ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Children's Ear: ಮಳೆಗಾಲದಲ್ಲಿ ಮಕ್ಕಳ ಕಿವಿಸೋಂಕು ತಡೆ ಹೇಗೆ?

Rainy Season Ear Infection: ಕಿವಿಯ ಸೋಂಕುಗಳಿಗೆ ಸಾಮಾನ್ಯವಾಗಿ ಕಾರಣವಾಗುವುದು ಒಂದೋ ಬ್ಯಾಕ್ಟೀರಿಯಗಳು ಇಲ್ಲವೇ ಶಿಲೀಂಧ್ರಗಳು..ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಕಿವಿಗಳು ಮತ್ತು ಅಪಕ್ವ ಪ್ರತಿರೋಧಕತೆ ಯಿಂದಾಗಿ ಚಿಕ್ಕ ಮಕ್ಕಳಲ್ಲಿ ಕಿವಿಯ ಸೋಂಕು ಬೇಗನೇ ಮತ್ತು ಆಗಾಗ ಕಾಣಿಸಿಕೊಳ್ಳಬಹುದು. ಅದರಲ್ಲೂ ಎಳೆಗೂಸುಗಳಲ್ಲಿ ಇನ್ನೂ ಅಧಿಕ. ಇಂಥ ಸಮಸ್ಯೆಗಳು ಹೆಚ್ಚಾಗುವುದಕ್ಕೆ ಕಾರಣಗಳೇನು?

children's ear

ನವದೆಹಲಿ: ಮಳೆಗಾಲದ ದಿನಗಳಲ್ಲಿ ವಾತಾವರಣದಲ್ಲಿ ಹೆಚ್ಚುವ ತೇವವು ಹಲವು ರೀತಿಯ ಸೋಂಕುಗಳಿಗೆ ದಾರಿ ಮಾಡುತ್ತದೆ. ಅವುಗಳಲ್ಲಿ ಮಕ್ಕಳ ಕಿವಿ ಸೋಂಕು (Ear Infection) ಸಹ ಒಂದು. ಹಲವು ಬಗೆಯ ವೈರಲ್‌ ಸೋಂಕುಗಳ ಬಗ್ಗೆ ಮಾತನಾಡುವಾಗ, ಕಿವಿಗೆ ಅಪ್ಪಳಿಸುವ ಈ ಸೋಂಕುಗಳನ್ನು, ಅದರಲ್ಲೂ ಮಕ್ಕಳನ್ನು ಹೈರಾಣಾಗಿಸುವ, ಹೆತ್ತವರನ್ನು ಹೆದರಿಸುವ ಕಿವಿ ನೋವಿನ ಸಮಸ್ಯೆಯನ್ನು ನಾವು ಅಲಕ್ಷಿಸುವಂತಿಲ್ಲ. ನೆಗಡಿ, ಸಣ್ಣ ಜ್ವರ ಪ್ರಾರಂಭವಾಗುತ್ತಿದ್ದಂತೆ ಕಿವಿ ಎಳೆದುಕೊಂಡು ಅಳುವ ಪುಟ್ಟ ಮಕ್ಕಳನ್ನು ಕಂಡಿರುತ್ತೇವೆ. ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದರೆ ಕಿವಿಯಲ್ಲಿ ನೋವಿದೆ ಎಂಬುದನ್ನು ಹೇಳಬಹುದು. ಇಂಥ ಯಾವುದೇ ಸ್ಥಿತಿಯಲ್ಲೂ ವೈದ್ಯರಲ್ಲಿ ಹೋಗುವುದು ಅನಿವಾರ್ಯ. ಸೂಕ್ತ ಚಿಕಿತ್ಸೆಯಿಲ್ಲದೆ ಕಿವಿನೋವು ಕಡಿಮೆ ಯಾಗು ವುದಿಲ್ಲ; ಸೋಂಕು ನಿವಾರಣೆಯಾಗುವುದಿಲ್ಲ. ಇಂಥ ತೊಂದರೆಗಳು ಬರುವುದೇಕೆ? ಬಂದಾಗ ಏನು ಮಾಡಬೇಕು? ಮಳೆಗಾಲದ ದಿನಗಳಲ್ಲಿ ಮಕ್ಕಳಿಗೆ ಕಿವಿಯ ಸೋಂಕು ಕಾಡದಂತೆ ಕಾಪಾಡಿ ಕೊಳ್ಳುವುದು ಹೇಗೆ?

