ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಖರ್ಚು ಲೆಕ್ಕ ಇಡುವ ಆಪ್ !

ಖರ್ಚು ಲೆಕ್ಕ ಇಡುವ ಆಪ್ !

image-1bf7247e-d515-4be7-91d9-303c9335e293.jpg
image-3811b223-f5ce-4fe7-aba3-fe066cdc158e.jpg
ಟೆಕ್ ನೋಟ ವಿಕ್ರಮ ಜೋಶಿ ಆಯಾ ತಿಂಗಳ ಖರ್ಚು ವೆಚ್ಚಗಳನ್ನು ದಾಖಲಿಸಿದಾಗ,  ಐಷಾರಾಮಿ ವಸ್ತುಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ ಎಂಬು ದನ್ನು ತೋರಿಸುತ್ತಾ, ಎಚ್ಚರಿಸುವ ಇಂತಹ ಆಪ್‌ಗಳನ್ನು ಬಳಸಿದವರು ತಮ್ಮ ಅನವಶ್ಯಕ ವೆಚ್ಚವನ್ನು ಕಡಿಮೆ ಮಾಡುತ್ತಾರಂತೆ! ದಿನಚರಿಯನ್ನು ಬರೆಯುವುದು ಉತ್ತಮ ಹವ್ಯಾಸ. ಮನುಷ್ಯನ ಚರಿತ್ರೆಯಲ್ಲಿ ತಾರೀಖಿನ ಮೇಲೆ ಅಚ್ಚುಕಟ್ಟಾಗಿ ಕೂಡಿಸಿದ ದಿನಚರಿ ಸಿಗುವುದು ಹನ್ನೊಂದನೇ ಶತಮಾನದಲ್ಲಿ - ಅಬು ಅಲಿ ಇಬ್ನ್ ಅಲ್-ಬನ್ನ ಎನ್ನುವಾತ ನದ್ದು. ಡೈರಿ ಎನ್ನುವ ಆಂಗ್ಲ ಪದಕ್ಕೆ ಮೂಲ ಲಾಟಿನ್ ಭಾಷೆಯ ಡೈಯಾ ರಿಯಮ್ ಎನ್ನುವ ಶಬ್ದ. ಅದರ ಅರ್ಥ ‘ದಿನದ ಭತ್ಯೆ’. ಬಹುಶಃ ಮನುಜನಿಗೆ ಬರೆಯುವುದು ಗೊತ್ತಾದ ಮೇಲೆ ಆತ ಈ ರೂಢಿಯನ್ನು ಇಟ್ಟುಕೊಂಡಿದ್ದ ಅನಿಸುತ್ತದೆ. ಆನ್ ಫ್ರಾಂಕ್ ಎನ್ನುವವಳ ದಿನಚರಿಯಂತೂ ಜಗತ್ಪ್ರಸಿದ್ಧ. ಅಂತರ್ಜಾಲ ಶುರುವಾದಾಗ ಜನರು ಆನಲೈನ್ ಡೈರಿ ಎನ್ನುವ ಒಂದು ಹೊಸ ಶೈಲಿ ಶುರುಮಾಡಿದರು. ಜಸ್ಟಿನ್ ಹಾಲ್ ಎನ್ನುವಾತ ೧೯೯೪ರಿಂದ ಶುರುಮಾಡಿ ಹನ್ನೊಂದು ವರ್ಷಗಳ ಕಾಲ ಆನ್‌ಲೈನ್ ಡೈರಿ ಬರೆದಿದ್ದನಂತೆ. ಡೈರಿ ಬರೆಯುವವರನ್ನು ನಾನು ತುಂಬಾ ಗೌರವಿಸುತ್ತೇನೆ. ಇದೊಂದು ಮಾನಸಿಕ ಪ್ರಕ್ರಿಯೆ. ಅದಕ್ಕೆ ಅಚಲ ಶ್ರದ್ಧೆ  ಗೂ ಶಿಸ್ತು ಬೇಕು. ನಮ್ಮ ತಂದೆಯವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದಿನಚರಿ ಬರೆಯುವ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದರು. ಒಂದು ದಿನವೂ ಬಿಡದೆ ಹಣದ ಲೆಕ್ಕಾಚಾರದಿಂದ ಹಿಡಿದು ಬದುಕಿನ ಅನುಭವಗಳನ್ನು ಬರೆಯುತ್ತಿದ್ದರು. ಅವರ ಕೊನೆಯ ದಿನಗಳಲ್ಲಿ ಬರೆಯಲು ಆಗುತ್ತಿರಲಿಲ್ಲ. ಅದರೂ ಕೂಡ, ಕೈ ಕೊಟ್ಟ ಕೈಗಳಲ್ಲೂ, ತಿಳಿಯುವಂತೆ ಸಣ್ಣ ಪುಟ್ಟ ಲೆಕ್ಕಾಚಾರ ಬರೆದಿ ಟ್ಟಿದ್ದರು. ಅವರಿಂದ ಚಿಕ್ಕಂದಿನ ಸೂರ್ತಿ ಪಡೆದು ನಾನೂ ದಿನಚರಿ ಬರೆಯಬೇಕು ಎಂದು ನಿರ್ಧರಿಸಿ ಪ್ರತಿ ವರ್ಷವೂ ಡೈರಿ ಖರೀದಿ ಮಾಡುತ್ತೇನೆ. ಆದರೆ ಪ್ರತಿವರ್ಷ ಹೆಚ್ಚೆಂದರೆ ಶಿಸ್ತಿನಿಂದ ಹದಿನೈದು ದಿವಸ ಬರೆದಿರಬೇಕು ಅಷ್ಟೇ. ಈ ದಿನಚರಿ ದಾಖಲಿಸುವುದನ್ನು ಎರಡು ಬಗೆಯಾಗಿ ವಿಂಗಡಿಸಬಹುದು. ಒಂದು ನಮ್ಮ ಅನುಭವಗಳನ್ನು ಬರೆದಿಡುವುದು, ಇನ್ನೊಂದು ಖರ್ಚು ವೆಚ್ಚದ ಲೆಕ್ಕಾಚಾರ. ಯಾವುದೇ ಪ್ರಕಾರವಿರಲಿ, ಮೊಬೈಲ್ ಬಂದಾಗಿನಿಂದ ನಿಯಮಿತವಾಗಿ ದಿನಚರಿ ಬರೆಯುವವರೂ ಬಿಟ್ಟಿದ್ದಾರೆ! ಎಲ್ಲಾ ಮೊಬೈಲ್‌ನ ಇರುವಾಗ ಡೈರಿ ಅಂತ ಏನು ಬರೆಯುವುದು? ಏಳುವಾಗ ಮೊಬೈಲ್, ಮಲಗುವಾಗ ಮೊಬೈಲ್, ನಡುವೆಯೂ ಮೊಬೈಲ್. ಹೀಗಿರುವಾಗ ಒಂದು ಪ್ರಶ್ನೆ - ಬದುಕಿನಲ್ಲಿ ದಿನಚರಿ ಬೇಕೆ? ಅವಶ್ಯವಾಗಿ ಬೇಕು. ಅನು ಭವಗಳನ್ನು ಯಾಕೆ ಬರೆದಿಡಬೇಕು ಎನ್ನುವುದರ ಕುರಿತು ಇನ್ನೊಮ್ಮೆ ಚರ್ಚಿಸೋಣ. ಆದರೆ ಇಂದಿನ ವಿಷಯ ದಿನನಿತ್ಯದ ಖರ್ಚು ವೆಚ್ಚದ ಬಗ್ಗೆ. ದಿನದ ವೆಚ್ಚ: ಆನಲೈನ್ ಪೇಮೆಂಟ, ಕಾರ್ಡುಗಳು ಬರುವ ಮೊದಲು ಖರ್ಚುಗಳೆಲ್ಲ ಬಹುಪಾಲು ನಗದಿನ ಮೂಲಕವೇ ಆಗುತ್ತಿತ್ತು. ಲೆಕ್ಕ ಇಡದೇ ಹೋದರೂ ಕಿಸೆ ಹಗುರವಾದಾಗ ಅನುಭವಕ್ಕೆ ಬರುತ್ತಿತ್ತು. ಆಗಲೂ ಕೈಯಲ್ಲಿ ಒಂದು ಪುಟ್ಟ ದಿನಚರಿ ಪಟ್ಟಿ ಇಟ್ಟು ಕೊಂಡವರೇ ಹಣಕಾಸಿನ ವಿಷಯದಲ್ಲಿ ನೆಮ್ಮದಿಯಿಂದ ಇರುತ್ತಿದ್ದಿದ್ದು. ದಿನಚರಿ  ಬರೆದಿಡುವುದರಿಂದ ಆದಾಯ, ಖರ್ಚು ಎರಡರ ಬಗ್ಗೆಯೂ ಗಮನ ಇರುತ್ತಿತ್ತು. ವ್ಯಾಪಾರಸ್ಥರಿಗಂತೂ, ಅಂಗಡಿ ಅಥವಾ ಕಾರ್ಖಾನೆಯ ಬಾಗಿಲು ಹಾಕುವ ಮೊದಲು, ದಿನದ ಲೆಕ್ಕಾಚಾರ ಕಡ್ಡಾಯ. ಇವತ್ತು ನಗದು ಒಂದೇ ಅಲ್ಲ ಹಲವಾರು ಮೂಲದಲ್ಲಿ ಹಣ ಬರುತ್ತದೆ, ಖರ್ಚಾಗುತ್ತದೆ. ಎಲ್ಲಿಂದ ಬಂತು ಎಲ್ಲಿಂದ ಹೋಯಿತು ಎನ್ನು ವುದೇ ಗೊತ್ತಾಗುವುದಿಲ್ಲ. ತಿಂಗಳು ಕಳೆಯಿತು ಅನ್ನುವಾಗ ಖಾತೆಯಲ್ಲಿ ಮಾತ್ರ ಹಣ ಖಾಲಿ! ನಾನು ಇಂತಹ ದಿನಗಳನ್ನು ಸ್ವತಃ ಅನುಭವಿಸಿದ್ದೇನೆ. ಕಂಪ್ಯೂಟರ್ ಹಾಗೂ ಲ್ಯಾಪ್ಟಾಪ್‌ನಲ್ಲಿ ಎಕ್ಸೆಲ್, ನೋಟ್ಸ್, ಹೀಗೆ ಹಲವು  ಯತ್ನ ಮಾಡಿ ಸೋತಾಗಿದೆ. ಹಾಗಂತ ಪ್ರಯತ್ನ ಇನ್ನೂ ನಿಂತಿಲ್ಲ. ಮೊನ್ನೆ ಮಧ್ಯಾಹ್ನ ಊಟಕ್ಕೆ ಹೋದಾಗ ನನ್ನ ಸಹೋದ್ಯೋಗಿಯೊಬ್ಬ ‘ಮನಿ ಮ್ಯಾನೇಜರ್’ ಎನ್ನುವ ಒಂದು ಆಪ್ ತೋರಿಸಿದರು. ಅದರಲ್ಲಿ ಸಂಬಳ ಬಂದಿದ್ದು, ಎಲ್ಲಿ ಯಾವಾಗ ಎಷ್ಟು ಯಾಕೆ ಖರ್ಚು ಮಾಡಿದ್ದು ಎಲ್ಲವನ್ನೂ ತಾರೀಖಿನ ಪ್ರಕಾರ ಬರೆದಿಡಬಹುದು. ತಿಂಗಳ ಕೊನೆಯಲ್ಲಿ  ಅಪ್ ಟು ಡೇಟ್ ಸಂಪೂರ್ಣ ಮಾಹಿತಿ ನಮಗೆ ಸಿಗುತ್ತದೆ. ವಿವಿಧ ವಿಭಾಗಗಳ ವೆಚ್ಚ: ಆದಾಯದ  ವಿಷಯಕ್ಕೆ ಬಂದಾಗ ಸಂಬಳ, ಬೋನಸ್, ಭತ್ಯೆ, ನಗದು ಈ ತರಹದಲ್ಲಿ ವಿಂಗಡಿಸಿ ಕೊಂಡು ಪಟ್ಟಿ ಮಾಡಬಹುದು. ಯಾವ ಬ್ಯಾಂಕ್ ಖಾತೆಯಲ್ಲಿ, ಯಾವತ್ತು, ಎಷ್ಟು ಜಮಾ ಆಗಿದೆ ಎಂದು ಸಂಕ್ಷಿಪ್ತವಾಗಿ ದಾಖಲಿಸಬಹುದು. ಹಾಗೆಯೇ ಖರ್ಚು. ಮನೆಯ ಬಳಕೆಗೆ, ಸಾರಿಗೆಗೆ, ಶಿಕ್ಷಣಕ್ಕೆ, ಹೊಟೇಲಿಗೆ, ಇಂಟರ್ನೆಟ, ಫೋನ್, ಪೆಟ್ರೋಲ್ ಹೀಗೆ ಹಲವಾರು ವಿಭಾಗಗಳನ್ನು ಮಾಡಿಕೊಂಡು ಅಲ್ಲಿ ಖರ್ಚಿನ ವಿವರ ದಾಖಲಿಸುತ್ತಾ ಹೋಗಬಹುದು. ಅದರಲ್ಲೂ ಇದು ಅಗತ್ಯತೆ, ಐಷಾರಾಮಿ, ಹೂಡಿಕೆ ಹೀಗೆ ಸೂಚಿಸಬಹುದು. ಬಳಸಲು ಬಹಳವೇ ಸುಲಭ. ಮನೆಯಲ್ಲಿ ಎಲ್ಲರೂ ಬಳಸಬಹು. ಆ ದಿನ ಹೊಟೇಲ್ ನಲ್ಲಿಯೇ ಪ್ರಯೋಗ ಮಾಡಿದೆ. ಎರಡು ನಿಮಿಷವೂ ಬೇಡ. ಶಿಸ್ತು, ತುಸು ಸಂಯಮ ಜೊತೆ ಇದ್ದರೆ ಸಾಕು. ದಿನ ಕಳೆದ ಮೇಲೆ ಏನೆ ಖರ್ಚು ಮಾಡಿದೆ ಎಂದು ನೆನಪಿಸಿಕೊಳ್ಳುತ್ತಾ ಕೂತು ಬರೆಯುವುದಕ್ಕಿಂತ ಆಗಿಂದಾಗ್ಗೆ ಬರೆದಿಡುವ ಈ ವಿಧಾನ ಲೇಸು ಅನಿಸಿತು. ಎಲ್ಲದಕ್ಕಿಂತ ಹೆಚ್ಚಾಗಿ ದತ್ತಾಂಶದ ವಿಶ್ಲೇಷಣೆ ಪ್ರಭಾವೋತ್ಪಾದಕ ಎನಿಸಿತು. ಯಾವ ವಿಭಾಗದಲ್ಲಿ ಎಷ್ಟು ಶೇಕಡಾ ಖರ್ಚು ಮಾಡಿದ್ದೇವೆ ಎಂಬುದನ್ನು ಬಹಳ ಚೆಂದವಾಗಿ ತೋರಿಸುತ್ತದೆ. ಉದಾಹರಣೆಗೆ ಐಶಾರಾಮಿ ವಸ್ತುಗಳ ಮೇಲೆ ೪೦% ಖರ್ಚಾಗಿದೆ ಎಂದು ತೋರಿಸಿದಾಗ ಮನಸ್ಸು ಸಹಜವಾಗಿ ‘ಯಾಕೆ ಇಷ್ಟೊಂದು ಐಷಾರಾಮಿ ಜೀವನ’ ಎಂಬ ಪ್ರಶ್ನೆ ಕೇಳುತ್ತದೆ. ಇದೇ ಇದರ ಗಮ್ಮತ್ತು! ನಾನು ಡೌನ್ಲೋಡ್ ಮಾಡಿಕೊಂಡಿದ್ದು ಮನಿ ಮ್ಯಾನೇಜರ್. ಆದರೆ ಗೂಗಲ್ ಪ್ಲೇ ರ್ಸ್ಟೋ ಗೆ ಹೋದರೆ ಇಂತಹ ಸಾಕಷ್ಟು ಆಪ್ ಸಿಗುತ್ತವೆ. ಈ ಆಪ್ ಸಹಕಾರಿ!: ಇವತ್ತಿನ ಈ ದುಬಾರಿ ಜಗತ್ತಿನಲ್ಲಿ ಇಂತಹ ಆಪ್‌ಗಳ ಸಹಾಯ ಇಲ್ಲದೇ ಬದುಕು ಸಾಗಿಸುವುದು ಕಷ್ಟ. ಮೊಬೈಲ್ ಅಂದರೆ ಅಲ್ಲಿ ಕೇವಲ ಸೋಷಿಯಲ್ ಮೀಡಿಯಾ ಆಪ್‌ಗಳೇ ತುಂಬಿರಬೇಕು ಅಂತೇನಿಲ್ಲ. ಇಲ್ಲವೇ ಮೊಬೈಲ್ ಎಂದ ಮಾತ್ರಕ್ಕೆ ಇಮೇಲ್, ಮೆಸೇಜ್ ಚೆಕ್ ಮಾಡುವುದು ಎಂದುಕೊಳ್ಳುವುದೇಕೆ? ಗೇಮ್ ಆಡುತ್ತಾ ಮೊಬೈಲ್ ಬಿಸಿ ಮಾಡುವುದು ತಂತ್ರeನದ ಉದ್ದೇಶವಲ್ಲ. ಅಜಾನ್, ಫ್ಲಿಪ್ ಕಾರ್ಟ್ ಎನ್ನುತ್ತಾ ಬೇಡದ ವಸ್ತುಗಳನ್ನು ಖರೀದಿಸಿ ಸಾವಿರ ಖರ್ಚಾಗುತ್ತದೆ, ತಿಂಗಳು ಮುಗಿಯುವ ಹೊತ್ತಿಗೆ ಸಾಲ ಕೇಳುವ  ಪರಿಸ್ಥಿತಿ. ಇವುಗಳ ನಡು ಇಂತಹ ಆಪ್‌ಗಳು ಮರುಭೂಮಿಯ ನಡುವೆ ಓಯಾಸಿಸ್ ಸಿಕ್ಕಂತೆ. ಹಾಗಂತ ಇದನ್ನು ಬಳಸಿದ ಕೂಡಲೆ ಬರುವ ಸಂಬಳವನ್ನೆಲ್ಲ ಉಳಿಸಬಹುದು ಎನ್ನುವ ನಿರೀಕ್ಷೆ ಬೇಡ. ನಮ್ಮ ಖರ್ಚು ವೆಚ್ಚಗಳನ್ನು ಅಚ್ಚು ಕಟ್ಟಾಗಿ ಪಟ್ಟಿ ಮಾಡುವುದು ಮೊದಲ ಹೆಜ್ಜೆ. ನಂತರ ನಮ್ಮ ಲೈಫ್ ಸ್ಟೈಲ್ ನಮಗೆ ಅರ್ಥವಾಗುತ್ತದೆ. ಎಲ್ಲಿ ಅಗತ್ಯವಿದೆ, ಎಲ್ಲಿ ಅನಾವಶ್ಯಕ ಪೋಲಾಗುತ್ತಿದೆ ಎನ್ನುವುದು ತ್ತಾಗುತ್ತದೆ. ಇನ್ನೊಬ್ಬರು ಹೇಳುವುದು ಬೇಡ, ಈ ಆಪ್ ಗಳೇ ಹೇಳುವುದು. ನಂತರ ಉಳಿತಾಯ ಮಾಡುವುದಕ್ಕೆ ದಾರಿ ಸಿಗುತ್ತದೆ. ನನ್ನ ಸಹೋದ್ಯೋಗಿ, ಈ ಆಪ್ ಬಳಸಲು ಶುರು ಮಾಡಿದಾಗಿ ನಿಂದ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ಉಳಿಸುತ್ತಿದ್ದೇನೆ ಅಂದಾಗ ನನಗೆ ಆಶ್ಚರ್ಯ!