ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohamed Hasham Premji: ಪಾಕಿಸ್ತಾನದ ಹಣಕಾಸು ಸಚಿವನಾಗುವ ಅವಕಾಶವಿತ್ತು ಭಾರತದ ಖ್ಯಾತ ಈ ಉದ್ಯಮಿಗೆ!

ದೇಶದಲ್ಲಿ ಅಜೀಂ ಪ್ರೇಮ್‌ಜಿ ಹೆಸರು ಕೇಳದವರು ಯಾರೂ ಇಲ್ಲ. ದೇಶದ ಹೆಮ್ಮೆಯ ಗುರುತು ವಿಪ್ರೋ ಕಂಪೆನಿಯ ಸಂಸ್ಥಾಪಕ ( Wipro founder chairman) ಅಧ್ಯಕ್ಷರಾಗಿರುವ ಅಜೀಂ ಪ್ರೇಮ್‌ಜಿ (Azim Premji) ಅವರ ತಂದೆಗೆ (Mohamed Hasham Premji) ಪಾಕಿಸ್ತಾನದಿಂದ ಹಣಕಾಸು ಸಚಿವ ಹುದ್ದೆಯನ್ನು (Pakistan’s 1st Finance Minister) ಆಫರ್ ಮಾಡಲಾಗಿತ್ತು.

ನವದೆಹಲಿ: ಪಾಕಿಸ್ತಾನ (Pakistan) ಸ್ವಾತಂತ್ರ್ಯ ರಾಷ್ಟ್ರವಾಗುವುದು ಪಕ್ಕಾ ಆಗಿತ್ತು. ಆಗ ಭಾರತದ ಕೆಲವು ಸುಪ್ರಸಿದ್ದ ವ್ಯಕ್ತಿಗಳಿಗೆ ವಿವಿಧ ಅವಕಾಶಗಳನ್ನು ನೀಡಲಾಗಿತ್ತು. ಕೆಲವರು ಇದನ್ನು ಒಪ್ಪಿಕೊಂಡು ಪಾಕಿಸ್ತಾನಕ್ಕೆ ತೆರಳಿದರೆ ಇನ್ನು ಕೆಲವರು ತಾವು ಹುಟ್ಟಿ ಬೆಳೆದ ದೇಶದ ಮೇಲಿನ ಪ್ರೀತಿಯಿಂದ ಇಲ್ಲೇ ಉಳಿದರು. ಅಂತವರಲ್ಲಿ ಗುಜರಾತಿ ಉದ್ಯಮಿ (Gujarat businessman) ಕೂಡ ಒಬ್ಬರು. ಅವರು ಬಳಿಕ ದೇಶದಲ್ಲಿ ಪ್ರಸಿದ್ಧ ಕಂಪೆನಿಯೊಂದನ್ನು ಸ್ಥಾಪಿಸಿದರು.

ಆ ಕಂಪೆನಿ ಇವತ್ತು ವಿಶ್ವದಾದ್ಯಂತ ಗುರುತಿಸಿಕೊಂಡಿದೆ. ದೇಶದಲ್ಲಿ ಅಜೀಂ ಪ್ರೇಮ್‌ಜಿ ಹೆಸರು ಕೇಳದವರು ಯಾರೂ ಇಲ್ಲ. ದೇಶದ ಹೆಮ್ಮೆಯ ಗುರುತು ವಿಪ್ರೋ ಕಂಪೆನಿಯ ಸಂಸ್ಥಾಪಕ (Wipro founder chairman) ಅಧ್ಯಕ್ಷರಾಗಿರುವ ಅಜೀಂ ಪ್ರೇಮ್‌ಜಿ (Azim Premji) ಅವರ ತಂದೆಗೆ (Mohamed Hasham Premji) ಪಾಕಿಸ್ತಾನದಿಂದ ಹಣಕಾಸು ಸಚಿವ ಹುದ್ದೆಯನ್ನು (Pakistan’s 1st Finance Minister) ಆಫರ್ ಮಾಡಲಾಗಿತ್ತು. ಅಜೀಂ ಪ್ರೇಮ್‌ಜಿ ಅವರ ತಂದೆ ಮೊಹಮ್ಮದ್ ಹಶಮ್ ಪ್ರೇಮ್‌ಜಿ 1945ರಲ್ಲಿ ಸ್ಥಾಪಿಸಿದ್ದ ವೆಸ್ಟರ್ನ್ ಇಂಡಿಯಾ ಪ್ರಾಡಕ್ಟ್ಸ್ ಲಿಮಿಟೆಡ್ ಹೆಸರನ್ನು ಬಳಿಕ ವಿಪ್ರೋ ಎಂದು ಬದಲಾಯಿಸಲಾಯಿತು.

