನ್ನು ಹಿಡಿದು ಗಲಭೆ ಸೃಷ್ಟಿಸಿದರು. ಇದರಿಂದ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಬೇಕಾಯಿತು ಎಂದು ದಿ ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ. ವಿಡಿಯೊದಲ್ಲಿ, ಎರಡು ಗುಂಪುಗಳ ನಡುವೆ ತೀವ್ರ ಜಗಳ ನಡೆದಿದ್ದು, ಘರ್ಷಣೆ ತಡೆಯಲು ಪೊಲೀಸರು ಪ್ರಯತ್ನಿಸುತ್ತಿರುವ ದೃಶ್ಯ ಕಾಣಿಸಿತು.

ಈ ಘಟನೆಗೆ ಕೆಲವೇ ವಾರಗಳ ಮೊದಲು, ಮೆಲ್ಬರ್ನ್‌ನ ಬೊರೋನಿಯಾದಲ್ಲಿರುವ ಸ್ವಾಮಿನಾರಾಯಣ ದೇವಾಲಯದ ಗೋಡೆಗಳ ಮೇಲೆ ದ್ವೇಷದ ಸಂದೇಶಗಳನ್ನು ಬರೆಯಲಾಗಿತ್ತು. ಹತ್ತಿರದಲ್ಲೇ ಇದ್ದ ಎರಡು ಏಷಿಯನ್ ರೆಸ್ಟೋರೆಂಟ್‌ಗಳ ಮೇಲೂ ದಾಳಿ ನಡೆದಿತ್ತು. ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾದ ವಿಕ್ಟೋರಿಯಾ ಅಧ್ಯಕ್ಷ ಮಕರಂದ ಭಾಗವತ್, “ನಮ್ಮ ದೇವಾಲಯವು ಶಾಂತಿ, ಭಕ್ತಿ ಮತ್ತು ಏಕತೆಯ ತಾಣವಾಗಿದೆ. ಇದರ ಮೇಲಿನ ದಾಳಿಯು ನಮ್ಮ ಗುರುತು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯಂತೆ ಭಾಸವಾಗಿದೆ” ಎಂದು ಖಂಡಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಅಮೆರಿಕದ ಗ್ರೀನ್‌ವುಡ್‌ನ ಬೋಚಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ದೇವಾಲಯದ ಮೇಲೆ ಖಲಿಸ್ತಾನಿ ಪ್ರತ್ಯೇಕವಾದಿಗಳು ಭಾರತ ವಿರೋಧಿ ಮತ್ತು ಮೋದಿ ವಿರೋಧಿ ಬರಹ ಬರೆದಿದ್ದರು. ಹಿಂದೂ ಅಮೆರಿಕನ್ ಫೌಂಡೇಷನ್, “ಕಳೆದ ಒಂದು ವರ್ಷದಲ್ಲಿ ನಾಲ್ಕನೇ ಬಾರಿಗೆ ಹಿಂದೂ ದೇವಾಲಯವನ್ನು ಅಪವಿತ್ರಗೊಳಿಸಲಾಗಿದೆ. ಇದು ಖಲಿಸ್ತಾನಿ ಕಾರ್ಯಕರ್ತರ ತಂತ್ರವಾಗಿದ್ದು, ‘ಹಿಂದುತ್ವ’ ಎಂಬ ದೂಷಣೆಯಿಂದ ದ್ವೇಷವನ್ನು ಹರಡುತ್ತಿದೆ” ಎಂದು ಎಕ್ಸ್‌ನಲ್ಲಿ ಖಂಡಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಒಂದು ದೇವಾಲಯದ ಮೇಲೂ ಇಂತಹ ದಾಳಿ ನಡೆದಿತ್ತು. ಇದನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿತ್ತು.

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥನಿ ಆಲ್ಬನೀಸ್, “ತ್ರಿವರ್ಣ ಧ್ವಜವು ವಿಶ್ವದಾದ್ಯಂತ ಹೆಮ್ಮೆಯಿಂದ ಹಾರಾಡುತ್ತಿದ್ದಂತೆ, ಭಾರತೀಯರು ಕಳೆದ 78 ವರ್ಷಗಳ ಸಾಧನೆಯನ್ನು ಸಂತೋಷದಿಂದ ನೆನಪಿಸಿಕೊಳ್ಳಬಹುದು. ಆಸ್ಟ್ರೇಲಿಯಾ ಭಾರತದ ಯಶಸ್ಸನ್ನು ಗೌರವಿಸುತ್ತದೆ” ಎಂದು ಶುಭಾಶಯ ತಿಳಿಸಿದ್ದಾರೆ. ಆದರೆ ಭಾರತವು ಈ ಘಟನೆಗಳನ್ನು ಖಂಡಿಸಿ, “ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಸಮರ್ಥಿಸುವವರಿಗೆ ಅವಕಾಶ ನೀಡಬಾರದು” ಎಂದು ಒತ್ತಾಯಿಸಿದೆ.