ಮೆಟ್ರೋ ಟಿಕೆಟ್ ಬೆಲೆ 10 ರೂ. ಇಳಿಕೆ, ಇಂದಿನಿಂದಲೇ ಜಾರಿ
ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಕನಿಷ್ಠ ಬೆಲೆ 10 ರೂ ಹಾಗೂ ಗರಿಷ್ಠ ಬೆಲೆ 90 ರೂ ಹಾಗೆಯೇ ಇರಲಿದೆ. ಆದರೆ ಕೆಲವು ದೂರಗಳಿಗೆ ಏರಿಸಿದ್ದ ಬೆಲೆಯಲ್ಲಿ ಗರಿಷ್ಠ 10 ರೂ ಇಳಿಸಲಾಗಿದೆ. ಇಂದಿನಿಂದ ಈ ದರ ಇಳಿಕೆ ಕ್ರಮ ಜಾರಿಗೆ ಬರಲಿದೆ.
Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್ನಲ್ಲಿ ನಾನಾ ಬಗೆಯ ಟ್ರೆಂಡಿ ಸೀರೆಗಳು ಯುವತಿಯರನ್ನು ಸೆಳೆದಿವೆ. ಈ ಬಾರಿ ಸಾದಾ ರೆಡ್ ಸೀರೆಗಳು ಮಾತ್ರವಲ್ಲ, ಡಿಸೈನರ್ ಸೀರೆಗಳು ಮಾನಿನಿಯರನ್ನು ಆಕರ್ಷಿಸತೊಡಗಿವೆ. ಯಾವ್ಯಾವ ಬಗೆಯವು ಹೆಚ್ಚು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್ ಚಶ್ಮಿ ವಿವರಿಸಿದ್ದಾರೆ.
Valentine’s Week Hairstyle Trend 2025: ವ್ಯಾಲೆಂಟೈನ್ಸ್ ವೀಕ್ನ ಈ ಸೀಸನ್ನಲ್ಲಿ, ಬ್ಯೂಟಿ ಲೋಕದಲ್ಲಿ ನಾನಾ ಶೈಲಿಯ ಹೇರ್ ಸ್ಟೈಲ್ಗಳು ಡಿಕ್ಲೇರ್ ಆಗಿದ್ದು, ಅವುಗಳಲ್ಲಿ5 ಶೈಲಿಯ ಬ್ಯೂಟಿಫುಲ್ ಕೇಶವಿನ್ಯಾಸಗಳು ಟ್ರೆಂಡಿಯಾಗಿದೆ. ಹಾಗಾದಲ್ಲಿ, ಅವು ಯಾವುವು? ಸ್ಟೈಲಿಂಗ್ ಹೇಗೆ? ಈ ಕುರಿತಂತೆ ಹೇರ್ ಸ್ಟೈಲಿಸ್ಟ್ಗಳು ಟಿಪ್ಸ್ ನೀಡುವುದರ ಮೂಲಕ ಸಿಂಪಲ್ಲಾಗಿ ವಿವರಿಸಿದ್ದಾರೆ.
ಕರ್ನಾಟಕದಲ್ಲಿ ಕೃಷಿ ಮತ್ತು ಕೈಗಾರಿಕೆ ಬೆಳವಣಿಗೆ ಎರಡನ್ನೂ ಪರಿಗಣಿಸಬೇಕಾಗಿದೆ. ರಾಜ್ಯದಲ್ಲಿ ಆಹಾರ ಸಂಸ್ಕರಣೆ, ಸೇವನೆಗೆ ಸಿದ್ಧವಾಗಿರುವಉದ್ಯಮ ಬೆಳೆಸಲು ಹೇರಳ ಅವಕಾಶಗಳಿವೆ. ವಿದೇಶಗಳ ಜನರು ನಮ್ಮಿಂದ ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಬಯಸುತ್ತಿದ್ದಾರೆ. ಯುವಜನರಿಗೆ ನಾವು ಕೌಶಲ್ಯ ಕೊಡುವತ್ತ ಒತ್ತು ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬೆಂಗಳೂರು ನಗರದ 66/11 ಕೆವಿ ಎಲಿಟಾ ಪ್ರೋಮೊನೇಡ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಫೆ. 14ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
Max Movie: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ಮ್ಯಾಕ್ಸ್ ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ ಮ್ಯಾಕ್ಸ್. ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ಗೆ ರೆಡಿಯಾಗಿರುವ ಮ್ಯಾಕ್ಸ್ ಚಿತ್ರ, ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.
