ವಾಷಿಂಗ್ಟನ್: ವಿದೇಶಗಳಲ್ಲಿ ಭಾರತೀಯರ ಮೇಲೆ ಹೆಚ್ಚುತ್ತಿರುವ (Immigration) ಹಲ್ಲೆಯ ನಡುವೆ ಇದೀಗ ಆಘಾತಕಾರಿ ಸುದ್ದಿಯೊಂದು ಹೊರ ಬಂದಿದೆ. (America) ಅಮೆರಿಕದ ಏಜೆನ್ಸಿಯೊಂದಿಗೆ ನಿಯಮಿತ ತಪಾಸಣೆಗೆ ಹೋಗಿದ್ದಕ್ಕಾಗಿ 73 ವರ್ಷದ ಸಿಖ್ ಮಹಿಳೆಯನ್ನು ಕ್ಯಾಲಿಫೋರ್ನಿಯಾದ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಕ್ಯಾಲಿಫೋರ್ನಿಯಾದ ಪೂರ್ವ ಕೊಲ್ಲಿಯಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ವಾಸಿಸುತ್ತಿರುವ ಹರ್ಜಿತ್ ಕೌರ್ ಅವರನ್ನು ಈ ವಾರದ ಆರಂಭದಲ್ಲಿ ನಿಯಮಿತ ತಪಾಸಣೆಯ ಸಮಯದಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹರ್ಜಿತ್ ಕೌರ್ ಅವರನ್ನು ಬೇಕರ್ಸ್‌ಫೀಲ್ಡ್‌ನಲ್ಲಿರುವ ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ. ವರದಿಯ ಪ್ರಕಾರ, ಹರ್ಜಿತ್ ಕೌರ್ ಯಾವುದೇ ದಾಖಲೆಗಳಿಲ್ಲದವರಾಗಿದ್ದರು. ಅವರು 1992 ರಲ್ಲಿ ಭಾರತದಿಂದ ಇಬ್ಬರು ಗಂಡು ಮಕ್ಕಳೊಂದಿಗೆ ಒಂಟಿ ತಾಯಿಯಾಗಿ ಅಮೆರಿಕಕ್ಕೆ ಬಂದರು. 2012 ರಲ್ಲಿ ಅವರ ಆಶ್ರಯ ಪ್ರಕರಣವನ್ನು ನಿರಾಕರಿಸಲಾಯಿತು, ಆದರೆ ಅಂದಿನಿಂದ ಅವರು 13 ವರ್ಷಗಳಿಗೂ ಹೆಚ್ಚು ಕಾಲ ಪ್ರತಿ ಆರು ತಿಂಗಳಿಗೊಮ್ಮೆ ಸ್ಯಾನ್ ಫ್ರಾನ್ಸಿಸ್ಕೋದ ICEಗೆ ವರದಿ" ಮಾಡಿದ್ದಾರೆ ಎಂದು ಅವರ ಸೊಸೆ ಮಾಂಜಿ ಕೌರ್ ಹೇಳಿದ್ದಾರೆ. ಪ್ರಯಾಣ ದಾಖಲೆಗಳನ್ನು ಪಡೆಯುವವರೆಗೆ ಕೆಲಸದ ಪರವಾನಗಿಯೊಂದಿಗೆ ಮೇಲ್ವಿಚಾರಣೆಯಲ್ಲಿ ಅಮೆರಿಕದಲ್ಲಿ ಉಳಿಯಬಹುದು ಎಂದು ಐಸಿಇ ಅವರಿಗೆ ಭರವಸೆ ನೀಡಿತ್ತು.
ಕೌರ್ ಅವರನ್ನು ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಸುವಂತೆ ವಿನಂತಿಸಿ ತಮ್ಮ ಕಚೇರಿಯು ICE ಗೆ ವಿಚಾರಣೆಯನ್ನು ಕಳುಹಿಸಿದೆ ಎಂದು ಕಾಂಗ್ರೆಸ್ಸಿಗ ಗರಮೇಂಡಿ ಹೇಳಿದ್ದಾರೆ. ಕೌರ್ ಬಿಡುಗಡೆಗಾಗಿ, ಶುಕ್ರವಾರ ಇನ್ಡಿವಿಸಿಬಲ್ ವೆಸ್ಟ್ ಕಾಂಟ್ರಾ ಕೋಸ್ಟಾ ಕೌಂಟಿ ಮತ್ತು ಸಿಖ್ ಸೆಂಟರ್ ಆಯೋಜಿಸಿದ್ದವು. ಯುಎಸ್ ಪ್ರತಿನಿಧಿ ಜಾನ್ ಗರಮೆಂಡಿ ಅವರ ಸಿಬ್ಬಂದಿ ಸದಸ್ಯರು, ಸ್ಥಳೀಯ ಚುನಾಯಿತ ಅಧಿಕಾರಿಗಳು ಮತ್ತು ಇತರ ರಾಜಕೀಯ ಮುಖಂಡರು ಸಹ ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ: Crime News: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಅಂದಿದ್ದೇ ತಪ್ಪಾಯ್ತೇ? ಅಮೆರಿಕದಲ್ಲಿ ಭಾರತೀಯನ ಶೂಟೌಟ್!
ಅವರ ಆರೋಗ್ಯದ ಬಗ್ಗೆ ಅವರ ಕುಟುಂಬ ಕಳವಳ ವ್ಯಕ್ತಪಡಿಸಿದ್ದು, ಥೈರಾಯ್ಡ್ ಕಾಯಿಲೆ, ಮೈಗ್ರೇನ್, ಮೊಣಕಾಲು ನೋವಿನಿಂದ ಅವರು ಬಳಲುತ್ತಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಗಳೊಂದಿಗೆ ಅವರನ್ನು ಬಂಧಿಸಲಾಗಿರುವುದರಿಂದ ಅವರ ಜೀವಕ್ಕೆ ಅಪಾಯವಿದೆ ಎಂದು ಅವರು ಹೇಳಿದ್ದಾರೆ.