ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್ ಸಿಂದೂರ್ ವೇಳೆ ನಾಶವಾದ ಮರ್ಕಜ್ ಮರುನಿರ್ಮಾಣ ಪಾಕಿಸ್ತಾನ ಸರ್ಕಾರದಿಂದ ನೆರವು!

ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಅನೇಕ ಭಯೋತ್ಪಾದಕ ತಾಣಗಳ ಭಾರತೀಯ ವಾಯುಪಡೆಯು ದಾಳಿ ನಡೆಸಿತ್ತು. ಈ ವೇಳೆ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿಯು ಕೂಡ ದಾಳಿಗೆ ಒಳಗಾಗಿ ನಾಶವಾಗಿತ್ತು. ಇದು ಈಗ ಪುನರ್ ನಿರ್ಮಾಣವಾಗುತ್ತಿರುವುದಾಗಿ ಭಾರತದ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿದ ದಾಖಲೆಯಲ್ಲಿ ತಿಳಿಸಲಾಗಿದೆ.

ಮುರಿಡ್ಕೆ: ಆಪರೇಷನ್ ಸಿಂದೂರ್ (Operation Sindoor) ವೇಳೆ ಭಾರತೀಯ ಸೇನೆಯು (Indian army) ನಾಶ ಪಡಿಸಿದ್ದ ಲಷ್ಕರ್-ಎ-ತೈಬಾ (Lashkar-e-Taiba) ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿಯಾದ ಪಾಕಿಸ್ತಾನದ (Pakistan) ಪಂಜಾಬ್‌ನ (Punjab) ಮುರಿಡ್ಕೆಯಲ್ಲಿರುವ (Muridke) ಮರ್ಕಜ್ ತೈಬಾದ (Markaz Taiba) ಪುನರ್ನಿರ್ಮಾಣ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಮೇ 7ರಂದು ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆಯು ಇದನ್ನು ನಾಶಪಡಿಸಿತ್ತು. ಇದೀಗ ಇದರ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು (India's intelligence agencies) ಸಿದ್ಧಪಡಿಸಿದ ದಾಖಲೆಯಲ್ಲಿ ತಿಳಿಸಲಾಗಿದೆ.

ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ನಂಟು ಇರುವುದು ಸಾಬೀತಾದ ಮೇಲೆ ಭಾರತವು ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಅನೇಕ ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿಯು ಕೂಡ ದಾಳಿಗೆ ಒಳಗಾಗಿ ನಾಶವಾಗಿತ್ತು.

ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ನಾಶಪಡಿಸಿದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿಯಾದ ಪಾಕಿಸ್ತಾನದ ಪಂಜಾಬ್‌ನ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದ ಪುನರ್ನಿರ್ಮಾಣ ಕಾರ್ಯ ಇದೀಗ ಸದ್ದಿಲ್ಲದೆ ನಡೆಯುತ್ತಿದೆ ಎನ್ನುವುದನ್ನು ಭಾರತದ ಗುಪ್ತಚರ ಸಂಸ್ಥೆಗಳು ತಿಳಿಸಿದೆ.

ಮೇ 7ರಂದು ಮಧ್ಯ ರಾತ್ರಿ ಸುಮಾರು 12.35ಕ್ಕೆ ಸರಿಯಾಗಿ ಭಾರತೀಯ ಮಿರಾಜ್ ವಿಮಾನವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಳಗೆ ನುಗ್ಗಿ 1.09 ಎಕರೆ ವಿಸ್ತೀರ್ಣದ ಮರ್ಕಜ್ ತೈಬಾ ಕ್ಯಾಂಪಸ್‌ನೊಳಗಿನ ಮೂರು ಕಟ್ಟಡಗಳ ಮೇಲೆ ದಾಳಿ ನಡೆಸಿತ್ತು. ಈ ಕಟ್ಟಡವನ್ನು ವಸತಿ ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹಣೆಗಾಗಿ ಬಳಸಲಾಗುತ್ತಿತ್ತು.

