ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Khalistani Threat: ಭಾರತೀಯ ರಾಯಭಾರ ಕಚೇರಿಗೆ ಮುತ್ತಿಗೆ ಹಾಕ್ತೇವೆ... ಹುಷಾರ್‌! ಸಿಖ್ ಫಾರ್ ಜಸ್ಟೀಸ್ ಬೆದರಿಕೆ

ನಿಷೇಧಿತ ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಸೆಪ್ಟೆಂಬರ್ 18ರಂದು ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಒಡ್ಡಿದೆ. ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕ ಗುಂಪುಗಳು ವಿದೇಶಿ ನಿಧಿಯನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಕೆನಡಾ ಸರ್ಕಾರ ವರದಿ ಪ್ರಕಟಿಸಿದ ಬಳಿಕ ಈ ಬೆದರಿಕೆ ಬಂದಿದೆ.

ವ್ಯಾಂಕೋವರ್‌: ಭಾರತೀಯ ರಾಯಭಾರ ಕಚೇರಿಗೆ (Indian Embassy) ಮುತ್ತಿಗೆ ಹಾಕುವುದಾಗಿ ಖಲಿಸ್ತಾನಿ ಸಂಘಟನೆ (Khalistani Threat) ಸಿಖ್ ಫಾರ್ ಜಸ್ಟೀಸ್ ಬೆದರಿಕೆ (Sikhs for Justice) ಹಾಕಿದೆ. ಕೆನಡಾದಲ್ಲಿರುವ (Canada) ಖಲಿಸ್ತಾನಿ ಭಯೋತ್ಪಾದಕ ಗುಂಪುಗಳು ವಿದೇಶಿ ನಿಧಿಯನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಕೆನಡಾ ಸರ್ಕಾರ ವರದಿ ಪ್ರಕಟಿಸಿದ ಬಳಿಕ ವ್ಯಾಂಕೋವರ್‌ನಲ್ಲಿರುವ (Vancouver) ಭಾರತೀಯ ದೂತಾವಾಸ ಕಚೇರಿಗೆ ಸೆಪ್ಟೆಂಬರ್ 18 ರಂದು ಮುತ್ತಿಗೆ ಹಾಕುವುದಾಗಿ ಘೋಷಿಸಿದೆ. ಈ ಮೂಲಕ ಇಲ್ಲಿರುವ ಭಾರತೀಯ ರಾಯಭಾರಿಗಳಿಗೆ ಬೆದರಿಕೆಯೊಡ್ಡಿದೆ.

ನಿಷೇಧಿತ ಖಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಸೆಪ್ಟೆಂಬರ್ 18ರಂದು ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದೆ. ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿರುವ ಸಿಖ್ ಫಾರ್ ಜಸ್ಟೀಸ್, ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನರ್ ದಿನೇಶ್ ಪಟ್ನಾಯಕ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದು, ಇಂಡೋ-ಕೆನಡಿಯನ್ನರು ಇವರಿಂದ ದೂರವಿರುವಂತೆ ಎಚ್ಚರಿಸಿದ್ದಾರೆ.

ಇತ್ತೀಚಿಗೆ ಕೆನಡಾ ಸರ್ಕಾರವು ತನ್ನ ನೆಲದಲ್ಲಿ ಖಲಿಸ್ತಾನಿ ಉಗ್ರಗಾಮಿ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ಇದು ವಿದೇಶಿ ನಿಧಿಯನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳಿದ ಬಳಿಕ ಈ ಬೆದರಿಕೆ ಬಂದಿದೆ. ಖಲಿಸ್ತಾನಿ ಉಗ್ರಗಾಮಿ ಗುಂಪುಗಳು ಮತ್ತು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಲಗಳ ನಡುವಿನ ಹಣಕಾಸಿನ ವಹಿವಾಟುಗಳನ್ನು ಸರ್ಕಾರ ಗುರುತಿಸಿದೆ. ಇವುಗಳಲ್ಲಿ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮತ್ತು ಅಂತಾರಾಷ್ಟ್ರೀಯ ಸಿಖ್ ಯುವ ಒಕ್ಕೂಟ ಸೇರಿದೆ ಎನ್ನಲಾಗಿದೆ.

ಅಲ್ಲದೇ ಭಯೋತ್ಪಾದಕ ಸಂಸ್ಥೆಗಳೆಂದು ಪಟ್ಟಿ ಮಾಡಲಾದ ಹಮಾಸ್, ಹೆಜ್ಬೊಲ್ಲಾ ಮತ್ತು ಖಲಿಸ್ತಾನಿ ಗುಂಪುಗಳು ಸೇರಿದಂತೆ ಹಲವಾರು ಸಂಘಟನೆಗಳು ಕೆನಡಾದೊಳಗಿನ ವಿವಿಧ ಮೂಲಗಳಿಂದ ಹಣಕಾಸಿನ ಬೆಂಬಲವನ್ನು ಪಡೆಯುತ್ತಿವೆ ಎಂದು ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳ ವರದಿ ತಿಳಿಸಿವೆ.

ಇದನ್ನೂ ಓದಿ: India selection panel: ಭಾರತ ಆಯ್ಕೆ ಸಮಿತಿಗೆ ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ ಆಯ್ಕೆ ಸಾಧ್ಯತೆ

ಖಲಿಸ್ತಾನಿ ಉಗ್ರರು ಭಾರತದ ಪಂಜಾಬ್‌ನಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ಹಿಂಸಾತ್ಮಕ ವಿಧಾನಗಳನ್ನುಅನುಸರಿಸುತ್ತಿದ್ದಾರೆ. ಇದಕ್ಕಾಗಿ ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಇದಕ್ಕಾಗಿ ಅದು ಲಾಭರಹಿತ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿವೆ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author