ಏನು ಕಾರಣ?: ಕಿವಿಯ ಸೋಂಕುಗಳಿಗೆ ಸಾಮಾನ್ಯವಾಗಿ ಕಾರಣವಾಗುವುದು ಒಂದೋ ಬ್ಯಾಕ್ಟೀರಿ ಯಗಳು ಇಲ್ಲವೇ ಶಿಲೀಂಧ್ರಗಳು. ಇಂಥ ಸೂಕ್ಷ್ಮಾಣುಗಳು ಕಿವಿಯನ್ನು ತೇವಾಂಶದ ಮೂಲಕ ಪ್ರವೇಶಿಸಿದಾಗ, ಹೊರಗೆ ಬಾರದೆ ಅಲ್ಲಿಯೇ ಉಳಿದರೆ ಸೋಂಕು ಪ್ರಾರಂಭವಾಗುತ್ತದೆ. ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಕಿವಿಗಳು ಮತ್ತು ಅಪಕ್ವ ಪ್ರತಿರೋಧಕತೆ ಯಿಂದಾಗಿ ಚಿಕ್ಕ ಮಕ್ಕಳಲ್ಲಿ ಕಿವಿಯ ಸೋಂಕು ಬೇಗನೇ ಮತ್ತು ಆಗಾಗ ಕಾಣಿಸಿಕೊಳ್ಳಬಹುದು. ಅದರಲ್ಲೂ ಎಳೆಗೂಸುಗಳಲ್ಲಿ ಇನ್ನೂ ಅಧಿಕ. ಇಂಥ ಸಮಸ್ಯೆಗಳು ಹೆಚ್ಚಾಗುವುದಕ್ಕೆ ಕಾರಣಗಳೇನು?

  • ಕಿವಿಯನ್ನು ಅತಿಯಾಗಿ ಸ್ವಚ್ಛ ಮಾಡುವುದು
  • ಆಡುವಾಗ ಸಿಕ್ಕಿದ್ದನ್ನೆಲ್ಲ ಕಿವಿಯೊಳಗೆ ಹಾಕಿಕೊಳ್ಳುವುದು
  • ಅಶುದ್ಧ ನೀರಿನಲ್ಲಿ ಈಜುವುದು, ಮಳೆನೀರು, ಸ್ವಚ್ಛವಿಲ್ಲದ ನೀರು ಕಿವಿಯೊಳಗೆ ಹೋಗುವುದು.
  • ಸೋಂಕು ಹೊಂದಿರುವ, ಕೊಳೆಯಾಗಿರುವ, ಒದ್ದೆಯಾಗಿರುವ ಇಯರ್‌ ಪ್ಲಗ್‌ ಬಳಸುವುದು
  • ಪ್ರತಿಜೈವಿಕ ಅಥವಾ ಸ್ಟಿರಾಯ್ಡ್‌ ಅಂಶಗಳನ್ನು ಹೊಂದಿರುವ ಇಯರ್‌ ಡ್ರಾಪ್‌ಗಳನ್ನು ಪದೇಪದೆ ಬಳಸುವುದು
  • ರೋಗ ನಿರೋಧಕ ಶಕ್ತಿ ಕಡಿಮೆಯಿರುವುದು
  • ಕಿವಿಯ ಸುತ್ತಲಿನ ಚರ್ಮದ ಮೇಲೆ ಎಕ್ಸಿಮಾ ಇರುವುದು

ಇಂಥ ಯಾವುದೇ ಕಾರಣಗಳಿದ್ದರೂ ಕಿವಿಯ ಸೋಂಕು ಎಳೆಯರನ್ನು ಕಾಡುವುದು ಹೆಚ್ಚುತ್ತದೆ. ಹಾಗಾಗಿ ಮಕ್ಕಳಲ್ಲಿ ಇಂಥ ಯಾವುದಾದರೂ ಕಾರಣಗಳಿವೆಯೇ ಎಂಬುದನ್ನು ಪಾಲಕರು ಗಮನಿಸುವುದು ಮುಖ್ಯ.

