ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉತ್ಕೃಷ್ಟ ಕಾರ್ಯಕ್ಷಮತೆ ಹೊಂದಿರುವ ಹೊಚ್ಚ ಹೊಸ ಕೈಗರ್ ಬಿಡುಗಡೆ ಮಾಡಿದ ರೆನಾಲ್ಟ್

ಹೊರಾಂಗಣ ವಿನ್ಯಾಸದಲ್ಲಿ ಬದಲಾವಣೆ: ಆಕರ್ಷಕ ಫ್ರಂಟ್ ಗ್ರಿಲ್, ಸಂಪೂರ್ಣ ಹೊಸ ಹುಡ್, ಮರುವಿನ್ಯಾಸಗೊಂಡ ಮುಂಭಾಗ ಮತ್ತು ಹಿಂಭಾಗದ ಬಂಪರ್‌ ಗಳು, ಎಲ್‌ಇಡಿ ಹೆಡ್‌ ಲ್ಯಾಂಪ್‌ ಗಳು, ಟೇಲ್‌ ಲ್ಯಾಂಪ್‌ ಗಳು, ಫಾಗ್ ಲ್ಯಾಂಪ್‌ ಗಳು, 16- ಇಂಚಿನ ಡೈಮಂಡ್ ಕಟ್ ಇವೇಷನ್ ಅಲಾಯ್ ವೀಲ್‌ ಗಳು ಮತ್ತು ಸ್ಕಿಡ್ ಪ್ಲೇಟ್‌ ಗಳು - ಹೀಗೆ ಬಹಳಷ್ಟು ಹೊಸತನಗಳಿವೆ.

ಫ್ರೆಂಚ್ ಕಾರ್ ತಯಾರಿಕಾ ಕಂಪನಿಯಾದ ರೆನಾಲ್ಟ್ ಗ್ರೂಪ್‌ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಗಿರುವ ರೆನಾಲ್ಟ್ ಇಂಡಿಯಾ ಸಂಸ್ಥೆಯು ಇಂದು ತನ್ನ “ರೀಥಿಂಕ್ ಪರ್ಫಾರ್ಮೆನ್ಸ್” ತತ್ವದಡಿ ಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಹೊಚ್ಚ ಹೊಸ ರೆನಾಲ್ಟ್ ಕೈಗರ್ ಅನ್ನು ಬಿಡುಗಡೆ ಮಾಡಿದೆ.

ಸುಧಾರಿತ 100 ಪಿಎಸ್ ಟರ್ಬೊಚಾರ್ಜ್ಡ್ ಎಂಜಿನ್ ಮತ್ತು 35ಕ್ಕೂ ಹೆಚ್ಚು ಸುಧಾರಣೆಗಳನ್ನು ಹೊಂದಿರುವ ಈ ಸಬ್-ಫೋರ್ ಮೀಟರ್ ಎಸ್‌ಯುವಿ ಅತ್ಯುತ್ಕೃಷ್ಟ ಕಾರ್ಯಕ್ಷಮತೆ, ವಿಭಾಗದಲ್ಲಿಯೇ ಅತ್ಯುತ್ತಮವಾದ ಇಂಧನ ದಕ್ಷತೆ ಮತ್ತು ಗ್ರಾಹಕರಿಗೆ ಅಸಾಧಾರಣ ಮೌಲ್ಯವನ್ನು ನೀಡುವಂತೆ ವಿನ್ಯಾಸಗೊಂಡಿದೆ.

