ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೊಸ ಯಮಾಹಾ ಸ್ಕೂಟರ್‌

ಹೊಸ ಯಮಾಹಾ ಸ್ಕೂಟರ್‌

image-ccddc20c-3f41-4484-93a3-1d692db65bb6.jpg
ಬೈಕೋಬೇಡಿ ಅಶೋಕ್ ನಾಯಕ್‌ ಪ್ರತಿ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗುವ ಹೊಸ ಮಾಡೆಲ್ ಕುರಿತು ನಾವೆಷ್ಟು ತಲೆ ಕೆಡಿಸಿಕೊಳ್ಳುತ್ತೇವೆಂದರೆ, ಇದು ನಮ್ಮಿಷ್ಟದ್ದಾಗಿರಬೇಕು ಎಂಬುದು ಸಣ್ಣ ಆಸೆ ಕೂಡ. ಇಂಥ ವಿಚಾರದಲ್ಲಿ ವಾಹನ ತಯಾರಿಕಾ ಕಂಪೆನಿಗಳು ಯಾವತ್ತು ಮುಂದೆ ಇರುತ್ತದೆ. ಕಾರಣ, ಮಾನವನ ಕಲ್ಪನೆಯನ್ನು ಅಳೆಯುವುದು ಕಷ್ಟ. ಆದರೆ, ತಮ್ಮದೇ ಆದ ಅದ್ಭುತ ಆಲೋಚನೆಗಳ ಮೂಲಕ ಖರೀದಿದಾರರ ಯೋಚನೆಯ ನ್ನೇ ಬದಲಿಸುವ ತಾಕತ್ತು ಇಂದಿನ ವಾಹನ ತಯಾರಿಕಾ ಕಂಪೆನಿಗಳಿಗಿದೆ. ಇದು ಅವರಿಗೆ ಸವಾಲು ಕೂಡ ಆಗಿದೆ. ಸವಾಲುಗಳಿದ್ದಲ್ಲಿ ಹೊಸತನಕ್ಕೆ ಅವಕಾಶ ಇರುತ್ತದೆ. ಯಾಮಾಹಾ ಎನ್ ಮ್ಯಾಕ್ಸ್ ೧೫೫ ಟ್ಯೂಬ್ಲೆಸ್ ಟೈರ್ ಈ ಸ್ಕೂಟರ್‌ನ ವಿಶೇಷತೆ. ೧೫೫ ಸಿಸಿ ಎಂಜಿನ್ ಸಾಮರ್ಥ್ಯದ ಈ ವಾಹನ ಇಂಡೋನೇಶಿಯಾ ಮೂಲದ ಕಂಪೆನಿಯ ಉತ್ಪನ್ನ. ಈ ವಾಹನದ ವಿಶೇಷ ಫೀಚರ್ಸ್‌ ಗಳೆಂದರೆ, ಎಲ್ಇಡಿ ಲೈಟ್ಸ್ ಹಾಗೂ ಟೈಲ್ ಲ್ಯಾಂಪು. ಇದಕ್ಕೆ ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಕೂಡ ಇದೆ. ಇದರ ಬೆಲೆ ಸುಮಾರು ರು.೧.೩೦ ಲಕ್ಷದಿಂದ ಆರಂಭ. ಮಾರ್ಚ್ ೨೦೨೩ರ ಸಮಯಕ್ಕೆ ಈ ಸ್ಕೂಟರ್, ಮಾರುಕಟ್ಟೆಗೆ ಬರಬಹುದು ಎಂಬ ನಿರೀಕ್ಷೆ ಇದೆ. ೧೨೭ ಕೆ.ಜಿ. ತೂಕ, ಸೆಲ್ ಸ್ಟಾರ್ಟ್, ಆರಂಭದಲ್ಲಿ ಎನ್ಮ್ಯಾಕ್ಸ್ ೧೫೫ ಮಾಡೆಲ್ ಹೊರತಂದರೂ, ಇದರ ಸ್ಪೋರ್ಟ್ಸ್ ವರ್ಷನ್ ಆರೋಕ್ಸ್ ೧೫೫ ಹೆಚ್ಚು ಆಕರ್ಷಕ. ಬಜಾಜ್ ಅವೆಂಜರ್ ಕ್ರೂಯಿಸ್ ೨೨೦ ಕೆಳಮಟ್ಟದ ಸೀಟು, ಕಂಫರ್ಟಬಲ್ ಎರ್ಗೋ ನಾಮಿಕ್ಸ್ ಇದು ಕ್ರೂಯಿಸ್ ವಾಹನದ ವಿಶೇಷತೆ. ಇದರ ಬೆಲೆ ಸುಮಾರು ರು.೧.೩೮ ಲಕ್ಷದಿಂದ ಆರಂಭ. ಮೂನ್ ವೈಟ್ ಆಬರ್ನ್ ಬ್ಲ್ಯಾಕ್ ಬಣ್ಣದಲ್ಲಿ ಬರುತ್ತದೆ. ಇದರ ಡಿಸೈನ್ ಅವೆಂಜರ್ ಬೈಕ್‌ನಂತೆ ಇದೆ. ಹೌಸಿಂಗ್ ಓಡೋಮಿಟರ್, ಟ್ರಿಪ್ ಮೀಟರ್, ಕ್ಲಾಕ್, ಫುಯೆಲ್ ಗೇಜ್ ಹಾಗೂ ರಿಮೈಂಡರ್ ಸರ್ವಿಸ್ ಇವುಗಳನ್ನು ಹೊಂದಿದೆ. ಇದರ ಗೇರ್ ಬಾಕ್ಸ್‌ನಲ್ಲಿ -ವ್ ಸ್ಪೀಡ್ ಯೂನಿಟ್ ನೀಡಲಾಗಿದೆ. ಈ ವಾಹನಕ್ಕೆ ನೇರ ಸ್ಪರ್ಧಿಗಳಿಲ್ಲ ಆದರೆ, ಟಿವಿಎಸ್ ಅಪಾಚೆ ಆರ್‌ಟಿಆರ್ ೨೦೦ ೪ವಿ ಮತ್ತು ಸುಜುಕಿ ಗಿಕ್ಸರ್ ಎಸ್‌ಎಫ್ ಇವು ಹೊರತಲ್ಲ.