ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harmed: ಆಫೀಸ್‌ನಲ್ಲಿ ‘ನಾಯಿಮರಿ’ ಎಂದು ಕರೆದಿದ್ದಕ್ಕೆ ಯುವತಿ ಆತ್ಮಹತ್ಯೆ; 90 ಕೋಟಿ ರೂ. ಪರಿಹಾರ ನೀಡುವಂತೆ ಬಾಸ್‌ಗೆ ಆದೇಶ

ಜಪಾನ್‌ನ D-UP ಕಾಸ್ಮೆಟಿಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಸತೋಮಿ ಎಂಬ ಯುವತಿ ಆಫೀಸ್‌ನಲ್ಲಿ ನಡೆದ ರ‍್ಯಾಗಿಂಗ್‌ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಶಿಕ್ಷೆಯಾಗಿ ಟೋಕಿಯೋ ನ್ಯಾಯಾಲಯವು ಕಂಪನಿ ಮತ್ತು ಅದರ ಅಧ್ಯಕ್ಷ ಮಿತ್ಸುರು ಸಾಕೈಗೆ 150 ಮಿಲಿಯನ್ ಯೆನ್ (ಸುಮಾರು 90 ಕೋಟಿ ರೂ.) ಪರಿಹಾರ ನೀಡುವಂತೆ ಆದೇಶಿಸಿದೆ.

ಸಾಂದರ್ಭಿಕ ಚಿತ್ರ

ಟೋಕಿಯೋ: ಜಪಾನ್‌ನ (Japan) D-UP ಕಾಸ್ಮೆಟಿಕ್ಸ್ ಕಂಪನಿಯಲ್ಲಿ ಕೆಲಸದ ಸ್ಥಳದಲ್ಲಿ (Workplace) ನೀಡುತ್ತಿದ್ದ ಕಿರುಕುಳದಿಂದ (Harassment) 25 ವರ್ಷದ ಸತೋಮಿ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ಸಂಬಂಧ ಟೋಕಿಯೋ ನ್ಯಾಯಾಲಯವು (Tokyo Court) ಕಂಪನಿ ಮತ್ತು ಅಧ್ಯಕ್ಷ ಮಿತ್ಸುರು ಸಾಕೈಗೆ 150 ಮಿಲಿಯನ್ ಯೆನ್ (ಸುಮಾರು 90 ಕೋಟಿ ರೂ.) ಪರಿಹಾರ ನೀಡುವಂತೆ ಆದೇಶಿಸಿದೆ. ಸಾಕೈ ಕೂಡ ರಾಜೀನಾಮೆ ನೀಡಿದ್ದಾರೆ. ಈ ತೀರ್ಪು ಕೆಲಸದ ಸ್ಥಳದ ಸಂಸ್ಕೃತಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಘಟನೆಯ ವಿವರ

ಸತೋಮಿ 2021ರಲ್ಲಿ D-UP ಕಂಪನಿಯಲ್ಲಿ ಕೆಲಸ ಆರಂಭಿಸಿದರು. 2021ರ ಡಿಸೆಂಬರ್‌ನಲ್ಲಿಅಧ್ಯಕ್ಷ ಸಾಕೈ ಜತೆಗಿನ ಸಭೆಯಲ್ಲಿ, ಪೂರ್ವಾನುಮತಿ ಇಲ್ಲದೆ ಕ್ಲೈಂಟ್ ಅನ್ನು ಭೇಟಿ ಮಾಡಿದ್ದಕ್ಕಾಗಿ ಸಟೋಮಿಯನ್ನು ಕಟುವಾಗಿ ಟೀಕಿಸಲಾಯಿತು. ಆಕೆಯನ್ನು “ನಾಯಿಮರಿ” ಎಂದು ಕರೆದು ಅವಮಾನಿಸಲಾಯಿತು. ಮರುದಿನ “ದುರ್ಬಲ ನಾಯಿ ಜೋರಾಗಿ ಬೊಗಳುತ್ತದೆ” ಎಂದು ಮತ್ತೆ ಕೀಳಾಗಿ ಮಾತನಾಡಿದರು.

ಈ ಕಿರುಕುಳದಿಂದ ಸತೋಮಿಗೆ ಒತ್ತಡ ಹೆಚ್ಚಾಯಿತು. 2022ರ ಜನವರಿಯಲ್ಲಿ ಡಿಪ್ರೆಶನ್‌ನ ಚಿಕಿತ್ಸೆಗಾಗಿ ರಜೆ ತೆಗೆದುಕೊಂಡರು. 2022ರ ಆಗಸ್ಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದರು. ಕೋಮಾದಲ್ಲಿದ್ದ ಆಕೆ 2023ರ ಅಕ್ಟೋಬರ್‌ನಲ್ಲಿ ಸಾವನ್ನಪ್ಪಿದರು. ಸತೋಮಿಯ ಪೋಷಕರು 2023ರ ಜುಲೈನಲ್ಲಿ ಕಂಪನಿ ಮತ್ತು ಸಾಕೈ ವಿರುದ್ಧ ದೂರು ದಾಖಲಿಸಿದರು. 2024ರ ಮೇಯಲ್ಲಿ ತನಿಖಾಧಿಕಾರಿಗಳು ಕಿರುಕುಳವು ಸತೋಮಿಯ ಡಿಪ್ರೆಶನ್ ಮತ್ತು ಸಾವಿಗೆ ಕಾರಣ ಎಂದು ದೃಢಪಡಿಸಿದರು. ಇದನ್ನು ಕೆಲಸಕ್ಕೆ ಸಂಬಂಧಿತ ಅಪಘಾತವೆಂದು ವರ್ಗೀಕರಿಸಲಾಯಿತು.

ಈ ಸುದ್ದಿಯನ್ನು ಓದಿ: Viral News: ರಜೆ ಕೇಳಿದ ಕೆಲವೇ ನಿಮಿಷಗಳಲ್ಲಿ 40 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವು!

ನ್ಯಾಯಾಲಯದ ಆದೇಶ

ಸೆಪ್ಟೆಂಬರ್ 9ರಂದು, ಟೋಕಿಯೋ ನ್ಯಾಯಾಲಯವು ಕಂಪನಿ ಮತ್ತು ಸಾಕೈಗೆ 90 ಕೋಟಿ ರೂ. ಪರಿಹಾರ ನೀಡಲು ಆದೇಶಿಸಿತು. ಸಾಕೈ ರಾಜೀನಾಮೆ ನೀಡಿದ್ದು, ಕಂಪನಿ ಕ್ಷಮೆಯಾಚಿಸಿದೆ. “ನಾವು ಆಕೆಯ ಕುಟುಂಬಕ್ಕೆ ಕ್ಷಮೆ ಕೇಳುತ್ತೇವೆ. ಕೆಲಸದ ಸ್ಥಳವನ್ನು ಸುಧಾರಿಸುತ್ತೇವೆ” ಎಂದು ಕಂಪನಿ ಹೇಳಿದೆ.

ಈ ಘಟನೆ ಜಪಾನ್‌ನ ಕಠಿಣ ಕೆಲಸದ ಸಂಸ್ಕೃತಿಯನ್ನು ಎತ್ತಿ ಹೇಳಿದೆ. ಕೆಲಸದ ಸ್ಥಳದ ಕಿರುಕುಳವು ಮಾನಸಿಕ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಜಗತ್ತಿನಾದ್ಯಂತ ಕಂಪನಿಗಳು ಕಿರುಕುಳ ತಡೆಗಟ್ಟುವ ಕ್ರಮಗಳನ್ನು ಬಲಪಡಿಸಬೇಕು ಎಂದು ಒತ್ತಾಯವಾಗಿದೆ.