ಹೊಸ ಕೈಗರ್ ಆಕರ್ಷಕ ವಿನ್ಯಾಸ, ಸ್ಮಾರ್ಟ್ ತಂತ್ರಜ್ಞಾನ ಮತ್ತು ಸುಧಾರಿತ ಸುರಕ್ಷತಾ ಫೀಚರ್ ಗಳನ್ನು ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಒದಗಿಸಲು ಅಪ್ ಗ್ರೇಡ್ ಮಾಡಲಾಗಿದೆ. ಇದು ವಿವಿಧ ವೇರಿಯೆಂಟ್ ಗಳಲ್ಲಿ ಲಭ್ಯವಿದೆ. ಟರ್ಬೊ ಕೈಗರ್ ವೇರಿಯಂಟ್‌ ಗಳಾದ ಟೆಕ್ನೋ ಮತ್ತು ಇಮೋಷನ್‌ ಗೆ ರೂ. 9.99 ಲಕ್ಷದಿಂದ ರೂ. 11.29 ಲಕ್ಷ (ಎಕ್ಸ್-ಶೋರೂಮ್) ಬೆಲೆಯಿದೆ. ಇದರ ಜೊತೆಗೆ ಹೆಚ್ಚು ಕೈಗೆಟುಕುವ ದರದ ನ್ಯಾಚುರಲೀ ಆಸ್ಪಿರೇಟೆಡ್ ಎಂಜಿನ್ ವೇರಿಯಂಟ್‌ ಗಳು ರೂ. 6.29 ಲಕ್ಷದಿಂದ ರೂ. 9.14 ಲಕ್ಷ (ಎಕ್ಸ್-ಶೋರೂಮ್) ಬೆಲೆಯಲ್ಲಿ ಲಭ್ಯವಿವೆ.

ಇದನ್ನೂ ಓದಿ: Kiran Upadhyay Column: ಕಲ್ಲು ಎಸೆದರೆ ಮನೆ ಕಟ್ಟಬಹುದು, ಬಾಂಬ್‌ ಎಸೆದರೆ... ?

ಈ ಸಂದರ್ಭದಲ್ಲಿ ಮಾತನಾಡಿರುವ ರೆನಾಲ್ಟ್ ಇಂಡಿಯಾದ ಎಂಡಿ ಮತ್ತು ಸಿಇಓ ವೆಂಕಟ್ರಾಮ್ ಮಾಮಿಲ್ಲಪಲ್ಲೆ ಅವರು, “ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಭಾಗದಲ್ಲಿ ನಾವು ಹೊಸ ಕೈಗರ್‌ ಅನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ಈ ವಿಭಾಗವು ದೇಶದ ಎಸ್‌ಯುವಿ ಮಾರಾಟಕ್ಕೆ ಶೇ.50ರಷ್ಟು ಮತ್ತು ದೇಶದ ಒಟ್ಟು ವಾಹನ ಮಾರಾಟಕ್ಕೆ ಶೇ.31 ರಷ್ಟು ಕೊಡುಗೆ ನೀಡುತ್ತದೆ. ಕೈಗರ್ ಈ ವಿಭಾಗದಲ್ಲಿನ ಅತ್ಯಂತ ಆಕರ್ಷಕ ಮತ್ತು ವಿಶಿಷ್ಟ ಉತ್ಪನ್ನವಾಗಿದೆ. ಈ ಹೊಸ ವೇರಿಯೊಂಟ್ ನೊಂದಿಗೆ ಆಕರ್ಷಕ ವಿನ್ಯಾಸ, ಸ್ಮಾರ್ಟ್ ಇಂಜಿನಿಯರಿಂಗ್ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುವ ವಾಹವನ್ನು ಭಾರತೀಯ ಗ್ರಾಹಕರಿಗೆ ನೀಡುವ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಇದು ಕಂಪನಿಯ ಭಾರತ ಕೇಂದ್ರಿತ ಅಭಿವೃದ್ಧಿ ಪಯಣದಲ್ಲಿ ಒಂದು ಪ್ರಮುಖ ಸಂದರ್ಭವಾಗಿದೆ” ಎಂದು ಹೇಳಿದರು.

