ನವದೆಹಲಿ: ಕೆನಡಾದಲ್ಲಿ (Canada) ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧದ ಪ್ರತಿಭಟನೆಗಳ (Protests) ಹಿಂದೆ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ‘ಸಿಖ್ಸ್ ಫಾರ್ ಜಸ್ಟಿಸ್’ (Sikhs For Justice ) ಸೇರಿದಂತೆ ತೀವ್ರವಾದಿ ಗುಂಪುಗಳ ಕೈವಾಡವಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಮಾದಕ ದ್ರವ್ಯ ಮತ್ತು ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದಿಂದ ಗಳಿಸಿದ ಹಣ ಈ ಪ್ರತಿಭಟನೆಗಳಿಗೆ ಆರ್ಥಿಕ ಬೆಂಬಲ ನೀಡುತ್ತಿದೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರೂಡೋ (Justin Trudeau) ಸರ್ಕಾರದ ಖಲಿಸ್ತಾನಿ (Khalistani) ವಿಷಯದ ನಿಲುವಿನಿಂದ ಗುರುದ್ವಾರಗಳಲ್ಲಿ ಒಡಕು ಉಂಟಾಗಿದೆ. ಬಹುತೇಕ ಸಿಖ್ಖರು ಐಎಸ್‌ಐ ಪ್ರಭಾವದಲ್ಲಿ ಅನಗತ್ಯ ಸಮುದಾಯ ಘರ್ಷಣೆಯನ್ನು ವಿರೋಧಿಸುತ್ತಾರೆ ಎಂದು ಮೂಲಗಳು ಹೇಳಿವೆ.
ಜಿ7 ರಾಷ್ಟ್ರಗಳು ಭಾರತದೊಂದಿಗೆ ವ್ಯಾಪಾರದಲ್ಲಿ ಒಲವು ತೋರುತ್ತಿವೆ. ಆದರೆ ಪಾಕ್ ಭಯೋತ್ಪಾದಕ ಗುಂಪುಗಳು ಅಡ್ಡಿಪಡಿಸುತ್ತಿವೆ. ಕೆನಡಾದಲ್ಲಿ ಗ್ಯಾಂಗ್‌ಸ್ಟರ್‌ಗಳು ಮತ್ತು ಖಲಿಸ್ತಾನಿ ಗುಂಪುಗಳಿಗೆ ಆಶ್ರಯವಿದೆ ಎಂದು ಮೂಲವೊಂದು ತಿಳಿಸಿದೆ.
ಕೆನಡಾದಲ್ಲಿರುವ ಖಾಲಿಸ್ತಾನಿ ಗುಂಪುಗಳು
- ಅಂತಾರಾಷ್ಟ್ರೀಯ ಸಿಖ್ ಯುವ ಒಕ್ಕೂಟ (ISYF)
- ಬಬ್ಬರ್ ಖಾಲ್ಸಾ
- ಖಾಲಿಸ್ತಾನ್ ಟೈಗರ್ ಫೋರ್ಸ್ (KTF)
- ಸಿಖ್ ಫಾರ್ ಜಸ್ಟೀಸ್ (SFJ)
- ದಲ್ ಖಾಲ್ಸಾ
ಗುರುತಿಸಲಾದ ಕೆನಡಾದ ಭಯೋತ್ಪಾದಕರು
- ಹರ್ದೀಪ್ ಸಿಂಗ್ ನಿಜ್ಜರ್ (ಮೃತ)
- ಮಂದೀಪ್ ಸಿಂಗ್ ಧಲಿವಾಲ್
- ಪರ್ವ್ಕರ್ ಸಿಂಗ್ ದುಲೈ
- ಗುರುಪತ್ವಂತ್ ಸಿಂಗ್ ಪನ್ನುನ್ (SFJ ನಾಯಕ)
2023ರ ಜೂನ್ 4ರಂದು, ಬ್ರಾಂಪ್ಟನ್‌ನಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ದೃಶ್ಯವನ್ನು ಖಲಿಸ್ತಾನಿ ಗುಂಪುಗಳು ಆಪರೇಶನ್ ಬ್ಲೂಸ್ಟಾರ್‌ನ 39ನೇ ವಾರ್ಷಿಕೋತ್ಸವದಂದು ಪ್ರದರ್ಶಿಸಿದವು. ಭಾರತ ಸರ್ಕಾರ ಇದನ್ನು ಖಂಡಿಸಿತು. ಖಲಿಸ್ತಾನಿಗಳು ಕೇವಲ ಪ್ರತಿಭಟನೆಗೆ ಸೀಮಿತವಾಗದೆ.
ದೈಹಿಕ ದಾಳಿಗಳಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯಿಂದ ಬಬ್ಬರ್ ಖಲ್ಸಾದ ಲಖ್‌ಬೀರ್ ಸಿಂಗ್ ಸಂಧು (ಲಂಡಾ) ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್‌ನ ಅರ್ಶ್‌ದೀಪ್ ಸಿಂಗ್ ಗಿಲ್ (ಅರ್ಶ್ ದಲ್ಲಾ) ಸೇರಿದಂತೆ ಹಲವರ ಗಡೀಪಾರು ವಿನಂತಿಗಳು ಕೆನಡಾದಲ್ಲಿ ಬಾಕಿಯಿವೆ.
ಕೆನಡಾದ ಸತ್ವಿಂದರ್‌ಜೀತ್ ಸಿಂಗ್ (ಗೋಲ್ಡಿ ಬ್ರಾರ್) 2022ರಲ್ಲಿ ಸಿದ್ಧು ಮೂಸೆ ವಾಲಾ ಕೊಲೆಯ ಆರೋಪಿಯಾಗಿದ್ದಾನೆ. SFJನ ಗುರ್‌ಪತ್‌ವಂತ್ ಸಿಂಗ್ ಪನ್ನೂನ್ ವಿರುದ್ಧವೂ ಕಾನೂನು ಕ್ರಮವಿಲ್ಲ.
ಇದನ್ನೂ ಓದಿ: Actress Karishma Kapoor: ನಟಿ ಕರಿಷ್ಮಾ ಮತ್ತು ಸಂಜಯ್ ಡಿವೋರ್ಸ್‌ಗೆ ಅಸಲಿ ಕಾರಣ ಏನು ಗೊತ್ತಾ?
“ಕೆನಡಾ ಸರ್ಕಾರ ತೀವ್ರವಾದಿಗಳಿಗೆ ವೇದಿಕೆಯನ್ನು ಒದಗಿಸುತ್ತಿದೆ. ಖಲಿಸ್ತಾನಿ ತೀವ್ರವಾದವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಮೂಲವೊಂದು ಒತ್ತಾಯಿಸಿದೆ. ಭಾರತೀಯ ದೇವಾಲಯಗಳ ಮೇಲಿನ ದಾಳಿಗಳ ಬಗ್ಗೆ ಕೆನಡಾದ ಬದ್ಧತೆ ಅಸ್ಪಷ್ಟವಾಗಿದೆ.