Daali Dhananjaya: ಧನಂಜಯ ಅವರು ಸರಳವಾದ ಪೋಸ್ಟ್ ಕಾರ್ಡ್ ಮಾದರಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಸ್ವತಃ ವಧು-ವರರು ಆಪ್ತವಾಗಿ ಪತ್ರ ಬರೆದಿರುವ ರೀತಿಯ ಸಾಲುಗಳು ಇದ್ದಿದ್ದರಿಂದ ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆ ಭಾರತೀಯ ಅಂಚೆ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಡಾಲಿ-ಧನ್ಯತಾ ವಿವಾಹಕ್ಕೆ ವಿಶೇಷ 12 ಸ್ಟ್ಯಾಂಪ್ ನೀಡಿ ಶುಭಾಶಯ ಕೋರಿದೆ.
ಸಮಯ ಉಳಿತಾಯದಿಂದ ಮಧ್ಯಮ ವರ್ಗದ ಜನರು ಕೆಲಸಕ್ಕೆ ಹೋಗಲು ಕಾರು, ಬೈಕ್ ಬಿಟ್ಟು ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದರು. ಪ್ರತಿದಿನ ಮೆಟ್ರೋದಲ್ಲಿ ಅಂದಾಜು 8ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದ್ರೆ ದರ ಏರಿಕೆ ಆದ ಮೇಲೆ ಪ್ರತಿದಿನ 6 ರಿಂದ 7 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Monk the Young Movie: ನಟ ಸರೋವರ್ ಅಭಿನಯದ ನಿರ್ದೇಶಕ ಮಾಸ್ಚಿತ್ ಸೂರ್ಯ ನಿರ್ದೇಶನದ ʼಮಾಂಕ್ ದಿ ಯಂಗ್ʼ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ʼಕೃಷ್ಣʼ ಅಜಯ್ ರಾವ್, ನಿರ್ದೇಶಕ ಸಿಂಪಲ್ ಸುನಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ನಟ ಬಬ್ಲು ಪೃಥ್ವಿರಾಜ್, ನಟ ನಿಶ್ಚಿತ್ ಸೇರಿದಂತೆ ಮುಂತಾದ ಗಣ್ಯರು ಟ್ರೇಲರ್ ಅನಾವರಣ ಮಾಡಿದರು.
ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕುಶಲ ಉದ್ಯೋಗಿಗಳ ಕೊರತೆ ಇದೆ. ಇದನ್ನು ಭಾರತ ಅವಕಾಶವಾಗಿ ಬಳಸಿಕೊಂಡು ಆ ಕೊರತೆ ನೀಗಿಸಬೇಕು. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುವುದು ಮಾತ್ರವಲ್ಲದೆ, ಅತ್ಯಂತ ನಿರ್ಣಾಯಕ ತಂತ್ರಜ್ಞಾನದಲ್ಲಿ ದೇಶ ಮೇಲುಗೈ ಸಾಧಿಸಲಿದೆ ಎಂದು ಸೆಮಿಕಂಡಕ್ಟರ್ ಪ್ರಾಡಕ್ಟ್ಸ್ ಗ್ರೂಪ್ (ಎಸ್ಪಿಜಿ), ಏಷ್ಯಾದ ಭಾರತ ಅಧ್ಯಕ್ಷ ಅವಿನಾಶ್ ಅವುಲಾ ತಿಳಿಸಿದ್ದಾರೆ.
Invest Karnataka: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್-25)ದಲ್ಲಿ 'ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಜಾಗತಿಕ ಸವಾಲುಗಳು' ಗೋಷ್ಠಿಯಲ್ಲಿ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮಾತನಾಡಿದ್ದಾರೆ. ಅಭಿವೃದ್ಧಿಯ ಹಂಚಿಕೆ ಮತ್ತು ದಕ್ಷ ಆಡಳಿತ ದೃಷ್ಟಿಯಿಂದ ರಾಜ್ಯಗಳ ವಿಭಜನೆ ಅತ್ಯಗತ್ಯ.
Microfinance ordinance: ಸುಗ್ರೀವಾಜ್ಞೆಯು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು, ಸಂಸ್ಥೆಗಳು ಅಥವಾ ಲೇವಾದೇವಿದಾರನು ನೀಡುವ ದುಬಾರಿ ಬಡ್ಡಿ ದರ ಮೂಲಕ ಬಲವಂತದ ವಸೂಲಾತಿ ವಿಧಾನಗಳಿಂದ ಬಡ ವರ್ಗದ ಜನರನ್ನು ರಕ್ಷಿಸಲು ನೆರವಾಗಲಿದೆ. ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶದಲ್ಲಿ ಏನೆಲ್ಲಾ ಅಂಶಗಳಿವೆ ಎಂಬ ಕುರಿತ ಮಾಹಿತಿ ಇಲ್ಲಿದೆ.