ಮಾನವ ಕೇಂದ್ರಿತ ವಿನ್ಯಾಸ ಆಧರಿತ ಬ್ರಾಂಡ್ ಆಗಿರುವ ರೆನಾಲ್ಟ್, ಹೊಸ ಕೈಗರ್‌ ಅನ್ನು “ಎಕ್ಸ್‌ ಪ್ರೆಸ್” ಎಂಬ ಫಿಲಾಸಫಿ ಆಧಾರದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಕೈಗರ್ ರೆನಾಲ್ಟ್‌ ನ ಹೊಸ ಬ್ರಾಂಡ್ ಗುರುತಿನೊಂದಿಗೆ ಆಕರ್ಷಕವಾದ ಫ್ರಂಟ್ ಫೇಶಿಯಾ, ಚೌಕಾಕಾರದ ನಿಲುವು ಮತ್ತು ವಿಸ್ತೃತ ಚಿನ್ ಮತ್ತು ಹಿಂಭಾಗದಲ್ಲಿ ಸ್ಕಿಡ್ ಗ್ರಾಫಿಕ್ಸ್‌ ಹೊಂದಿದ್ದು, ಎಸ್‌ಯುವಿ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹೊಸ ಕೈಗರ್ ಒಂದು ವಿಶೇಷ ಹೊಸ ಬಣ್ಣವಾದ ಓಯಾಸಿಸ್ ಯೆಲ್ಲೋ ಬಣ್ಣದಲ್ಲಿ ಲಭ್ಯವಿದ್ದು, ಇದು ವಿಶೇಷ ಮೈಕಾ ಟ್ರೀಟ್‌ ಮೆಂಟ್‌ ಜೊತೆಗೆ ಆಕರ್ಷಕವಾಗಿ ಮತ್ತು ಆತ್ಮೀಯವಾಗಿ ಮೂಡಿ ಬಂದಿದೆ. ರಿಫ್ಲೆಕ್ಟಿವ್ ಬ್ಲ್ಯಾಕ್ ಗ್ರಿಲ್, ಮೆಟಾಲಿಕ್ ಗ್ರೇ ಸ್ಕಿಡ್ ಪ್ಲೇಟ್, ಸ್ಪೋರ್ಟಿ ಅಲಾಯ್ ವೀಲ್‌ ಗಳು, ಡ್ಯುಯಲ್ ಟೋನ್ ರೂಫ್ ಮತ್ತು ವಿಶಿಷ್ಟ ಗ್ರಾಫಿಕ್ ಎಲಿಮೆಂಟ್‌ ಗಳೊಂದಿಗೆ ಹೊಸ ಕೈಗರ್ ಬೋಲ್ಡ್ ಆದ ಮತ್ತು ಡೈನಾಮಿಕ್ ಆದ ಉಪಸ್ಥಿತಿಯನ್ನು ಹೊಂದಿದೆ.

ಇದರಲ್ಲಿ ವಿಶೇಷವಾಗಿ ರೂಪಿಸಲಾದ ಟರ್ಬೊ ಬ್ಯಾಡ್ಜ್ ಲಭ್ಯವಿದ್ದು, ಇದು ಸಂಸ್ಥೆಯ ‘ರೀಥಿಂಕ್ ಪರ್ಫಾರ್ಮೆನ್ಸ್’ ಫಿಲಸಾಫಿಯನ್ನು ಸಾರುತ್ತದೆ. ಈ ಫಿಲಾಸಫಿಯು ವಾಹನದ ಸುಧಾರಿತ ಡ್ರೈವಿಂಗ್ ಡೈನಾಮಿಕ್ಸ್ ಮೂಲಕ ಸ್ವಯಂ-ಅಭಿವ್ಯಕ್ತಿಯನ್ನು ಸಾರುವುದನ್ನು ಸೂಚಿಸುತ್ತದೆ.

ಕಾರು ಏಳು ಆಕರ್ಷಕ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಇವುಗಳಲ್ಲಿ ಓಯಸಿಸ್ ಯೆಲ್ಲೋ ಮತ್ತು ಶಾಡೋ ಗ್ರೇ ಎಂಬ ಎರಡು ಹೊಸ ಬಣ್ಣಗಳನ್ನು ಸೇರಿಸಲಾಗಿದೆ. ಜೊತೆಗೆ ರೇಡಿಯಂಟ್ ರೆಡ್, ಕ್ಯಾಸ್ಪಿಯನ್ ಬ್ಲೂ, ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಮತ್ತು ಸ್ಟೆಲ್ತ್ ಬ್ಲ್ಯಾಕ್ ಬಣ್ಣಗಳಲ್ಲಿ ಈ ಕಾರು ದೊರೆಯಲಿದೆ.

