ಲಂಡನ್: ಭಾರತಕ್ಕೆ ಹಸ್ತಾಂತರಿಸುವ (extradition to India) ಪ್ರಕ್ರಿಯೆಯನ್ನು ಪ್ರಶ್ನಿಸಿ ಇದೀಗ ಉದ್ಯಮಿ ನೀರವ್ ಮೋದಿ (businessman Nirav Modi) ಮತ್ತೆ ಲಂಡನ್ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದಲ್ಲಿ (Westminster Court) ಹೊಸ ಅರ್ಜಿ ಸಲ್ಲಿಸಿದೆ. ಇತ್ತೀಚೆಗಷ್ಟೇ ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (CPS) ತಿಹಾರ್ ಜೈಲಿನ ಪರಿಶೀಲನೆ ನಡೆಸಿತ್ತು. ಇದರ ಬೆನ್ನಲ್ಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank ) ವಂಚನೆ ಪ್ರಕರಣದ ಆರೋಪಿಯಾಗಿರುವ ನೀರವ್ ಮೋದಿ ಭಾರತಕ್ಕೆ ತನ್ನ ಹಸ್ತಾಂತರವನ್ನು ಪ್ರಶ್ನಿಸಿ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದಲ್ಲಿ ಮತ್ತೆ ಹೊಸ ಅರ್ಜಿ ಸಲ್ಲಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 6,498 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಗಳನ್ನು ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಯುಕೆ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಅದು ಅಂತಿಮ ಮೇಲ್ಮನವಿಯನ್ನೂ ತಿರಸ್ಕರಿಸಿತ್ತು.
2022ರ ನವೆಂಬರ್ 9ರಂದು ಹೊರಡಿಸಲಾದ ಆದೇಶದ ತೀರ್ಪನ್ನು ಎತ್ತಿ ಹಿಡಿದಿರುವ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಪ್ರಕರಣವನ್ನು ಯುಕೆ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆಂಬ ಮೋದಿ ಅವರ ವಿನಂತಿಯನ್ನು ಕೂಡ ವಜಾಗೊಳಿಸಿದೆ. ಈ ಕುರಿತು ಇದೀಗ ವಿಚಾರಣೆಗೆ ಮತ್ತೆ ಹೊಸ ಅರ್ಜಿಯನ್ನು ನೀರವ್ ಮೋದಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಲು ಅಧಿಕಾರಿಗಳು ಮತ್ತು ಕಾನೂನು ತಂಡವು ಲಂಡನ್‌ನಲ್ಲಿ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ಇತ್ತೀಚೆಗೆ ತಿಹಾರ್ ಜೈಲಿನ ಪರಿಶೀಲನೆ ನಡೆಸಿದ ಬಳಿಕ ಇದೀಗ ಈ ಹೊಸ ಬೆಳವಣಿಗೆಗಳಾಗಿವೆ.
ಇದನ್ನೂ ಓದಿ: Bengaluru Roads: ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ; ಡಿಕೆಶಿ ವಿರುದ್ಧ ಜೆಡಿಎಸ್ ಕಿಡಿ
ಯುಕೆ ಹೈಕೋರ್ಟ್ ತನ್ನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಜೊತೆ ಸೇರಿ ಪಿಎನ್‌ಬಿಯಲ್ಲಿ 13,000 ಕೋಟಿ ರೂ. ವಂಚನೆ ಮಾಡಿದ್ದ ಆರೋಪ ಹೊತ್ತಿರುವ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಮೇ ತಿಂಗಳ ಆರಂಭದಲ್ಲಿ ತಿರಸ್ಕರಿಸಿತು. ಭಾರತದಲ್ಲಿ ನೀರವ್ ವಿರುದ್ಧ ಮೂರು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ ಪಿಎನ್‌ಬಿ ವಂಚನೆ ಪ್ರಕರಣ, ಆದಾಯದ ಅಕ್ರಮ ವರ್ಗಾವಣೆ, ಸಿಬಿಐ ವಿಚಾರಣೆಯಲ್ಲಿ ಸಾಕ್ಷ್ಯಗಳಲ್ಲಿ ಹಸ್ತಕ್ಷೇಪ ಆರೋಪ ಸೇರಿದೆ. ಸದ್ಯ ವಾಂಡ್‌ವರ್ತ್ ಜೈಲಿನಲ್ಲಿರುವ ನೀರವ್ ಮೋದಿ ಅವರನ್ನು 2019ರ ಮಾರ್ಚ್ ತಿಂಗಳಲ್ಲಿ ಬಂಧಿಸಲಾಗಿತ್ತು.