ಗುಡ್‌ನ್ಯೂಸ್! ವಾಟ್ಸಾಪ್‌ನಲ್ಲಿ ಸಿಗಲಿದೆ ಹೊಸ ಫೀಚರ್
ವಾಟ್ಸಾಪ್‌ನಲ್ಲಿ ಬಹು ನಿರೀಕ್ಷಿತ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಫೀಚರ್ (Whatsapp New Feature) ಶೀಘ್ರದಲ್ಲೇ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಲಭ್ಯವಾಗಲಿದೆ. ಇದರಿಂದ ಮೊಬೈಲ್ ಬಳಕೆದಾರರು ದಾಖಲೆಗಳನ್ನು ಸ್ಕ್ಯಾನ್ ಮಾಡಲು ಪ್ರತ್ಯೇಕ ಅಪ್ಲಿಕೇಶನ್ ಬಳಸಬೇಕಾಗಿಲ್ಲ. ನೇರವಾಗಿ ವಾಟ್ಸಾಪ್ ಮೂಲಕ ಕೆಮರಾದಲ್ಲಿ ಸ್ಕ್ಯಾನ್ ಮಾಡಿ ಅದನ್ನು ಪಿಡಿಎಫ್ ಸ್ವರೂಪಕ್ಕೆ ಬದಲಾಯಿಸಿ ನೋಡಬಹುದಾಗಿದೆ. ಇದರ ಮತ್ತೊಂದು ಲಾಭವೆಂದರೆ ಇದನ್ನು ನೇರವಾಗಿ ವಾಟ್ಸಾಪ್ ನಲ್ಲಿ ಸಂಪರ್ಕದಲ್ಲಿರುವ ಇತರರಿಗೂ ಕಳುಹಿಸಬಹುದು.