ಹೊಸ ಕೈಗರ್‌ ನ ಅತ್ಯುತ್ತಮ ಕಾರ್ಯಕ್ಷಮತೆ

ಮೂಲ ಕೈಗರ್‌ ನ ಅದ್ಭುತ ಪರಂಪರೆಯ ಮೇಲೆ ನಿರ್ಮಿತವಾದ ಈ ಕಾರು, ಸಬ್- 4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ವಿಶಿಷ್ಟ ಕಾರ್ಯಕ್ಷಮತೆಯ ಪ್ಯಾಕೇಜ್ ಅನ್ನು ಒದಗಿಸಲಿದೆ. ಇದು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಎಂಜಿನ್ ಕಂಪಾರ್ಟ್‌ಮೆಂಟ್‌ ಜೊತೆಗೆ ವಿಶಾಲವಾದ ಕ್ಯಾಬಿನ್ ಲೇಔಟ್, ವಿಭಾಗದಲ್ಲಿಯೇ ಅತ್ಯುತ್ತಮ ಹಿಂಭಾಗದ ಕಾಲಿಡುವ ಸ್ಥಳ, ಆಂತರಿಕ ಶೇಖರಣಾ ಸ್ಥಳ, ಫ್ರಂಟ್ ಕಪಲ್ ಡಿಸ್ಟಾನ್ಸ್ ಮತ್ತು ವಿಭಾಗದಲ್ಲಿಯೇ ಹೆಚ್ಚು ಬೂಟ್ ಸ್ಪೇಸ್ ಅನ್ನು ನೀಡುತ್ತದೆ. ಇದು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ಡ್ರೈವಿಂಗ್ ಮೋಡ್‌ ಗಳನ್ನು ಹೊಂದಿದ್ದು, ಇವುಗಳನ್ನು ವಿವಿಧ ಪ್ರದೇಶಗಳಿಗೆ ತಕ್ಕಂತೆ ಮತ್ತು ಗ್ರಾಹಕರ ಆದ್ಯತೆಗಳಿಗೆ ಹೊಂದಿ ಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಈ ಕುರಿತು ಮಾತನಾಡಿರುವ ರೆನಾಲ್ಟ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ಉಪಾಧ್ಯಕ್ಷ ಫ್ರಾನ್ಸಿಸ್ಕೋ ಹಿಡಾಲ್ಗೋ ಅವರು, “ರೆನಾಲ್ಟ್ ಕೈಗರ್ ವಾಹನವು ತನ್ನ ಆಕರ್ಷಕ ವಿನ್ಯಾಸ, ಆಧುನಿಕ ಸೊಗಸು ಮತ್ತು ಬೋಲ್ಡ್ ನಿಲುವಿನ ಮೂಲಕ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ನಿರೀಕ್ಷಎಗಳನ್ನು ಪೂರೈಸಿದೆ. ಸಿಎಂಎಫ್ಎ+ ಪ್ಲಾಟ್‌ಫಾರ್ಮ್‌ ನಲ್ಲಿ ಆಕರ್ಷಕವಾಗಿ ಮೂಡಿ ಬಂದಿದೆ. ಹೊಸ ಕೈಗರ್ ಅತ್ಯಂತ ಚುರುಕಾಗಿದೆ ಮತ್ತು ಸ್ಪಂದನಾಶೀಲವಾಗಿದೆ. ಎಸ್‌ಯುವಿ ಡಿಎನ್ಎ ಹೊಂದಿರುವ ಈ ವಾಹನವು ಆತ್ಮವಿಶ್ವಾಸದಿಂದ ನಗರ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಸಾಗಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ದೈನಂದಿನ ಚಾಲನೆಯನ್ನು ಸರಳ ಮಾಡುತ್ತದೆ ಮತ್ತು ಪರಿಪೂರ್ಣ ಕಾರ್ಯಕ್ಷಮತೆ ಒದಗಿಸುತ್ತದೆ” ಎಂದು ಹೇಳಿದರು.

