Pahalgam Terror Attack: ಪಹಲ್ಗಾಮ್ ದಾಳಿಯ ಹೊಣೆ ನಾನೇ ಹೊತ್ತುಕೊಳ್ಳುತ್ತೇನೆ ಎಂದ ಲೆಫ್ಟಿನಂಟ್ ಗವರ್ನರ್
Governor Manoj Sinha: ಜಮ್ಮುಕಾಶ್ಮೀರದ ಲೆಫ್ಟಿನಂಟ್ ಗವರ್ನರ್(ಎಲ್‌ಜಿ) ಆಗಿ ಐದು ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಮನೋಜ್ ಸಿನ್ಹಾ ಅವರು, ಇಂದು ಪಹಲ್ಗಾಮ್ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದು, ಉಗ್ರರ ದಾಳಿ ಪಾಕಿಸ್ತಾನ ಪ್ರಾಯೋಜಿತವಾಗಿತ್ತು, ದೇಶದಲ್ಲಿ ಕೋಮು ಗಲಭೆ ಸೃಷ್ಠಿಸುವುದು ಆ ದಾಳಿಯ ಉದ್ದೇಶವಾಗಿತ್ತು. ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಹೇಳಿದ್ದಾರೆ.


ಶ್ರೀನಗರ: ಎರಡು ತಿಂಗಳ ಹಿಂದೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಜಮ್ಮು-ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ(LG Manoj Sinha) ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ದಾಳಿಯು ನಿಸ್ಸಂದೇಹವಾಗಿ ಭದ್ರತಾ ವೈಫಲ್ಯವಾಗಿತ್ತು ಮತ್ತು ಅದರ ಸಂಪೂರ್ಣ ಹೊಣೆಯನ್ನು ತಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಜಮ್ಮುಕಾಶ್ಮೀರದ ಲೆಫ್ಟಿನಂಟ್ ಗವರ್ನರ್(ಎಲ್‌ಜಿ) ಆಗಿ ಐದು ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಮನೋಜ್ ಸಿನ್ಹಾ ಅವರು, ಇಂದು ಪಹಲ್ಗಾಮ್ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದು, ಉಗ್ರರ ದಾಳಿ ಪಾಕಿಸ್ತಾನ ಪ್ರಾಯೋಜಿತವಾಗಿತ್ತು, ದೇಶದಲ್ಲಿ ಕೋಮು ಗಲಭೆ ಸೃಷ್ಠಿಸುವುದು ಆ ದಾಳಿಯ ಉದ್ದೇಶವಾಗಿತ್ತು. ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದಿದ್ದು ದುರಾದೃಷ್ಟಕರ. ಅಮಾಯಕರು ಉಗ್ರರ ಅಟ್ಟಗಾಸಕ್ಕೆ ಬಲಿಯಾಗಿದ್ದಾರೆ. ಭಯೋತ್ಪಾದಕರು ಪ್ರವಾಸಿಗಳನ್ನು ಗುರಿಯಾಗಿಸಿಕೊಳ್ಳುವುದಿಲ್ಲ ಎನ್ನುವುದು ಎನ್ನುವುದು ಇಲ್ಲಿಯ ಸಾಮಾನ್ಯ ನಂಬಿಕೆಯಾಗಿತ್ತು. ದಾಳಿಯು ನಡೆದ ಸ್ಥಳವು ತೆರೆದ ಹುಲ್ಲುಗಾವಲಾಗಿತ್ತು. ಅಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲು ಯಾವುದೇ ಸೌಲಭ್ಯ ಅಥವಾ ಸ್ಥಳವಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಅದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಯಾಗಿತ್ತು. ಪ್ರಕರಣದಲ್ಲಿ ಎನ್‌ಐಎ ನಡೆಸಿರುವ ಬಂಧನಗಳು ಸ್ಥಳೀಯರ ಕೈವಾಡವನ್ನು ದೃಢಪಡಿಸಿವೆ ಎಂದರು.
ಈ ಸುದ್ದಿಯನ್ನೂ ಓದಿ: Physical Assault: ಪಹಲ್ಗಾಮ್‌ನಲ್ಲಿ ಪೈಶಾಚಿಕ ಕೃತ್ಯ; 70 ವರ್ಷದ ವೃದ್ಧೆ ಮೇಲೆ ಅತ್ಯಾಚಾರ
ಆದರೆ ಜಮ್ಮುಕಾಶ್ಮೀರದಲ್ಲಿ ಭದ್ರತಾ ವಾತಾವರಣವು ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಈಗಲೇ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ಇದೊಂದು ದೇಶದ ಸ್ಥೈರ್ಯಗೆಡಿಸಲು ನಡೆಸಲಾದ ಉದ್ದೇಶಪೂರ್ವಕ ದಾಳಿಯಾಗಿತ್ತು. ಕೋಮು ವಿಭಜನೆ ವಾತಾವರಣವು ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಈಗಲೇ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ಇದೊಂದು ದೇಶದ ಸ್ಥೈರ್ಯಗೆಡಿಸಲು ನಡೆಸಲಾದ ಉದ್ದೇಶಪೂರ್ವಕ ದಾಳಿಯಾಗಿತ್ತು. ಕೋಮು ವಿಭಜನೆ ಕೋಮು ವಿಭಜನೆಯನ್ನು ಸೃಷ್ಟಿಸುವುದು ಮತ್ತು ದೇಶದ ಇತರ ಭಾಗಗಳಲ್ಲಿ ವಾಸವಾಗಿರುವ ಜಮ್ಮುಕಾಶ್ಮೀರದ ಜನರ ವಿರುದ್ಧ ಪ್ರತೀಕಾರವನ್ನು ಪ್ರಚೋದಿಸುವುದು ಮತ್ತು ತಾವು ಪರಕೀಯರು ಎಂಬ ಭಾವನೆಯನ ಅವರಲ್ಲಿ ಮೂಡಿಸುವುದು ಪಾಕಿಸ್ತಾನದ ಉದ್ದೇಶವಾಗಿತ್ತು ಎಂದು ಸಿನ್ಹಾ ಹೇಳಿದ್ದಾರೆ.