ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manipal Hospital: ಕನಕಪುರ ಮಣಿಪಾಲ್ ಆಸ್ಪತ್ರೆ- ಉಚಿತ ಶಸ್ತ್ರಚಿಕಿತ್ಸೆಗೆ ಚಾಲನೆ

ಕನಕಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ, ಮಣಿಪಾಲ್ ಫೌಂಡೇಶನ್ ಸಹಯೋಗದೊಂದಿಗೆ ಹೊಸ ಆಸ್ಪತ್ರೆಯ ಘಟಕದ ಸಮುದಾಯ ಉನ್ನತೀಕರಣದ ಭಾಗವಾಗಿ, ವಸತಿ ಅಪಾರ್ಟ್‌ಮೆಂಟ್‌ಗಳ ಕಾರ್ಯಾಚರಣೆಯ 30 ಸಿಬ್ಬಂದಿಗಳಿಗೆ 10 ತರನಾದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡುವುದಾಗಿ ಘೋಷಿಸಿದೆ. ಈ ಉಚಿತ ಶಸ್ತ್ರಚಿಕಿತ್ಸೆಗಳು 2025 ರ‌ ಇಡೀ ವರ್ಷ ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ.

ಕನಕಪುರ ಮಣಿಪಾಲ ಆಸ್ವತ್ರೆ

ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು, ಮಣಿಪಾಲ್ ಫೌಂಡೇಶನ್ ಸಹಯೋಗದೊಂದಿಗೆ ಹೊಸ ಆಸ್ಪತ್ರೆಯ ಘಟಕದ ಸಮುದಾಯ ಉನ್ನತೀಕರಣ ಉಪಕ್ರಮದ ಭಾಗವಾಗಿ, 30 ವಸತಿ ಅಪಾರ್ಟ್‌ಮೆಂಟ್‌ಗಳ ಕಾರ್ಯಾಚರಣೆಯ ಸಿಬ್ಬಂದಿಗೆ (ಉದ್ಯಾನವನ‌ ನಿರ್ವಹಣಾ ಸಿಬ್ಬಂದಿಗಳು, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ಭದ್ರತಾ ಸಿಬ್ಬಂದಿ, ಮನೆಗೆಲಸದವರು, ಮತ್ತು ಸ್ವಚ್ಛತಾ ಕಾರ್ಯಕರ್ತರು ಸೇರಿದಂತೆ) 10 ಉಚಿತ ಶಸ್ತ್ರಚಿಕಿತ್ಸೆಗಳನ್ನು ಘೋಷಿಸಿದೆ. ಈ ಉಚಿತ ಶಸ್ತ್ರಚಿಕಿತ್ಸೆಗಳು 2025 ರ‌ ಇಡೀ ವರ್ಷ ಲಭ್ಯವಿರಲಿವೆ. (Manipal Hospital) ಮಣಿಪಾಲ್ ಫೌಂಡೇಶನ್ ಸಹಯೋಗದೊಂದಿಗೆ ಹೊಸ ಆಸ್ಪತ್ರೆಯ ಘಟಕದ ಸಮುದಾಯ ಉನ್ನತೀಕರಣದ ಭಾಗವಾಗಿ, ವಸತಿ ಅಪಾರ್ಟ್‌ಮೆಂಟ್‌ಗಳ ಕಾರ್ಯಾಚರಣೆಯ 30 ಸಿಬ್ಬಂದಿಗಳಿಗೆ (ಉದ್ಯಾನವನ‌ ನಿರ್ವಹಣಾ ಸಿಬ್ಬಂದಿಗಳು, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ಭದ್ರತಾ ಸಿಬ್ಬಂದಿ, ಮನೆಗೆಲಸ ದವರು, ಮತ್ತು ಸ್ವಚ್ಛತಾ ಕಾರ್ಯಕರ್ತರು ಸೇರಿದಂತೆ) 10 ತರನಾದ ಶಸ್ತ್ರಚಿಕಿತ್ಸೆಗಳನ್ನು ಉಚಿತ ವಾಗಿ ಮಾಡುವುದಾಗಿ ಘೋಷಿಸಿದೆ.