ಸರ್ವತೋಮುಖ ಎಸ್ ಯು ವಿ

ಹೊಸ ಕೈಗರ್ ಭಾರತದ ವೈವಿಧ್ಯಮಯ ಚಾಲನೆಯ ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಂಡಿರುವ ವಾಹನವಾಗಿದ್ದು, ಸರ್ವತೋಮುಖ ಕಾರ್ಯಕ್ಷಮತೆಯೊಂದಿಗೆ ಅತ್ಯುತ್ತಮ ಮೌಲ್ಯವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದರ ಕೇಂದ್ರದಲ್ಲಿ ಶಕ್ತಿಶಾಲಿ ಟರ್ಬೊಚಾರ್ಜ್ಡ್ ಎಂಜಿನ್ ಇದ್ದು, ಇದು ಗರಿಷ್ಠ 100 ಪಿಎಸ್ ಶಕ್ತಿಯನ್ನು ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 20.38 ಕೆಎಂಪಿಎಲ್ (ಎ.ಆರ್.ಎ.ಐ ಪ್ರಕಾರ) ಇಂಧನ ದಕ್ಷತೆಯನ್ನು ಒದಗಿಸುತ್ತದೆ. ಹೆಚ್ಚು ಕೈಗೆಟುಕುವ ಸುಲಭದಜ ಆಯ್ಕೆಯನ್ನು ಬಯಸುವ ಗ್ರಾಹಕರಿಗಾಗಿ, ಹೊಸ ಕೈಗರ್ ಸುಧಾರಿತ ನೈಸರ್ಗಿಕ ಆಸ್ಪಿರೇಟೆಡ್ ಎಂಜಿನ್‌ ನೊಂದಿಗೆ ಲಭ್ಯವಿದ್ದು, ಇದು ಗರಿಷ್ಠ 72 ಪಿಎಸ್ ಪವರ್ ಅನ್ನು ಮತ್ತು 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 19.83 ಕೆಎಂಪಿಎಲ್ (ಎ.ಆರ್.ಎ.ಐ ಪ್ರಕಾರ) ಇಂಧನ ದಕ್ಷತೆ ಯನ್ನು ಒದಗಿಸುತ್ತದೆ.

ರೆನಾಲ್ಟ್ ಇಂಡಿಯಾ ಸಂಸ್ಥೆಯು ಕೈಗರ್‌ ನ ಚಾಲನೆಯ ಡೈನಾಮಿಕ್ಸ್‌ ಅನ್ನು ಮಿರರ್ ಬೋರ್ ಕೋಟಿಂಗ್ ತಂತ್ರಜ್ಞಾನದ ಮೂಲಕ ಸುಧಾರಿಸಿದೆ. ಈ ತಂತ್ರಜ್ಞಾನವನ್ನು ಸಾಮಾನ್ಯವಾಗಿ ರೇಸಿಂಗ್ ಕಾರುಗಳಲ್ಲಿ ಬಳಸಲಾಗುತ್ತಿದ್ದು, ಇದು ಎಂಜಿನ್ ಸಿಲಿಂಡರ್‌ ನೊಳಗಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ, ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ, ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಮತ್ತು ಎಂಜಿನ್‌ನ ಬಾಳಿಕೆಯನ್ನು ಸುಧಾರಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತ್ಯುತ್ತಮ ಟಾರ್ಕ್- ಟು -ವೇಯಿಟ್ ರೇಶಿಯೋ ಅನ್ನು ಒದಗಿಸುತ್ತದೆ ಮತ್ತು ಇದು ತ್ವರಿತ ವೇಗವರ್ಧನೆಗೆ ಸಹಾಯ ಮಾಡುತ್ತದೆ.

ಹೊಸ ಕೈಗರ್ ಪ್ರತಿಯೊಂದು ಚಾಲನಾ ಶೈಲಿಗೆ ಸರಿಹೊಂದುವಂತೆ ಬಹುಮುಖ ಟ್ರಾನ್ಸ್‌ ಮಿಷನ್ ಆಯ್ಕೆಗಳನ್ನು ಹೊಂದಿದ್ದು, ನಿಯಂತ್ರಣವನ್ನು ಇಷ್ಟಪಡುವವರಿಗೆ 5-ಸ್ಪೀಡ್ ಮ್ಯಾನುಯಲ್, ಸುಲಭ ನಗರ ಚಾಲನೆಗಾಗಿ ಈಸಿ-ಆರ್ ಎಎಂಟಿ ಮತ್ತು ಸುಗಮ ಹಾಗೂ ಶುದ್ಧ ಕಾರ್ಯಕ್ಷಮತೆಗಾಗಿ ಸುಧಾರಿತ ಎಕ್ಸ್-ಟ್ರಾನಿಕ್ ಸಿವಿಟಿ ಆಯ್ಕೆಯನ್ನು ಒದಗಿಸುತ್ತದೆ. ಸಿವಿಟಿಯ ವಿಶೇಷತೆಯೆಂದರೆ ಅದರ ಡಿ-ಸ್ಟೆಪ್ ತಂತ್ರಜ್ಞಾನ, ಇದು ಸಾಂಪ್ರದಾಯಿಕ ‘ರಬ್ಬರ್-ಬ್ಯಾಂಡ್ ಎಫೆಕ್ಟ್’ ಅನ್ನು ತೆಗೆದುಹಾಕುತ್ತದೆ ಮತ್ತು ಎಂಜಿನ್ ವೇಗದಲ್ಲಿ ಹಂತ ಹಂತದ ಬದಲಾವಣೆಗಳನ್ನು ಪರಿಚಯಿಸು ತ್ತದೆ. ಸ್ಪಂದನಾಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ವೇಗವರ್ಧನೆಯ ಸಮಯದಲ್ಲಿ ಸುಲಭವಾಗಿ ಗೇರ್ ಶಿಫ್ಟ್‌ ಹೋಂದಲು ಅನುವು ಮಾಡಿಕೊಡುತ್ತದೆ ಮತ್ತು ಚಾಲನೆಯ ಅನುಭವವನ್ನು ಉತ್ತಮಗೊಳಿಸುತ್ತದೆ.

ಪ್ರೀಮಿಯಂ ಸೌಕರ್ಯ ಮತ್ತು ಉನ್ನತ ತಂತ್ರಜ್ಞಾನ

ಹೊಸ ಕೈಗರ್ ಆರಾಮದಾಯಕ ಚಾಲನೆಯ ಅನುಭವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ವೆಂಟಿಲೇಟೆಡ್ ಮುಂಭಾಗದ ಸೀಟ್‌ ಗಳು, ಲೈಟ್ ಲೆದರೆಟ್ ಸೀಟ್ ಅಪ್ಹೋಲ್ಸ್ಟರಿ, ಹಿಂಭಾಗದ ಏಸಿ ವೆಂಟ್‌ ಗಳು, ಸುಧಾರಿತ ಗಾಳಿಯ ಹರಿವು, ಮತ್ತು ಸವಾರಿ ಸಮಯದಲ್ಲಿ ಮೌನ ವಾತಾವರಣ ಹೊಂದಲು ಸುಧಾರಿತ ಶಬ್ದ ನಿರೋಧಕ ವ್ಯವಸ್ಥೆ ಇತ್ಯಾದಿ ಲಭ್ಯವಿದೆ.

ಕಾಂಪ್ಯಾಕ್ಟ್ ಎಸ್‌ಯುವಿ ಈಗ ಮಲ್ಟಿ-ವ್ಯೂ ಕ್ಯಾಮೆರಾ ಸಿಸ್ಟಮ್ ಅನ್ನು ಹೊಂದಿದ್ದು, ಚಾಲಕರಿಗೆ ಬಹು ಕೋನಗಳಿಂದ ಸ್ಪಷ್ಟವಾಗಿ, ಸೂಕ್ತವಾಗಿ ನೋಡುವ ಅವಕಾಶ ಒದಗಿಸುತ್ತಿದ್ದು, ಸುಲಭವಾದ ಚಾಲನೆಯನ್ನು ಸಾಧ್ಯವಾಗಿಸುತ್ತದೆ. ಭಾರತದ ನಗರಗಳ ಕಿರಿದಾದ ರಸ್ತೆಗಳು ಮತ್ತು ಸವಾಲಿನ ಪಾರ್ಕಿಂಗ್ ಪರಿಸ್ಥಿತಿಗಳಿಗೆ ಇದು ಪರಿಪೂರ್ಣವಾಗಿ ಹೊಂದಿಕೊಳ್ಳುದೆ. ಇದು ಚಾಲಕರಿಗೆ ಸುಲಭವಾಗಿ ವೀಕ್ಷಣೆಗಳನ್ನು ಮಾಡಲು ಮತ್ತು ಸುರಕ್ಷಿತವಾಗಿ ಚಾಲನೆ ಮಾಡಲು ಅನುವು ಮಾಡಿಕೊಡುತ್ತದೆ. ಸ್ವಯಂಚಾಲಿತ ಹೆಡ್‌ ಲ್ಯಾಂಪ್‌ ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ ಗಳಂತಹ ಫೀಚರ್ ಗಳು ಒತ್ತಡ- ಮುಕ್ತ ಚಾಲನೆಯನ್ನು ಸಾಧ್ಯವಾಗಿಸುತ್ತವೆ.

