ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಪಾಕ್‌ ಮಾನ ಮರ್ಯಾದೆ ಮತ್ತೆ ಹರಾಜು! TRF ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಘೋಷಣೆ

26 ಪ್ರವಾಸಿಗರನ್ನು ಬಲಿ ತೆಗೆದುಕೊಂಡು ಪಹಲ್ಗಾಮ್‌ ಉಗ್ರರ ದಾಳಿ ಹೊಣೆ ಹೊತ್ತುಕೊಂಡಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಉಗ್ರ ಸಂಘಟನೆಯನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರ್ಪಡೆ ಮಾಡಿದೆ. ಆ ಮೂಲಕ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಮುಖಭಂಗ ಎದುರಾಗಿದೆ. ಅಲ್ಲದೇ ಭಾರತಕ್ಕೆ ಬಹುದೊಡ್ಡ ಜಯ ಇದಾಗಿದೆ.

ನವದೆಹಲಿ: ಕೆಲವು ತಿಂಗಳ ಹಿಂದೆಯಷ್ಟೇ ಬರೋಬ್ಬರಿ 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡು ಪಹಲ್ಗಾಮ್‌ ಉಗ್ರರ ದಾಳಿ(Pahalgam Attack) ಹೊಣೆ ಹೊತ್ತುಕೊಂಡಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಉಗ್ರ ಸಂಘಟನೆಯನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರ್ಪಡೆ ಮಾಡಿದೆ. ಆ ಮೂಲಕ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಮುಖಭಂಗ ಎದುರಾಗಿದೆ. ಅಲ್ಲದೇ ಭಾರತಕ್ಕೆ ಬಹುದೊಡ್ಡ ಜಯ ಇದಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ.

ಇನ್ನು ಈ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ಮಾಹಿತಿ ನೀಡಿದ್ದು, ಪಹಲ್ಗಾಮ್‌ ದಾಳಿಯಲ್ಲಿ ಬಲಿಯಾದ ಅಮಾನಕರಿಗೆ ನ್ಯಾಯ ಒದಗಿಸಲು ಮತ್ತು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ. ಇನ್ನು ಟಿಆರ್‌ಎಫ್‌ ಅನ್ನು ಜಾಗತಿಕ ಭಯೋತ್ಪಾದಕಾ ಸಂಘಟನೆ ಎಂದು ಘೋಷಿಸಬೇಕೆಂದು ಭಾರತ, ಅಮೆರಿಕದ ಜೊತೆ ಮಾತುಕತೆ ನಡೆಸುತ್ತಲೇ ಇತ್ತು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರೀ ಅವರು ಅಮೆರಿಕ ರಾಜರಾಂತ್ರಿಕ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದರು.

ಅಲ್ಲದೇ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ನೇತೃತ್ವದಲ್ಲಿ ಅಮೆರಿಕಕ್ಕೆ ತೆರಳಿದ್ದ ಸರ್ವಪಕ್ಷಗಳ ನಿಯೋಗವೂ ಈ ಬಗ್ಗೆ ಚರ್ಚೆ ನಡೆಸಿತ್ತು. ಇದರ ಬೆನ್ನಲ್ಲೇ ಪಹಲ್ಗಾಮ್‌ ದಾಳಿಯಲ್ಲಿ ಟಿಆರ್‌ಎಫ್‌ ಕೈವಾಡ ಇರುವ ಬಗ್ಗೆ ಭಾರತ ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿತ್ತು. ಇಷ್ಟೇ ಬೆಳವಣಿಗೆ ಬೆನ್ನಲ್ಲೇ ಅಮೆರಿಕ ಈ ಮಹತ್ವದ ನಿರ್ಧಾರವನ್ನು ಹೊರಹಾಕಿದೆ. ಒಟ್ಟಿನಲ್ಲಿ TRF ಈಗ ಅಲ್-ಶಬಾಬ್, ಬೊಕೊ ಹರಾಮ್, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS), ಹಮಾಸ್, ಹೆಜ್ಬೊಲ್ಲಾ ಮತ್ತು ಇಸ್ಲಾಮಿಕ್ ಜಿಹಾದ್ ಯೂನಿಯನ್ ಸೇರಿದಂತೆ ಇತರ ಕುಖ್ಯಾತ ಭಯೋತ್ಪಾದಕ ಗುಂಪುಗಳ ಪಟ್ಟಿಗೆ ಸೇರುತ್ತದೆ. ಇದು ಅಂತರರಾಷ್ಟ್ರೀಯ ಸಮುದಾಯವು ಅದರ ಕಾರ್ಯಾಚರಣೆಗಳನ್ನು ಗಂಭೀರವಾಗಿ ಗಮನಿಸುತ್ತದೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್‌ ದಾಳಿಯ ಹೊಣೆ ನಾನೇ ಹೊತ್ತುಕೊಳ್ಳುತ್ತೇನೆ ಎಂದ ಲೆಫ್ಟಿನಂಟ್ ಗವರ್ನರ್

ಈ ನಿರ್ಬಂಧದ ಪರಿಣಾಮ ಏನು?

  • ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಣೆಯಾಗುವ ಸಂಘಟನೆಗೆ ಅಮೆರಿಕದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಬೆಂಬಲ ಸಿಗುವುದಿಲ್ಲ
  • ಸಂಘಟನೆಯ ಸದಸ್ಯರು ಮತ್ತು ಬೆಂಬಲಿಗರಿಗೆ ಅಮೆರಿಕಕ್ಕೆ ಪ್ರವೇಶ ನಿಷೇಧ
  • ರಕ್ಷಣಾ ರಫ್ತು ಮತ್ತು ಮಾರಾಟದ ಮೇಲಿನ ನಿರ್ಬಂಧಗಳು
  • ಭಯೋತ್ಪಾದಕ ಚಟುವಟಿಕೆಗಳಿಗೆ ತಿರುಗಿಸಬಹುದಾದ ದ್ವಿ-ಬಳಕೆಯ ವಸ್ತುಗಳ ರಫ್ತಿನ ಮೇಲಿನ ಕಟ್ಟುನಿಟ್ಟಿನ ನಿಯಂತ್ರಣ.