ಲಕ್ಷಣಗಳೇನು?: ಚಿಕ್ಕ ಮಕ್ಕಳು ತಮಗಾಗುವ ಕಷ್ಟವನ್ನು ಹೇಳಿಕೊಳ್ಳುವುದಕ್ಕೆ ಅಸಮರ್ಥ ರಾಗಿರುತ್ತಾರೆ. ಹಾಗಾಗಿ ಮಕ್ಕಳ ಅಳುವಿನ ಜೊತೆಗೆ ಕೆಲವು ದೈಹಿಕ ಲಕ್ಷಣಗಳನ್ನೂ ಹೆತ್ತವರು ಗಮ ನಿಸುವುದು ಮುಖ್ಯ. ಕಿವಿ ಎಳೆದುಕೊಳ್ಳುವುದು, ಕಿವಿಯೊಳಗೆ ಬೆರಳಿಟ್ಟು ತುರಿಸಿಕೊಳ್ಳುವುದು, ಕಿವಿ ಕೆಂಪಾ ಗುವುದು, ಕಿವಿನೋವಿನಿಂದ ರಚ್ಚೆ ಹಿಡಿಯುವುದು, ಜ್ವರ, ಹೇಳಿದ್ದು ಕೇಳಿಸದಿರುವುದು, ಕಿವಿ ಸೋರುವುದು, ಬಿಳಿ, ಹಳದಿ, ಕಂದು, ಹಸಿರು ಬಣ್ಣದ, ವಾಸನೆಯಿಂದ ಕೂಡಿದ ದ್ರವ ಕಿವಿಯಿಂದ ಒಸರುವುದು- ಇವೆಲ್ಲವೂ ಕಿವಿ ಸೋಂಕಿನ ಲಕ್ಷಣಗಳನ್ನು ಸೂಚಿಸುತ್ತವೆ. ಕಿವಿಯ ಸೋಂಕು ತನ್ನ ಷ್ಟಕ್ಕೇ ಕಡಿಮೆಯಾಗುವುದಿಲ್ಲ. ಇಂಥ ಸಂದರ್ಭದಲ್ಲಿ ವೈದ್ಯರನ್ನು ಕಾಣಲೇಬೇಕು, ಅಗತ್ಯ ಚಿಕಿತ್ಸೆಯನ್ನು ಕೊಡಿಸಲೇಬೇಕು.

ಇದನ್ನು ಓದಿ:Kidney Health: ಸಕ್ಕರೆ-ಉಪ್ಪು: ಕಿಡ್ನಿಗೆ ಯಾವುದು ಹಿತಕರ?

ತಡೆಯಬಹುದೇ?: ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಕಿವಿಯ ಸೋಂಕು ಪದೇಪದೆ ಮರುಕಳಿಸುವುದನ್ನು ತಡೆಯಲು ಸಾಧ್ಯವಿದೆ. ಮೊದಲಿಗೆ, ಕಿವಿಯ ಒಳಗೆ ತೇವ ನುಸುಳದಂತೆ, ಶೇಖರವಾಗದಂತೆ ಎಚ್ಚರಿಕೆ ವಹಿಸಿ. ಇದಕ್ಕಾಗಿ ಕಿವಿಯೊಳಗೆ ಹತ್ತಿ ಇರಿಸುವುದು, ಬಟ್ಟೆ ತುರುಕು ವುದು ಇತ್ಯಾದಿಗಳನ್ನು ಮಾಡಬೇಡಿ. ಬದಲಿಗೆ, ವೈದ್ಯರ ಸಲಹೆ ಪಡೆಯಿರಿ.

ಆಗಾಗ ಕಿವಿಯೊಳಗೆ ಕಡ್ಡಿ ಹಾಕಿ ಸ್ವಚ್ಛ ಮಾಡುವುದನ್ನು ನಿಲ್ಲಿಸಿ. ಕಿವಿ ತನ್ನಿಂತಾನೇ ಸ್ವಚ್ಛ ಗೊಳ್ಳುತ್ತದೆ. ಹಾಗೂ ಅಗತ್ಯ ಬಿದ್ದರೆ ವೈದ್ಯರ ನೆರವು ಪಡೆಯಿರಿ, ಬದಲಿಗೆ ಸ್ವಯಂವೈದ್ಯ ಮಾಡ ಬೇಡಿ. ಇದು ಉಪಕಾರಕ್ಕಿಂತ ಹಾನಿಯನ್ನೇ ಮಾಡುತ್ತದೆ. ಮಕ್ಕಳಿಗೆ ಹೇರ್‌ಸ್ಟ್ರೇ ಅಥವಾ ಡಿಯೋ ಡರೆಂಟ್‌ ಉಪಯೋಗಿಸಬೇಡಿ. ಮಕ್ಕಳು ಸಮೀಪದಲ್ಲಿದ್ದಾಗ ನೀವೂ ಅವುಗಳನ್ನು ಉಪಯೋಗಿ ಸಬೇಡಿ. ಇವು ಅಲರ್ಜಿಗೆ ಕಾರಣವಾಗಬಲ್ಲವು. ವೈದ್ಯರ ಸಲಹೆಯಿಲ್ಲದೆ ಯಾವುದೇ ಡ್ರಾಪ್ಸ್‌ಗಳನ್ನು ಕಿವಿಗೆ ಹಾಕಬೇಡಿ. ಅದರಲ್ಲೂ ಪ್ರತಿಜೈವಿಕ ಹನಿಗಳನ್ನು ಪದೇಪದೆ ಕಿವಿಗೆ ಹಾಕಿದರೆ ಸಮಸ್ಯೆ ಹೆಚ್ಚಾಗಬಹುದು.