ಇದೀಗ ಎಲ್‌ಇಟಿ ಇಲ್ಲಿ ಭಾರೀ ಯಂತ್ರೋಪಕರಣಗಳನ್ನು ನಿಯೋಜಿಸಿ ಪುನರ್ ರಚನೆ ಕಾರ್ಯ ನಡೆಸುತ್ತಿದೆ. ಪುನರ್ನಿರ್ಮಾಣಗೊಂಡ ಸಂಕೀರ್ಣವನ್ನು 2026ರ ಫೆಬ್ರವರಿ 5ರಂದು ಉದ್ಘಾಟಿಸಲಾಯಿತು. ಇದನ್ನು ಮತ್ತೊಮ್ಮೆ ತರಬೇತಿ, ಬೋಧನೆ ಮತ್ತು ಕಾರ್ಯಾಚರಣೆಯ ಯೋಜನೆ ಚಟುವಟಿಕೆಗೆ ಬಳಸಲಾಗುತ್ತದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಇದರ ಪುನರ್ನಿರ್ಮಾಣ ಕಾರ್ಯವು ಮರ್ಕಜ್ ತೈಬಾದ ನಿರ್ದೇಶಕಿ ಮೌಲಾನಾ ಅಬು ಜರ್ ನೇತೃತ್ವದಲ್ಲಿ ನಡೆಯುತ್ತಿದೆ. ಎಲ್‌ಇಟಿಯ ಮುಖ್ಯ ತರಬೇತುದಾರ, ಉಸ್ತಾದ್ ಉಲ್ ಮುಜಾಹಿದ್ದೀನ್ ಎಂದು ಕರೆಯಲ್ಪಡುವ ಕಮಾಂಡರ್ ಯೂನಸ್ ಶಾ ಬುಖಾರಿ ಇದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ಸಂಘಟನೆಯು ತಾತ್ಕಾಲಿಕವಾಗಿ ತನ್ನ ತರಬೇತಿ ವಿಭಾಗಗಳನ್ನು ಬಹಾವಲ್‌ಪುರದ ಮರ್ಕಜ್ ಅಕ್ಸಾಗೆ ಮತ್ತು ಅನಂತರ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯ ವಿಶ್ವಾಸಾರ್ಹ ಸಹಾಯಕ ಅಬ್ದುಲ್ ರಶೀದ್ ಮೊಹ್ಸಿನ್ ನೇತೃತ್ವದ ಕಸೂರ್ ಜಿಲ್ಲೆಯ ಪಟೋಕಿಯಲ್ಲಿರುವ ಮರ್ಕಜ್ ಯರ್ಮೌಕ್‌ಗೆ ಸ್ಥಳಾಂತರಿಸಿತು.

ಪಾಕಿಸ್ತಾನ ಸರ್ಕಾರದಿಂದ ನೆರವು

ಆಪರೇಷನ್ ಸಿಂದೂರ್ ವೇಳೆ ನಾಶವಾದ ಎಲ್‌ಇಟಿ ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಸೌಲಭ್ಯಗಳಿಗೆ ಪಾಕಿಸ್ತಾನ ಸರ್ಕಾರವು ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿತ್ತು. ಕಳೆದ ತಿಂಗಳಲ್ಲಿ ಎಲ್ ಇಟಿ ಪಾಕಿಸ್ತಾನ ಸರ್ಕಾರದಿಂದ 1.25 ಕೋಟಿ ರೂ. ನೆರವು ಪಡೆಯಿತು. ಪುನಃ ಸ್ಥಾಪನೆಗೆ ಒಟ್ಟು 4.7 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Coolie Movie: ಕೂಲಿ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ನಟ ಆಮೀರ್ ಖಾನ್ ಸಿಡಿಮಿಡಿ? ಈ ಬಗ್ಗೆ ಹೇಳಿದ್ದೇನು?

ಹಣಕಾಸಿನ ಕೊರತೆಯನ್ನು ನೀಗಿಸಲು ಎಲ್‌ಇಟಿ ಪ್ರವಾಹ ಪರಿಹಾರ ಕಾರ್ಯಾಚರಣೆ ನಡೆಸಿ ನಿಧಿಸಂಗ್ರಹ ಅಭಿಯಾನವನ್ನು ನಡೆಸುತ್ತಿದೆ. 2005ರಲ್ಲಿ ಕೂಡ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸಂಭವಿಸಿದ ಭೂಕಂಪದ ಅನಂತರ ಎಲ್‌ಇಟಿ ಮಾನವೀಯ ನೆರವಿನ ಹೆಸರಿನಲ್ಲಿ ಶತಕೋಟಿ ಹಣವನ್ನು ಸಂಗ್ರಹಿಸಿತು. ಇದರಲ್ಲಿ ಶೇ. 80ರಷ್ಟನ್ನು ಭಯೋತ್ಪಾದಕ ಮೂಲಸೌಕರ್ಯಕ್ಕೆ ಬಳಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author