ವಿಪ್ರೋ ಸಂಸ್ಥಾಪಕ ಅಧ್ಯಕ್ಷರಾದ ಅಜೀಂ ಪ್ರೇಮ್‌ಜಿ ಅವರು ಇತ್ತೀಚೆಗೆ ತಮ್ಮ 80ನೇ ಜನ್ಮ ದಿನವನ್ನು ಆಚರಿಸಿಕೊಂಡರು. ವಿವಿಧ ವ್ಯವಹಾರದಲ್ಲಿ ಹೆಸರು ಮಾಡಿದ್ದ ಅಜೀಂ ಪ್ರೇಮ್‌ಜಿ ಅವರ ತಂದೆ ಮೊಹಮ್ಮದ್ ಹಶಮ್ ಪ್ರೇಮ್‌ಜಿ ಅವರು 1966ರಲ್ಲಿ ನಿಧನರಾದರು. ಇವರು ಅಡುಗೆ ಎಣ್ಣೆ, ಐಟಿ, ಬಿಪಿಒ ಮತ್ತು ಆರ್ ಆಂಡ್ ಡಿ ಸೇವೆಗಳ ಸಂಸ್ಥೆಯಂತಹ ಕ್ಷೇತ್ರಗಳಲ್ಲಿ ವಿಪ್ರೋದ ವ್ಯವಹಾರ ಹಿತಾಸಕ್ತಿಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರಿಗೆ ಪಾಕಿಸ್ತಾನದ ಮುಹಮ್ಮದ್ ಅಲಿ ಜಿನ್ನಾ ಅವರೇ ಪಾಕಿಸ್ತಾನದ ಹಣಕಾಸು ಸಚಿವ ಹುದ್ದೆಯ ಆಫರ್ ನೀಡಿದರು.

ಗುಜರಾತಿ ಇಸ್ಮಾಯಿಲಿ ಮುಸ್ಲಿಂ ಕುಟುಂಬಕ್ಕೆ ಸೇರಿದ ಹಶಮ್ ಪ್ರೇಮ್‌ಜಿ ಅವರು 1945ರಲ್ಲಿ ವೆಸ್ಟರ್ನ್ ಇಂಡಿಯಾ ಪ್ರಾಡಕ್ಟ್ಸ್ ಲಿಮಿಟೆಡ್ ಎಂಬ ಸಸ್ಯಜನ್ಯ ಎಣ್ಣೆ ಕಂಪೆನಿಯನ್ನು ಸ್ಥಾಪಿಸಿದರು. ಅದೇ ವರ್ಷ ಅವರ ಮಗ ಅಜೀಂ ಜನಿಸಿದರು. 1947ರಲ್ಲಿ ದೇಶ ವಿಭಜನೆಯಾದಾಗ ಪ್ರೇಮ್‌ಜಿ ಮತ್ತು ಅವರ ಕುಟುಂಬವು ಭಾರತದಲ್ಲಿಯೇ ಉಳಿಯಲು ನಿರ್ಧರಿಸಿದರು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸ್ಥಾಪಕ ಪಿತಾಮಹ ಜಿನ್ನಾ ಅವರು ಹಶೀಮ್ ಅವರನ್ನು ಕ್ಯಾಬಿನೆಟ್ ಮಂತ್ರಿಯನ್ನಾಗಿ ಪಡೆಯಲು ನಿರ್ಧರಿಸಿದರು. ಈ ಬಗ್ಗೆ ಅವರು ಪ್ರೇಮ್ ಜಿ ಅವರನ್ನು ಸಂಪರ್ಕಿಸಿದ್ದರು. ಈ ಕುರಿತು ದಿನೇಶ್ ಸಿ ಶರ್ಮಾ ಅವರು ತಮ್ಮ "ದಿ ಲಾಂಗ್ ರೆವಲ್ಯೂಷನ್ - ದಿ ಬರ್ತ್ ಅಂಡ್ ಗ್ರೋತ್ ಆಫ್ ಇಂಡಿಯಾಸ್ ಐಟಿ ಇಂಡಸ್ಟ್ರಿ" ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Mysuru News: ಅಡಕೆ ಎಂಬ ಭಾವಿಸಿ ಜಜ್ಜಿದಾಗ ಸಿಡಿಮದ್ದು ಸ್ಫೋಟ, ಮಹಿಳೆಗೆ ತೀವ್ರ ಗಾಯ

'ಬರ್ಮಾದ ಅಕ್ಕಿ ರಾಜ' ಎಂದೂ ಕರೆಯಲ್ಪಡುವ ಮೊಹಮ್ಮದ್ ಹಶಮ್ ಪ್ರೇಮ್‌ಜಿ ಅವರು ಬಾಂಬೆಯಲ್ಲಿ ಪ್ರಮುಖ ಅಕ್ಕಿ ವ್ಯಾಪಾರಿ ಮತ್ತು ಕಮಿಷನ್ ಏಜೆಂಟ್ ಆಗಿದ್ದರು. 1944ರಲ್ಲಿ ಮುಸ್ಲಿಂ ಲೀಗ್‌ನ ಯೋಜನಾ ಸಮಿತಿ ಸ್ಥಾಪನೆಯಾದಾಗ ಮೊಹಮ್ಮದ್ ಅಲಿ ಜಿನ್ನಾ ಅವರು ಹಶಮ್ ಪ್ರೇಮ್‌ಜಿ ಅವರನ್ನು ಆಹ್ವಾನಿಸಿದ್ದರು. ಆದರೆ ವೈಯಕ್ತಿಕ ಮತ್ತು ವ್ಯವಹಾರದ ಕಾರಣದಿಂದಾಗಿ ಅವರು ಲೀಗ್‌ಗೆ ಸೇರಲು ಬಯಸಲಿಲ್ಲ ಎಂದು ಶರ್ಮಾ ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author