Jayam Ravi: ಜಯಂ ರವಿ ಈಗ ರವಿ ಮೋಹನ್; ಹೆಸರು ಬದಲಿಸಿಕೊಂಡ ತಮಿಳು ನಟ
Jayam Ravi: ಕಾಲಿವುಡ್ ನಟ ಜಯಂ ರವಿ ಇನ್ನುಮುಂದೆ ರವಿ ಮೋಹನ್ ಆಗಿ ಗುರುತಿಸಲ್ಪಡಲಿದ್ದಾರೆ. ಹೌದು, ಅವರು ಹೆಸರು ಬದಲಾಯಿಸಿಕೊಂಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜತೆಗೆ 'ರವಿ ಮೋಹನ್ ಸ್ಟುಡಿಯೋಸ್' ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ.
ಚೆನ್ನೈ, ಜ. 15, 2025: ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ತಮಿಳು ನಟ ಜಯಂ ರವಿ (Jayam Ravi) ಇದೀಗ ಹೆಸರು ಬದಲಿಸಿಕೊಂಡಿದ್ದಾರೆ. ಜಯಂ ರವಿ ಇನ್ನುಮುಂದೆ ರವಿ ಮೋಹನ್ (Ravi mohan) ಆಗಿ ಗುರುತಿಸಲ್ಪಡಲಿದ್ದಾರೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುತ್ತಾ ತಾವು ಇಲ್ಲಿವರೆಗೆ ಜಯಂ ರವಿಗೆ ನೀಡಿದ ಬೆಂಬಲವನ್ನು ರವಿ ಮೋಹನ್ ಹೆಸರಿಗೂ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರೊಡಕ್ಷನ್ ಹೌಸ್ ಶುರು
ಜಯಂ ರವಿ, ರವಿ ಮೋಹನ್ ಆಗಿ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಹೊಸ ಪಯಣ ಕೂಡ ಆರಂಭಿಸಿದ್ದಾರೆ. 'ರವಿ ಮೋಹನ್ ಸ್ಟುಡಿಯೋಸ್' ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಒಳ್ಳೊಳ್ಳೆ ಸಿನಿಮಾಗಳನ್ನು, ನಿರ್ದೇಶಕರು ಹಾಗೂ ಹೊಸ ನಾಯಕರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುವುದಾಗಿ ರವಿ ಮೋಹನ್ ಘೋಷಣೆ ಮಾಡಿದ್ದಾರೆ.
பழையன கழிதலும், புதியன புகுதலும் 🌞#HappyPongal 🌾#Ravi#RaviMohan#RaviMohanStudios#RaviMohanFansFoundation pic.twitter.com/K8JEWuMYW8
— Ravi Mohan (@iam_RaviMohan) January 13, 2025
ಫ್ಯಾನ್ಸ್ ಕ್ಲಬ್ ಫೌಂಡೇಷನ್ ಆಗಿ ಬದಲಾವಣೆ
ರವಿ ಮೋಹನ್ ತಮ್ಮನ್ನು ಇಲ್ಲಿವರೆಗೆ ಬೆಳೆಸಿದ, ಬೆಂಬಲಿಸಿ ಅಭಿಮಾನಿಗಳಿಗೆ ಏನಾದರೂ ಮರಳಿ ಕೊಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕಾಗಿ ರವಿ ಮೋಹನ್ ಫ್ಯಾನ್ಸ್ ಕ್ಲಬ್‌ಗಳು ರವಿ ಮೋಹನ್ ಫ್ಯಾನ್ಸ್ ಫೌಂಡೇಷನ್ ಎಂಬ ರಚನಾತ್ಮಕ ಸಂಸ್ಥೆಯಾಗಿ ಪರಿವರ್ತನೆಯಾಗಿವೆ. ಈ ಫೌಂಡೇಷನ್ ಮೂಲಕ ಅಗತ್ಯವಿರುವ ಎಲ್ಲರಿಗೂ ಸಹಾಯ ಮಾಡುವುದಾಗಿ ರವಿ ಮೋಹನ್ ತಿಳಿಸಿದ್ದಾರೆ.
ರವಿ ಮೋಹನ್ ನಾಯಕರಾಗಿ ಕಾಣಿಸಿಕೊಂಡ ಹೊಸ ತಮಿಳು ಚಿತ್ರ ʼಕಾದಲಿಕ್ಕ ನೇರಮಿಲ್ಲೈʼ ಸಂಕ್ರಾಂತಿ ಪ್ರಯುಕ್ತ ಜ. 14ರಂದು ತೆರೆಕಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಮೊದಲ ಬಾರಿ ನಿತ್ಯಾ ಮೆನನ್ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ನಟ ಸರಿಗಮ ವಿಜಿ ಇನ್ನಿಲ್ಲ