ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Shabarish Shetty: ನಾನು ಸತ್ತರೆ ಅದಕ್ಕೆ ನಂದ ಕಿಶೋರ್, ಸಾರಾ ಗೋವಿಂದು ಕಾರಣ: ನಟ ಶಬರೀಶ್ ಶೆಟ್ಟಿ ಕಣ್ಣೀರು

Fraud Case: ನಿರ್ದೇಶಕ ನಂದಕಿಶೋರ್ ಮೇಲೆ ವಂಚನೆ ಆರೋಪ ಮಾಡಿದ್ದ ನಟ ಶಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ಅದರೆ, ಸಮಸ್ಯೆ ಪರಿಹರಿಸುವುದಾಗಿ ಸಾರಾ ಗೋವಿಂದು ಅವರು ಹೇಳಿ ಸುಮ್ಮನಾಗಿದ್ದಾರೆ ಎಂದು ಶಬರೀಶ್ ಶೆಟ್ಟಿ ನೋವು ತೋಡಿಕೊಂಡಿದ್ದಾರೆ.

ಬೆಂಗಳೂರು: ಸ್ಯಾಂಡಲ್‍ವುಡ್‍ ನಿರ್ದೇಶಕ ನಂದ ಕಿಶೋರ್ ವಿರುದ್ಧ ವಂಚನೆ ಆರೋಪ ಮಾಡಿದ್ದ ಯುವನಟ ಶಬರೀಶ್ (Actor Shabarish Shetty) ಶೆಟ್ಟಿ ಇದೀಗ, ಆಘಾತಕಾರಿ ವಿಡಿಯೋ ಹರಿಬಿಟ್ಟಿದ್ದಾರೆ. ನಾನೇನಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೇ ನೇರ ಹೊಣೆ ನಿರ್ದೇಶಕ ನಂದ ಕಿಶೋರ್ ಮತ್ತು ಸಾರಾ ಗೋವಿಂದು ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ನಿರ್ದೇಶಕ ನಂದಕಿಶೋರ್ ಮೇಲೆ ವಂಚನೆ ಆರೋಪ ಮಾಡಿದ್ದ ನಟ ಶಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ಬಳಿಕ ಫಿಲ್ಮ್ ಚೇಂಬರ್ ವತಿಯಿಂದ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಯುವನಟ ಶಬರೀಶ್‍ಗೆ ಕರೆಮಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ, ದುಡಕಬೇಡ ಎಂದಿದ್ದರಂತೆ. ಸಾರಾ ಗೋವಿಂದು ಕೊಟ್ಟ ಸಮಯ ಮುಗಿದ ಬಳಿಕ ಶಬರೀಶ್ ಕರೆ ಮಾಡಿ ವಿಚಾರಿಸಿದಾಗ, ಏನ್ ಬೇಕಾದ್ರೂ ಮಾಡಿಕೊಳ್ಳಿ ಎಂಬ ಉತ್ತರ ಬಂದಿದ್ದಕ್ಕೆ ನೊಂದ ಯುವನಟ, ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ.

ನಿರ್ದೇಶಕ ನಂದ ಕಿಶೋರ್ ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ ಕೇಳಿಬಂದಿತ್ತು. ಸಾಲಪಡೆದ ನಂದ ಕಿಶೋರ್ ಸಂಪರ್ಕ ಮಾಡಲು ಆಗದೆ ಅಸಹಾಯಕರಾಗಿದ್ದೇನೆ ಎಂದು ಶಬರೀಶ್‍ ಹೇಳಿದ್ದರು. ಅವರಿಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಸಂಧಾನ ಮಾಡೋದಾಗಿ ಹೇಳಿದ್ದರು ಎನ್ನಲಾಗಿದೆ. ಸಾರಾ ಗೋವಿಂದ್ ಮಾತು ಕೇಳಿ ಪೊಲೀಸರಿಗೆ ದೂರು ಕೊಡುವ ನಿರ್ಧಾರ ಕೈ ಬಿಟ್ಟಿದ್ದೆ. 2 ತಿಂಗಳಾದರೂ ಸಂಧಾನ ಆಗದೇ ಇದ್ದಾಗ, ಮತ್ತೆ ಸಾರಾ ಗೋವಿಂದುಗೆ ಕರೆ ಮಾಡಿದ್ದೆ. ಈ ವೇಳೆ ನಿನ್ನ ಕೈಯಿಂದ ಏನ್ ಮಾಡೋಕೆ ಆಗತ್ತೋ ಮಾಡ್ಕೋ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Actress Shilpa Shetty: 60 ಕೋಟಿ ವಂಚನೆ-ರೆಸ್ಟೋರೆಂಟ್‌ ಮುಚ್ಚಿದ ಶಿಲ್ಪಾ ಶೆಟ್ಟಿ

ನಾನೇನಾದರೂ ಸೂಸೈಡ್ ಮಾಡಿಕೊಂಡರೆ ಅದಕ್ಕೇ ನೇರ ಹೊಣೆ ನಂದಕಿಶೋರ್ ಮತ್ತು ಸಾರಾ ಗೋವಿಂದು ಎಂದು ವಿಡಿಯೋದಲ್ಲಿ ಶಬರೀಶ್ ಶೆಟ್ಟಿ ಹೇಳಿದ್ದಾರೆ.

ಏನಿದು ಪ್ರಕರಣ?

ನಿರ್ದೇಶಕ ನಂದ ಕಿಶೋರ್ 22 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನಟ ಶಬರೀಶ್ ಶೆಟ್ಟಿ ಅವರು ಇತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ‘ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂದ ಕಿಶೋರ್ ನನ್ನ ಬಳಿ ಹಣ ಪಡೆದರು. ಆದರೆ ನನಗೆ ಮೋಸ ಆಗಿದೆ. ಚಿತ್ರರಂಗ ಒಂದು ಕುಟುಂಬದಂತೆ. ಹಾಗಾಗಿ ಕುಟುಂಬದ ಒಳಗೆ ಮೊದಲು ಸಮಸ್ಯೆ ಬಗೆಹರಿಸಿಕೊಳ್ಳೋಣ ಅಂತ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ. ಇಲ್ಲಿ ನ್ಯಾಯ ಸಿಗದೇ ಇದ್ದರೆ ಕಾನೂನಿನ ಮೊರೆ ಹೋಗುತ್ತೇನೆ’ ಎಂದು ಶಬರೀಶ್ ಶೆಟ್ಟಿ ಹೇಳಿದ್ದರು.