20.32 ಸೆಂ.ಮೀ. ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದ್ದು, ಇದು ವೈರ್‌ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇಯೊಂದಿಗೆ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಂಯೋಜನೆಗೊಳ್ಳುತ್ತದೆ. 6 ಸ್ಪೀಕರ್‌ ಗಳೊಂದಿಗೆ 3ಡಿ ಆರ್ಕಾಮಿಸ್® ಸರೌಂಡ್ ಸೌಂಡ್ ಹೊಂದಿ ದ್ದು, ಇದು ಆಕರ್ಷಕ ಆಡಿಯೋ ಅನುಭವವನ್ನು ನೀಡುತ್ತದೆ. ಕೂಲ್ಡ್ ಗ್ಲೋವ್ ಬಾಕ್ಸ್, ಹಲವು ಯು ಎಸ್ ಬಿ ಚಾರ್ಜಿಂಗ್ ಪಾಯಿಂಟ್‌ ಗಳು ಮತ್ತು ‘ಬಿಲಾಂಗಿಂಗ್ಸ್ ಟೇಕ್ ಅವೇ’ ಅಲಾರ್ಮ್ ನಂತಹ ಪ್ರಾಯೋಗಿಕ ಫೀಚರ್ ಗಳು ದೈನಂದಿನ ಬಳಕೆಯನ್ನು ಸ್ಮಾರ್ಟ್ ಮತ್ತು ಸುಲಭ ವಾಗಿಸುತ್ತವೆ.

ಸುರಕ್ಷತೆ ಮೊದಲು - ಸುಧಾರಿತ ರಕ್ಷಣೆ

ರೆನಾಲ್ಟ್‌ ನ ಡಿಎನ್ಎಯ ಕೇಂದ್ರದಲ್ಲಿ ಸುರಕ್ಷತೆ ಇದ್ದು, ಇದನ್ನು ಅದರ ಹ್ಯೂಮನ್ ಫಸ್ಟ್ ಪ್ರೋಗ್ರಾಂನ ಮೂಲಕ ಸಾಧಿಸಲಾಗಿದೆ. ಹೊಸ ಕೈಗರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸವಾರರ ರಕ್ಷಣೆಯನ್ನು ಪ್ರಮುಖ ಆದ್ಯತೆಯಾಗಿ ಇರಿಸಿಕೊಂಡಿದೆ. ಎಲ್ಲಾ ವೇರಿಯಂಟ್‌ ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಒಟ್ಟು 21 ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳನ್ನು ಒದಗಿಸುತ್ತದೆ, ಇದರಲ್ಲಿ ಮುಂಭಾಗ, ಸೈಡ್ ಮತ್ತು ಕರ್ಟನ್ ಏರ್‌ ಬ್ಯಾಗ್‌ಗಳು ಸೇರಿವೆ. ಇದರ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇ ಎಸ್ ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ ಎಸ್ ಎ), ಪ್ರತಿ ಸೀಟ್‌ಗೆ 3- ಪಾಯಿಂಟ್ ಸೀಟ್ ಬೆಲ್ಟ್‌ ಗಳು, ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಆಂಕರೇಜ್ ಸೇರಿವೆ.

ಸಿಎಂಎಫ್ಎ+ ಪ್ಲಾಟ್‌ಫಾರ್ಮ್‌ ನ ದೃಢವಾದ ದೇಹ ರಚನೆಯು ಆಘಾತ ರಕ್ಷಣೆಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಟೈರ್ ಪ್ರೆಶರ್ ಮಾನಿಟರಿಂಗ್ ಮತ್ತು ಪಾದಚಾರಿ ರಕ್ಷಣೆಯಂತಹ ಫೀಚರ್ ಗಳು ಹೆಚ್ಚಿನ ಸುರಕ್ಷತೆಯ ಪದರಗಳನ್ನು ಸೇರಿಸುತ್ತವೆ ಮತ್ತು ಚಾಲಕ ಮತ್ತು ಸವಾರರಿಗೆ ಮನಸ್ಸಿನ ಶಾಂತಿಯನ್ನು ಖಾತರಿಪಡಿಸುತ್ತವೆ.