ಪ್ರೆಸ್ಟೀಜ್ ಫಾಲ್ಕನ್ ಸಿಟಿ, ಶೋಭಾ ಫಾರೆಸ್ಟ್ ವ್ಯೂ, ಶೋಭಾ ಫಾರೆಸ್ಟ್ ಎಡ್ಜ್, ಶೋಭಾ ಅರೇನಾ, ಮಂತ್ರಿ ಸೆರೆನಿಟಿ, ಮಂತ್ರಿ ಟ್ರ್ಯಾಂಕುಯಿಲ್, ಎಲ್&ಟಿ ಸೌತ್ ಸಿಟಿ, ಟಾಟಾ ಪ್ರಾಮಂಟ್, ಬ್ರಿಗೇಡ್ ಮೆಡೋಸ್, ಪೂರ್ವ ಹೈಲ್ಯಾಂಡ್, ಕಾಂಕಾರ್ಡ್ ನಪಾ ವ್ಯಾಲಿ, ಸೆಂಚುರಿ ಇಂಡಸ್, ಸತ್ವ ಚಾರ್ಮಿಂಗ್ ಮಿಸ್ಟ್, ವಿಸ್ತಾರ, ಗೋಕುಲಂ, ಶ್ರೀ ವರ ವಿವಂತ, ರೋಹಿತ್ ಆಕೃತಿ, ಎಂಕೆಆರ್ ಅಸೋಸಿಯೇಷನ್, ಸಿಎಂಕೆಆರ್ ಅಸೋಸಿಯೇಷನ್, ಕನಕಪುರ ಚೈನ್ ಮೇಕರ್ಸ್ ಅಸೋಸಿ ಯೇಷನ್ ಮತ್ತು ವ್ಯಾಲ್ಯೂ ಪ್ಲಸ್ ಸೇರಿದಂತೆ ಸುಮಾರು 30 ಅಪಾರ್ಟ್ಮೆಂಟ್ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈ ಉಪಕ್ರಮದ ಉಚಿತ ಶಸ್ತ್ರ ಚಿಕಿತ್ಸೆಗೆಕ್ಕೆ ಸಹಕರಿಸಿದ್ದು, ತಮ್ಮ ಸಮುದಾಯ ಗಳಲ್ಲಿನ ಅಗತ್ಯವುಳ್ಳ ವ್ಯಕ್ತಿಗಳ ಹೆಸರನ್ನು ಶಿಫಾರಸು ಮಾಡಿದ್ದಾರೆ. ಈ ಉಚಿತ ಶಸ್ತ್ರಚಿಕಿತ್ಸೆಗಳು 2025 ರ‌ ಇಡೀ ವರ್ಷ ಲಭ್ಯವಿರಲಿವೆ ಎಂದು ಪ್ರಕಟನೆ ತಿಳಿಸಿದೆ.

ಇದನ್ನು ಓದಿ:Health Tips: ರುಚಿ, ಆರೋಗ್ಯದ ಗಣಿ ಪಾಲಕ್‌ ಸೊಪ್ಪು!

ಮಣಿಪಾಲ್ ಆಸ್ಪತ್ರೆಗಳ ಸಮೂಹದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಶ್ರೀ ಕಾರ್ತಿಕ್ ರಾಜಗೋಪಾಲ್ ಮಾತನಾಡಿ, ಕನಕಪುರ ರಸ್ತೆಯಲ್ಲಿ ಆರಂಭವಾದ ಈ ವಿಶಿಷ್ಟ ಉಪಕ್ರಮವು ನಮ್ಮ ನೆರೆಹೊರೆಯ ಸಮುದಾಯಗಳಿಗೆ ಅಗಾಧ ಸೇವೆ‌ ನೀಡಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ 10 ಉಚಿತ ಶಸ್ತ್ರಚಿಕಿತ್ಸೆಗಳನ್ನು ಒದಗಿಸಲಿದ್ದೇವೆ. ಈ ಮೂಲಕ ಈ ಆಸ್ಪತ್ರೆಯಲ್ಲಿ ಉತ್ತಮ ಗುಣ ಮಟ್ಟದ ಚಿಕಿತ್ಸಾ ವ್ಯವಸ್ಥೆ, ಉತ್ತಮ ಸೇವೆ ಇಲ್ಲಿ ಸಿಗಲಿದೆ. ನಮ್ಮೆಲ್ಲ ನೆರೆಹೊರೆಯ ಸಮುದಾಯಗಳ ನಂಬಿಕೆಯನ್ನು ಗೌರವಿಸುವುದು ನಮ್ಮ ಧ್ಯೇಯವಾಗಿದೆ ಎಂದು ಅವರು ಹೇಳಿದರು.

ಮಣಿಪಾಲ್ ಆಸ್ಪತ್ರೆಗಳ ಸಮೂಹದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಶ್ರೀ ಕಾರ್ತಿಕ್ ರಾಜ ಗೋಪಾಲ್ ಹಾಗೂ ಮಣಿಪಾಲ್ ಆಸ್ಪತ್ರೆ ಬೆಂಗಳೂರು, ಮೈಸೂರು ಮತ್ತು ಸೇಲಂ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ದೀಪಕ್ ವೇಣುಗೋಪಾಲನ್ ಅವರು ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.