ಗ್ರಾಹಕರು ಆರಾಮದಾಯಕ ಹೆದ್ದಾರಿ ಚಾಲನೆಯನ್ನು ಬಯಸುತ್ತಿರಲಿ ಅಥವಾ ಪ್ರಾಯೋಗಿಕವಾಗಿ ನಗರ ಬಳಕೆಯನ್ನು ಬಯಸುತ್ತಿರಲಿ, ಕೈಗರ್ ನ ಈ ಸಮಗ್ರ ಪವರ್‌ ಟ್ರೇನ್ ಲೈನ್‌ ಅಪ್ ಅವರ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಮುಂದಿನ ತಲೆಮಾ ರಿನ ಕೈಗರ್ ವಾಹನವು ಮ್ಯಾನುಯಲ್ ಟ್ರಾನ್ಸ್‌ ಮಿಷನ್‌ ನೊಂದಿಗೆ ರಿಟ್ರೊಫಿಟ್ ಸಿ ಎನ್ ಜಿಯೊಂದಿಗೆ ಲಭ್ಯವಿದೆ ಮತ್ತು ಎರಡೂ ಎಂಜಿನ್‌ ಗಳು ಇ20 ಸಾಮರ್ಥ್ಯವನ್ನು ಹೊಂದಿದ್ದು, ಇದು ರೆನಾಲ್ಟ್‌ ನ ಸುಸ್ಥಿರ ಸಾರಿಗೆ ವ್ಯವಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದ.

ಪ್ರೀಮಿಯಂ ಗುಣಮಟ್ಟದ ಒಳಾಂಗಣ ಸುಧಾರಣೆಗಳು: ಹೊಸ ಡ್ಯುಯಲ್- ಟೋನ್ ಡ್ಯಾಶ್‌ ಬೋರ್ಡ್, ಪ್ರೀಮಿಯಂ ವೆಂಟಿಲೇಟೆಡ್ ಲೆದರೆಟ್ ಸೀಟ್‌ ಗಳು, ಹೊಸ ಸೀಟ್ ಅಪ್ ಹೋಲ್ ಸ್ಟರಿ ಮತ್ತು ಸುಧಾರಿತ ಶಬ್ದ ನಿರೋಧಕ ವ್ಯವಸ್ಥೆ ಹೊಂದಿದ್ದು ಪ್ರೀಮಿಯಂ ಗುಣಮಟ್ಟದ ಕ್ಯಾಬಿನ್ ಅನುಭವ ನೀಡಲಿದೆ.

ಹೆಚ್ಚುವರಿ ತಂತ್ರಜ್ಞಾನ ವ್ಯವಸ್ಥೆ: ಮಲ್ಟಿ-ವ್ಯೂ ಕ್ಯಾಮೆರಾ, ಸ್ವಯಂಚಾಲಿತ ಹೆಡ್‌ ಲ್ಯಾಂಪ್‌ ಗಳು, ರೈನ್ ಸೆನ್ಸಿಂಗ್ ವೈಪರ್‌ ಗಳು, ವೈರ್‌ ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, 20.32 ಸೆಂ.ಮೀ. ಫ್ಲೋಟಿಂಗ್ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಮತ್ತು ಪ್ರೀಮಿಯಂ 3ಡಿ ಆರ್ಕಾಮಿಸ್® ಸರೌಂಡ್ ಸೌಂಡ್ ಸಿಸ್ಟಮ್ ಇದರಲ್ಲಿ ಲಭ್ಯವಿದೆ.

ಟರ್ಬೊ ಚಾರ್ಜ್ಡ್ ಕಾರ್ಯಕ್ಷಮತೆ: ಶಕ್ತಿಶಾಲಿ 100 ಪಿಎಸ್ ಟರ್ಬೊ ಎಂಜಿನ್, ವಿಭಾಗದಲ್ಲಿಯೇ ಅತ್ಯುತ್ತಮವಾದ ಟಾರ್ಕ್ ಟು ವೇಯಿಟ್ ರೇಶಿಯೋ ಮತ್ತು ವಿಭಾಗ ಶ್ರೇಷ್ಠ ಇಂಧನ ದಕ್ಷತೆ ಸೌಲಭ್ಯ ಹೊಂದಿದೆ.

ವಿಭಾಗದಲ್ಲಿ ಅತ್ಯುತ್ತಮ ಸುರಕ್ಷತೆ: ಎಲ್ಲಾ ವೇರಿಯಂಟ್‌ ಗಳಲ್ಲಿ 21 ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದ್ದು, ಇದರಲ್ಲಿ 6 ಏರ್‌ ಬ್ಯಾಗ್‌ ಗಳು, ಇ.ಎಸ್.ಪಿ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಆಂಕರೇಜ್ ಫೀಚರ್ ಗಳು ಸೇರಿವೆ.